ಪಂಚಾಯತ್ ಅಭಿವೃದ್ಧಿಧಿಕಾರಿ, ಕಾರ್ಯದರ್ಶಿ, ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಮೂಲ ಸ್ಥಳಕ್ಕೆ ಹಿಂದಿರುಗಲು ಸೂಚನೆ

ಕಾರಟಗಿ:ಜು:05: ಗ್ರಾಮ ಪಂಚಾಯತ್ ಅಭಿವೃದ್ಧಿಧಿಕಾರಿಗಳು ಗ್ರಾಮ ಪಂಚಾಯತ್ ಕಾರ್ಯದರ್ಶಿಗಳು ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ಮೂಲ ಗ್ರಾಮ ಪಂಚಾಯತಿಗೆ ಹಿಂದಿರುಗಿಸಲು ಕೊಪ್ಪಳ ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕ್ರಮ ಕೈ ಗೊಳ್ಳಲು ಮಾನ್ಯ ಮುಖ್ಯ ಅಪಾರ ಕಾರ್ಯ ದರ್ಶಿಗಳು ನಿರ್ದೇಶೀಸಿದ್ದಾರೆ, ದಿನಾಂಕ 24 ರಂದು ನಡೆದ ವಿಡಿಯೋ ಸಂವಾದದಲ್ಲಿ ಅವರುನಿರ್ದೇಶಿಸಿದ್ದಾರೆ,

ಸ್ಥಳೀಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಕಾರ್ಯದರ್ಶಿಗಳು ದ್ವಿತೀಯ ದರ್ಜೆ ಲೆಕ್ಕ ಸಹಾಯಕರನ್ನು ಸ್ಥಳೀಯ ಮಟ್ಟದ ಗ್ರಾಮ ಪಂಚಾಯತಿಯ ಕರ್ತವ್ಯದಿಂದ ಬೇರೆ ಪಂಚಾಯತ್ ನಿಯೋಜನೆ ಮಾಡಿರುವುದು ಕಂಡು ಬಂದಿದ್ದು, ಹೀಗೆ ಮಾಡಲಾದ ಎಲ್ಲಾ ನಿಯೋಜನೆಗಳನ್ನು ರದ್ದು ಪಡಿಸಿ ತಕ್ಷಣದಿಂದ ಜಾರಿಗೆ ಬರುವಂತೆ ಮೂಲ ಗ್ರಾಮ ಪಂಚಾಯತಿಗೆ ಹಿಂದಿರುಗಿಸಲು ಜಿಲ್ಲೆಯ ಎಲ್ಲಾ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ,

ಗ್ರಾಮ ಪಂಚಾಯತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಸಿಬ್ಬಂದಿಗಳು ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಪ್ರತಿದಿನ ಬಯೋಮೆಟ್ರಿಕ್ ಇ ಹಾಜರಾತಿಯನ್ನು ತಪ್ಪದೆ ಹಾಕುವುದು ಹಾಗೂ ಇದರ ಮೇಲುಸ್ತುವಾರಿಯನ್ನು ಕಾರ್ಯನಿರ್ವಾಹಕ ಅಧಿಕಾರಿಗಳು ಮಾಡಿ ಬಯೋಮೆಟ್ರಿಕ್ ಇ ಹಾಜರಾತಿ ಆಧಾರದ ಮೇಲೆ ವೇತನ ಪಾವತಿಸುವುದು ಆದೇಶ ವನ್ನು ಪಾಲನೆ ಮಾಡದ ಹಾಗೂ ಉಲ್ಲಂಘೀಸುವ ಕಾರ್ಯನಿರ್ವಾಹಕ ಅಧಿಕಾರಿಗಳ ವಿರುದ್ದ ಸೂಕ್ತ ಶಿಸ್ತಿನ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದ್ದಾರೆ,

ವರದಿ :: ಜೆ . ನಾಗರಾಜ್

Be the first to comment

Leave a Reply

Your email address will not be published.


*