ಕ್ರೈಮ್- ಪೋಕಸ್
ಆನ ಲೈನಲ್ಲಿ ಆರಂಭವಾಗಿರು ಮಾಂಸ ದಂದೆಗೆ ಇನ್ನಾದರೂ ಪೊಲೀಸರು ಈ ಅಕ್ರಮ ಚಟುವಟಿಕೆಗಳಿಗೆ ಶಾಶ್ವತವಾಗಿ ಕಡಿವಾಣ ಹಾಕುವರೇ?
ಹುಬ್ಬಳ್ಳಿ:- ಹೌದು ಛೋಟಾ ಮುಂಬೈ ಖ್ಯಾತಿಯ ಹುಬ್ಬಳ್ಳಿಯಲ್ಲಿ ಪೊಲೀಸರು ಕಳೆದ 6 ತಿಂಗಳ ಹಿಂದೆಯೇ ಈ ಅಕ್ರಮ ಹಾಗೂ ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಜನರ ಮೆಚ್ಚುಗೆ ಪಾತ್ರರಾಗಿದ್ದರು. ಆದರೇ ಅವರ ಕೆಲಸಕ್ಕೆ ತದ್ವಿರುದ್ಧ ಎನ್ನುವಂತೆ ಜನತಾ ಬಜಾರ್ ನ ಕೆಲ ವಸತಿ ಗೃಹಗಳಲ್ಲಿ ನಿರ್ವಹಿಸುತ್ತಿದ್ದ ಕೆಲ ಕಿಂಗ್ ಪಿನ್ ಗಳು ಕಳ್ಳದಾರಿ ಹಿಡಿದು ಆನ್ ಲೈನ್ ಮೂಲಕ ಗ್ರಾಹಕರನ್ನು ಸೆಳೆದು ಹುಬ್ಬಳ್ಳಿಯ ಸಾಯಿನಗರ, ತಾಜ್ ನಗರ ಹಾಗೂ ಕೇಶಾಪುರ , ನವನಗರ ಹಾಗೂ ಉಣಕಲ್ ಹೀಗೆ ಗುಪ್ತ ಸ್ಥಳಗಳ ಮನೆಗಳಲ್ಲಿ ಅನೈತಿಕ ಚಟುವಟಿಕೆಗಳನ್ನು ನಡೆಸುತ್ತಿರುವ ಸಂಶಯ ಇದೆ. ಈ ಕಿಂಗ್ ಪಿನ್ ಗಳಲ್ಲಿ ಪ್ರಮುಖವಾಗಿ ಜನತಾ ಬಜಾರ್ ನ ನ್ಯೂ ಗೀತಾ ವಸತಿ ಗೃಹ ದಲ್ಲಿ ಅಕ್ರಮ ಚಟುವಟಿಕೆ ಗಳನ್ನು ನಡೆಸುತ್ತಿದ್ದ ಸಿದ್ದಾಪುರ ಮೂಲದ ಪ್ರವೀಣ್ ಹಾಗೂ ಶಿವು ಎಂಬಾತರೇ ಪ್ರಮುಖ ಕಿಂಗ್ ಪಿನ್ ಗಳಾಗಿದ್ದು ಆನಲೈನಲ್ಲಿ ನಿಖಿಲ್ ಎಂದು ಹೆಸರು ಬದಲಾಯಿಸಿ ಕೊಂಡಿದ್ದಾರೆ. ಫೋನ್ ಮಾಡಿ ಈ ಬಗ್ಗೆ ಕೇಳಿದರೆ ಬಾರಿ ಸಾಚಾ ಗಳಂತೆ ಮಾತನಾಡುವ ಇವರು ಪಕ್ಕಾ ಆಸಾಮಿ ಗಿರಾಕಿಗಳು. ಆದ್ದರಿಂದ ಇನ್ನಾದರೂ ಮನೆಗಳಲ್ಲಿ ಎಗ್ಗಿಲ್ಲದೇ ನಡೆಯುತ್ತಿರುವ ಈ ಅಕ್ರಮ ಹಾಗೂ ಅನೈತಿಕ ಚಟುವಟಿಕೆಳಿಗೆ ಪೊಲೀಸರು ಕಡಿವಾಣ ಹಾಕುತ್ತಾರೆಯೇ ಎಂಬುದನ್ನು ಕಾದು ನೋಡಬೇಕಿದೆ. ಈ ಆನಲೈನ ಅಕ್ರಮ ಮಾಂಸದಂದೆ ಯಿಂದ ಅಮಾಯಕ ಯುವ ಪೀಳಿಗೆಯ ಬಲಿಯಾಗುತ್ತಿದು ಪೋಲಿಸ ಇಲಾಖೆ ಆನಲೈನ ಈ ಮಾಂಸ ದಂದೆಗೆ ಸಂಪೂರ್ಣ ವಿರಾಮ ಹಾಕುವುದೆ ಎಂಬುದು ಸಾರ್ವಜನಿಕ ಎಕ್ಸ ಪ್ರಶ್ನೆ ಯಾಗಿದೆ?
Be the first to comment