ಲಿಂಗಸೂಗೂರು ವರದಿ ಸೆಪ್ಟೆಂಬರ್ 06
ದಿನಾಂಕ ಸೆಪ್ಟೆಂಬರ್ 05-2024ರಂದು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕಪಗಲ್ ಗ್ರಾಮದ ಬಳಿ ಲೋಯೋಲಾ ವಿದ್ಯಾ ಸಂಸ್ಥೆಯ ಖಾಸಗಿ ಬಸ್ ಹಾಗೂ ಸರ್ಕಾರಿ ಕೆ ಎಸ್ ಆರ್ ಟಿ ಸಿ ಸಾರಿಗೆ ಬಸ್ ನಡುವೆ ನಡೆದ ಮುಖಾಮುಖಿ ಡಿಕ್ಕಿಯಿಂದ ಈಗಾಗಲೇ ಇಬ್ಬರು ಪುಟ್ಟ ಕಂದಮ್ಮಗಳ ಪ್ರಾಣಪಕ್ಷಿ ಹಾರಿ ಹೋಗಿ, ಇನ್ನೂ ಹಲವು ಬಾಲಕರು ಸಾವು ನೋವಿನ ಮದ್ಯೆ ಸಿಲುಕಿ ಹೆಚ್ಚಿನ ಚಿಕಿತ್ಸೆಗೆ ರಾಯಚೂರು ರಿಮ್ಸ್ ಸೇರಿದಂತೆ ವಿವಿಧಡೆ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಘಟನೆಗೆ ಮುಖ್ಯ ಕಾರಣ ರಸ್ತೆಯ ಮೇಲಿರುವ ಗುಂಡಿಯನ್ನು ತಪ್ಪಿಸಲು ಹೋದ ಸರ್ಕಾರಿ ಬಸ್ಸಿನ ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಇತ್ತೀಚೆಗೆ ನಾನ್ ಸ್ಟಾಪ್ ಬಸ್ಸುಗಳು ತಮ್ಮ ವೇಗಮಿತಿ ಮೀರಿ ರಸ್ತೆ ಮೇಲೆ ಚಲಿಸಿ ಅಮಾಯಕರ ಜೀವ ತೆಗೆಯುತ್ತಿವೆ. ಆದ್ದರಿಂದ ಇಂತಹ ಬೇಜವಾಬ್ದಾರಿ ಚಾಲಕರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.ಮತ್ತು ಮುಖ್ಯ ರಸ್ತೆಯ ಮೇಲಿನ ಗುಂಡಿಯನ್ನು ಮುಚ್ಚದೆ ಅರೆಬರೆ ರಸ್ತೆ ನಿರ್ಮಾಣ ಮಾಡಿರುವುದು ಕೂಡ ಈ ಘಟನೆಗೆ ಕಾರಣ ಎನ್ನುವ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಕೆ ಆರ್ ಐ ಡಿ ಎಲ್ ಇಲಾಖೆಯ ಅಧಿಕಾರಿಗಳನ್ನು ಕೂಡಲೇ ಅಮಾನತು ಮಾಡಬೇಕು.
ಮತ್ತು ಪುಟ್ಟ ಕಂದಮ್ಮಗಳ ಜೀವಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಸರ್ಕಾರ ಸಾಕಷ್ಟು ನೆರವು ನೀಡಿ ಅವರಿಗೆ ಆಸರೆಯಾಗಬೇಕು, ಹೆಚ್ಚಿನ ಚಿಕಿತ್ಸೆಗೆ ದಾಖಲಾಗಿರುವ ಬಾಲಕರ ಸಂಪೂರ್ಣ ವೆಚ್ಚವನ್ನು ಸರ್ಕಾರ ಬರಿಸಿ ಮುಂದೆಂದೂ ಇಂತಹ ಘಟನೆಗಳು ಆಗದಂತೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಸಮಿತಿ ಲಿಂಗಸಗೂರು ವತಿಯಿಂದ ಸಹಾಯಕ ಆಯುಕ್ತರು ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಶಿಕುಮಾರ್.ಕೆ.ತಾಲೂಕು ಸಂಚಾಲಕರು
ಅಮರೇಶ.ಹೆಚ್.ಆನೆಹೊಸೂರು ದಲಿತ ಯುವ ಮುಖಂಡರು ಸಂತೋಷ್ ಬೆಂಡೋಣಿ
ಯುವ ಮುಖಂಡರು ಸುರೇಶ್ ಕೆಸರಹಟ್ಟಿ
ದಲಿತ ಯುವ ಮುಖಂಡರು ಇನ್ನಿತರರು ಇದ್ದರು.
Be the first to comment