ಬೆಂಕಿಗೆ ಆಹುತ್ತಿ ಆದ ಗಣಪತಿ ಗ್ರಾಮದ ಗುಡಿಸಲುಗಳು

ವರದಿ: ಬಸವರಾಜು ಬೆಳಗಾವಿ

ಜೀಲ್ಲಾ ಸುದ್ದಿಗಳು


ವಾಸವಾಗಿದ್ದ ಗುಡಿಸಲು ಬೆಂಕಿಗೆ ಆಹುತಿಯಾಗಿ ಬೀದಿಗೆ ಬಿದ್ದ ಬಡಕುಟುಂಬಕ್ಕೆ ಕೂಡಲೇ ಜನಪ್ರತಿನಿಧಿಗಳು ಹಾಗೂ ಸರ್ಕಾರ ಪರಿಹಾರ ಬಿಡುಗಡೆ ಮಾಡಿ: ಬಸವರಾಜು

ಬೆಳಗಾವಿ :-ಹೌದು ಬೆಳಗಾವಿ ಗ್ರಾಮೀಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬಡಸ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಜಪತಿ ಗ್ರಾಮದ ಬಡಕುಟುಂಬವಾದ ಮಾರುತಿ ರುದ್ರಪ್ಪ ಕರಡಿ ಹಾಗೂ ಅವರ ಕುಟುಂಬವು ವಾಸವಾಗಿದ್ದ ಗುಡಿಸಲು ಕಳೆದ ತಿಂಗಳು ಫೆಬ್ರವರಿ 9 -2 -2020 ರಂದು ಸಿಲಿಂಡರ್ ಬ್ಲಾಸ್ಟ್ ಆಗಿ ಇಡೀ ಮನೆಯೇ ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿತ್ತು, ಈ ಸಂದರ್ಭದಲ್ಲಿ ಮನೆಯಲ್ಲಿ ಇದ್ದ ಎಲ್ಲಾ ಪಾತ್ರೆ ಸಾಮಾನುಗಳು, ಆಹಾರ ಧಾನ್ಯಗಳು ಮತ್ತು ಹೊಲಕ್ಕೆ ಹಾಗೂ ಮನೆಗೆ ಸಂಬಂದಿಸಿದ ದಾಖಲೆಗಳು, ರೇಷನ್ ಕಾರ್ಡ್, ಮತ್ತು ಮಕ್ಕಳಿಗೆ ಸಂಬಂಧಿಸಿದಂತೆ ಇರುವ ದಾಖಲೆಗಳು ಹೀಗೆ ಎಲ್ಲಾ ಪರಿಕರಗಳು ಸಂಪೂರ್ಣವಾಗಿ ಬೆಂಕಿಗೆ ಆಹುತಿಯಾಗಿ ಇಡೀ ಕುಟುಂಬವೇ ಬೀದಿ ಪಾಲಾಗಿ ಕಳೆದ ಒಂದು ತಿಂಗಳಿಂದ ಚಳಿಗೆ, ಬಿಸಿಲಿಗೆ ಆ ಸುಟ್ಟ ಪ್ರದೇಶದಲ್ಲಿ ಕಾಲ ಕಳೆಯುತ್ತಿದ್ದಾರೆ, ಈ ಬೆಂಕಿಗೆ ಆಹುತಿಯಾದಾಗ ಶಾಸಕರ ಪುತ್ರರು ಹಾಗೂ ಮಾಜಿ ಶಾಸಕರಾದ ಸಂಜಯ್ ಪಾಟೀಲ್ ರವರು ಭೇಟಿ ಕೊಟ್ಟು ಹೋದರೆ ವಿನಃ ಇಲ್ಲಿಯವರೆಗೂ ಅವರಿಗೆ ಸೂರು ನಿರ್ಮಿಸಿಕೊಳ್ಳುವುದಕ್ಕೆ ನೆರವಿಗೆ ಬಾರದೇ ಇರುವುದು ನೋಡಿದರೇ ಬಾರಿ ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ಇನ್ನೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಆದ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿಕೊಟ್ಟು ದಾಖಲೆಗಳನ್ನು ತೆಗೆದುಕೊಂಡು ಹೋಗಿ ಕೈ ತೊಳೆದುಕೊಂಡು ಬಿಟ್ಟಿದ್ದಾರೆ, ಇನ್ನೂ ಸ್ಥಳೀಯ ಬಡಸ ಗ್ರಾಮ ಪಂಚಾಯಿತಿ ಪಿಡಿಓ ಅವರಂತೂ ಇಲ್ಲಿಯವರೆಗೆ ಸಹ ಆ ಘಟನಾ ಸ್ಥಳಕ್ಕೆ ಭೇಟಿ ಸಹ ನೀಡಿಲ್ಲ ಮತ್ತು ಸ್ಥಳೀಯ ತಹಶೀಲ್ದಾರ್ ರವರು ಸಹ ಈ ಕಡೇ ಸುಳಿದಿಲ್ಲ. ಭಾಗಶಃ ಒಂದು ತಿಂಗಳಾದರೂ ಸ್ಥಳೀಯ ಶಾಸಕರು, ಹಾಗೂ ಮಾಜಿ ಶಾಸಕರು ಹಾಗೂ ಸರ್ಕಾರ ಈ ಬಡ ಕುಟುಂಬಕ್ಕೆ ಸೂರು ನಿರ್ಮಿಸಿಕೊಳ್ಳಲು ಹಣಕಾಸು ಸಹಾಯ ಮಾಡದೇ ಇರುವುದರಿಂದ ತೀವ್ರವಾಗಿ ಬಡತನದಿಂದ ಬಳಲುತ್ತಿರುವ ಈ ಬಡ ಅವಿಭಕ್ತಕುಟುಂಬ ಬೀದಿಯಲ್ಲಿ ವಾಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಇಂದು ಪತ್ರಕರ್ತ ಹಾಗೂ ಹೋರಾಟಗಾರ ಬಸವರಾಜು ಈ ಘಟನಾ ಸ್ಥಳಕ್ಕೆ ಭೇಟಿಕೊಟ್ಟು ಇವರ ಸಮಸ್ಯೆಗಳು ಪ್ರಸ್ತುತ ಇವರು ವಾಸಿಸುತ್ತಿರುವ ಅವ್ಯವಸ್ಥೆಯ ಕಂದಾಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತೆಗೆದುಕೊಂಡು ಬಂದರು. ಇನ್ನಾದರೂ ಈ ಬಡ ಕುಟುಂಬಕ್ಕೆ ಜನಪ್ರತಿನಿಧಿಗಳು ಹಾಗೂ ಸರ್ಕಾರ ನೆರವಿಗೆ ಧಾವಿಸಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ

Be the first to comment

Leave a Reply

Your email address will not be published.


*