ರಾಜ್ಯ ಸುದ್ದಿಗಳು
ಉಡುಪಿ ಜಿಲ್ಲೆ ದಿನದಿಂದ ದಿನಕ್ಕೆ ಸುದಾರಣೆಗೊಳ್ಳುತ್ತಿದ್ದು, ಜನಸಂಖ್ಯೆ ಹೆಚ್ಚುತ್ತಿದೆ,ರಸ್ತೆಯಲ್ಲಿನ ವಾಹನ ಸಂಚಾರವೂ ಹೆಚ್ಚಿದೆ.ಆದರೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕಿದ್ದ ಪೋಲಿಸ್ ಇಲಾಖೆ ಸಂಚಾರಕ್ಕೆ ಸಂಚಕಾರ ತರುತ್ತಿದೆ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಇತ್ತಿಚೆಗೆ ಹೆಚ್ಚಾಗಿ ಕೇಳಿಬರುತ್ತಿದೆ.ರಕ್ಷಣೆ ಕೊಡಬೇಕಾದ ಪೋಲೀಸ್ ಇಲಾಖೆ ಸುಲಿಗೆಗೆ ಇಳಿದಿದೆ ಎನ್ನುವುದು ವಾಹನ ಸವಾರರ ಆರೋಪ.ಹೈವೆ ಪಟ್ರೋಲ್ ಪೋಲಿಸರು,ವಾಹನ ಸವಾರರ ಮೇಲೆ ದಬ್ಬಾಳಿಕೆ ತೋರಿ,ಕಿರಿಕಿರಿ ಮಾಡುವ ವಿಡಿಯೋವೊಂದು ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ಆದರೆ ಪೋಲೀಸ್ ಇಲಾಖೆ ಎಚ್ಚೆತ್ತುಕೊಳ್ಳದೇ ಇಲಾಖೆಯವರಿಗೆ ಸಾತ್ ಕೊಡುತ್ತಿರುವಂತೆ ತೋರುತ್ತಿದೆ.
ಇದಕ್ಕೆ ಇಂಬು ನೀಡುವಂತೆ ಇಂದು ಉಡುಪಿ ಕಟಪಾಡಿಯಲ್ಲಿ ಬೆಳಗಿನ ಜಾವ ಪೋಲಿಸರು ವಾಹನ ಸವಾರರಿಂದ ಸುಲಿಗೆ ಮಾಡುತ್ತಿರುವಂತೆ ಕಂಡು ಬರುತ್ತಿತ್ತು.ದಾಖಲೆಗಳನ್ನು ಪರಿಶಿಲಿಸುವ ನೆಪದಲ್ಲಿ ವಾಹನಗಳನ್ನು ತಡೆದು ನಿಲ್ಲಿಸಲಾಗುತ್ತಿತ್ತು.ವಾಹನ ಸವಾರರು ಸಂಭಂದಿಸಿದ ದಾಖಲೆಯನ್ನು ತೋರಿಸಿದ ನಂತರ ಸಣ್ಣ ತಪ್ಪೆನಾದರು ಸಿಗುತ್ತವೆಯೆಂದು ಗಾಡಿರನ್ನು ನೋಡುತ್ತಾರೆ.ಅಲ್ಲಿಯೂ ಎನೂ ಸಿಗದಿದ್ದಾಗ 100,200 ರೂಪಾಯಿಗಳನ್ನು ಕೇಳುತ್ತಿದ್ದಾರೆ ಎನ್ನಲಾಗುತ್ತಿದೆ.ಇಲ್ಲವಾದರೆ ಸಕಾರಣವಿಲ್ಲದೆ ಕುಂಟುನೆಪವೊಡ್ಡಿ ದಂಡ ವಸೂಲಿ ಮಾಡುತ್ತಾರೆ ಎನ್ನುವ ಆರೋಪ ಇದೆ.ಅದರಲ್ಲಿಯೂ ಹೊರ ಜಿಲ್ಲೆ, ಹೊರ ರಾಜ್ಯದ ವಾಹಗಳಿಂದ ಬೇಕಾಬಿಟ್ಟಿ ವಸೂಲಿ ನಡೆದಿದೆ ಎನ್ನುವುದು ವಾಹನ ಸವಾರರ ಅಳಲಾಗಿದೆ.ರಸ್ತೆಯಲ್ಲಿ ಹೈವೆ ಪಟ್ರೋಲ್ ವಾಹನದಲ್ಲಿ ಹೋಂಗಾರ್ಡ್ ಗಳೆ ಇರುವುದರಿಂದ ಇವರು ಹೇಳಿದ್ದೇ ಅಧಿಕಾರಿಗಳು ಕೇಳುತ್ತಾರೆಯೇ?ಎಂದು ಸಾರ್ವಜನಿಕರು ಯೋಚಿಸುವಂತಾಗಿದೆ.ತಮಗೆ ಬೇಕಾದವರನ್ನು ದಾಖಲೆ ಸರಿ ಇಲ್ಲದಿದ್ದರೂ ಬಿಟ್ಟು ಕಳಿಸುವ ಇವರು ಹೊರ ಜಿಲ್ಲೆ,ರಾಜ್ಯದ ವಾಹನಗಳಿಂದ ಬೇಕಾಬಿಟ್ಟಿ ದೋಚುತ್ತಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ.ಆದರೆ ಇದು ಎಷ್ಟರಮಟ್ಟಿಗೆ ಸರಿ ಎನ್ನುವುದು ಸಾರ್ವಜನಿಕರ ಪ್ರಶ್ನೆ.ಒಂದು ರೀತಿ ಪೋಲಿಸರ ಹಗಲು ದರೋಡೆ ಎಂದರೆ ತಪ್ಪಾಗಲಾರದು.
ಸಂಬಂಧಿಸಿದ ಪೋಲಿಸ್ ಅಧಿಕಾರಿಗಳು,ಎಸ್ಪಿಯವರು ಮುತುವರ್ಜಿವಹಿಸಿ ಇಲಾಖೆಯಿಂದ ಜನರಿಗಾಗುತ್ತಿರುವ ಶೋಷಣೆ ನಿಲ್ಲಿಸಬೇಕಿದೆ.ಇದರಿಂದ ವಾಹನ ಸವಾರರು ನಿರಾಳರಾಗಬೇಕಿದೆ.
Be the first to comment