ಮುಂದೆ ಸಂಪೂರ್ಣ ಮಳೆ ಸಂಪೂರ್ಣ ಬೆಳೆ : ತೂಗುಡ್ಡದಲ್ಲಿ ಶಿವವಾಣಿ…!!!

ವರದಿ: ಮುತ್ತು ಎನ್ ಬೀರಗೊಂಡ, ಮುದ್ದೇಬಿಹಾಳ

ಜಿಲ್ಲಾ ಸುದ್ದಿಗಳು

ಮುದ್ದೇಬಿಹಾಳ:

ತಾಲ್ಲೂಕಿನ ಕೋಳೂರ, ಆಲೂರ, ಕೇಶಾಪೂರ ಗ್ರಾಮದ ನಡುವೆ ಇದ್ದ ತೂಗುಡ್ಡದ ರೇವಣಸಿದ್ದೇಶ್ವರ ಜಾತ್ರಾ ಮಹೋತ್ಸವವು ನಾಡಿನ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.



ಸರೂರ ಗ್ರಾಮದ ಕರಿಸಿದ್ದಯ್ಯ ಮುತ್ತ್ಯಾ ಗುರುವಿನ, ಮಾಂತಯ್ಯ ಮುತ್ತ್ಯಾ ಗುರುವಿನ, ಅಂಬ್ರಯ್ಯಮುತ್ತ್ಯಾ ಗುರುವಿನ ಬಸಯ್ಯಮುತ್ತ್ಯಾ ಗುರುವಿನ ಇವರು ಏಳು ತರಹದ ಮುಳ್ಳಿನ ಕಂಟಿಯ ಮೇಲೆ ನಿಂತು ಮುಂದಿನ ವರ್ಷ ಸಂಪೂರ್ಣ ಮಳೆ ಸಂಪೂರ್ಣ ಬೆಳೆ ಆಗುತ್ತೆ ಅಂತಾ ಶಿವವಾಣಿ ನುಡಿದರು.



ಇದಕ್ಕೂ ಮೊದಲು ಕೇಸಾಪೂರ ಗ್ರಾಮದ ದೇಶಮುಖರ ಮನೆತನದಿಂದ ನಂದಿಕೋಕು, ಎಣ್ಣೆ ಮಗಿ, ನುಚ್ಚಿನ ಗಡಿಗೆ ಬರುವುದು ಹಾಗೂ ನೆರಬೆಂಚಿ ಗ್ರಾಮದಿಂದ ರೇವಣಸಿದ್ದೇಶ್ವರ ಪಲ್ಲಕ್ಕಿ ಗುಡ್ಡದ ರೇವಣಸಿದ್ದೇಶ್ವರ ದೇವಸ್ಥಾನಕ್ಕೆ ಬರುವುದು ಮೊದಲಿನಿಂದ ಪದ್ದತಿ ಇದೆ ಎಂದು ಜಾತ್ರಾ ರೂವಾರಿಯಾದ ನಾಗರಾಜ ಹೀರೆಕುರುಬರ, ಸಿದ್ದಪ್ಪ ತಳವಾರ, ಶರಣಪ್ಪ ಹಳೆಪ್ಪನವರ, ಶರಣಪ್ಪ ಕಂಗಳ, ಪಾವಡೆಪ್ಪ ವಾಲಿಕಾರ, ಗದ್ದೆಪ್ಪ ತಳವಾರ, ಮಲ್ಲಿಕಾರ್ಜುನ ಚಲವಾದಿ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರು ಪಾಲ್ಗೊಂಡಿದ್ದರು.

Be the first to comment

Leave a Reply

Your email address will not be published.


*