ಇಳಕಲ್ ಸೀರೆಯ ಮೇಲೆ ವಿಎಸ್ ಕೆ ಡಿಸಿಎಂ ಎಂದು ಬರೆದ ಗುದ್ದಾಟಿ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಬಾಗಲಕೋಟೆ:ಇಳಕಲ್ ಸೀರೆಯ ಮೇಲೆ ವಿಎಸ್‌ಕೆ ಡಿಸಿಎಂ ಎಂದು ನೇಯ್ದ ಡಿಸಿಎಂ ಸ್ಥಾನ ನೀಡುವಂತೆ ನೇಕಾರ ಮೇಘರಾಜ ಗುದ್ದಾಟಿ ಮನವಿ ಮಾಡಿದ್ದಾರೆ.

CHETAN KENDULI

ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಶ್ರೀರಾಮ ಖ್ಯಾತಿಯ ನೇಕಾರ ಮೇಘರಾಜ ಗುದ್ದಾಟಿ ಸದಾ ಒಂದಿಲ್ಲೊಂದು ಸುದ್ದಿಯಲ್ಲಿ ಇರುತ್ತಾರೆ.ಹೌದು ತಮ್ಮವಿಶಿಷ್ಟ ರೀತಿಯಲ್ಲಿ ಇಳಕಲ್ ಸೀರೆಗಳ ಶ್ರೀರಾಮಮಂದಿರದ ಚಿತ್ರಣ, ಕಾಂತಾರ ಚಿತ್ರಕ್ಕೆ ಆಸ್ಕರ್ ಪ್ರಶಸ್ತಿ ಸಿಗಲಿ ಹೀಗೆ ಸೀರೆಗಳ ಮೇಲೆ ನೇಯ್ದು ಹೆಸರು ವಾಸಿವಾಗಿರುವ ಅವರು ಈಗ ಮೊನ್ನೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಹುನಗುಂದ ಮತಕ್ಷೇತ್ರದಿಂದ ಭರ್ಜರಿ ಗೆಲವು ಸಾಧಿಸಿರುವ ಶಾಸಕ ವಿಜಯಾನಂದ ಕಾಶಪ್ಪನವರಿಗೆ ಡಿಸಿಎಂ ಸ್ಥಾನವನ್ನು ಕಾಂಗ್ರೆಸ್ ಹೈಕಮಾಂಡ್ ಮತ್ತು ಪಕ್ಷದ ವರಿಷ್ಠರು ನೀಡಬೇಕು ಎಂದು ವಿಶೇಷವಾಗಿ ಸೀರೆಯ ಮೇಲೆ ಎಸ್. ಆರ್. ಕೆ. ವಿಎಸ್‌ಕೆ ಆಟ್ ಡಿಸಿಎಂ ಎಂದು ಬರೆದು ಅವರಿಗೆ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಮತ್ತು ಹೈಕಮಾಂಡ್‌ಗೆ ವಿಶಿಷ್ಟ ರೀತಿಯಲ್ಲಿ ಮನವಿ ಮಾಡಿದ್ದಾರೆ.

Be the first to comment

Leave a Reply

Your email address will not be published.


*