ಮಸ್ಕಿ ಶಾಸಕರಿಗೆ ಪ್ರಬಲ ಸಚಿವ ಸ್ಥಾನ ನೀಡಲು ರತ್ನಾ ಕಟ್ಟಿಮನಿ ಒತ್ತಾಯ

ಮಸ್ಕಿ, ಪರಿಶಿಷ್ಠ ಪಂಗಡ ಮೀಸಲು ಮಸ್ಕಿ ವಿಧಾನ ಸಭಾ ಕ್ಷೇತ್ರದಿಂದ ಸತತ ಎರಡನೇ ಬಾರಿಗೆ ಅತ್ಯಧಿಕ ಮತಗಳಿಂದ ವಿಜಯ ಸಾಧಿಸಿದ ಸರಳ ಸಜ್ಜನಿಕೆಯ ರಾಜಕಾರಣಿ, ರೈತನ ಮಗ ಎಂದೇ ಖ್ಯಾತಿ ಪಡೆದ ಶಾಸಕ ಆರ್.ಬಸನಗೌಡ ತುರುವಿಹಾಳ ಅವರು ಸಂಭಾವ್ಯ ಸಚಿವರ ಪತ್ತಿಯಲ್ಲಿದ್ದು,ಇವರಿಗೆ ಪ್ರಬಲ ಖಾತೆಯ ಸಚಿವ ಸ್ಥಾನ ಕೊಡಲು ಜಿಲ್ಲಾ ಕಾಂಗ್ರೇಸ್ ಕಾರ್ಯಕರ್ತೆ ಹಾಗೂ ಸಾಮಾಜಿಕ ಹೋರಾಟಗಾರ್ತಿ ರತ್ನಾ ಕಟ್ಟಿಮನಿ ಪತ್ರಿಕಾ ಹೇಳಿಕೆ ಮೂಲಕ ಒತ್ತಾಯಿಸಿದ್ದಾರೆ. ಹಾಗೆಯೇ ರಾಯಚೂರು ಜಿಲ್ಲೆಯು ತೀರಾ ಹಿಂದುಳಿದ ಜಿಲ್ಲೆಯಾಗಿದ್ದು,

ಪ್ರಬಲ ಸಚಿವ ಖಾತೆ ಕೊಡುವ ಅವಶ್ಯವಿದೆ. ಮಸ್ಕಿ ವಿಧಾನಸಭಾ ಕ್ಷೇತ್ರವೂ ಕಾಂಗ್ರೇಸ್ ಭದ್ರ ಕೋಟೆಯಾಗಿದ್ದು, ಮಸ್ಕಿ ಸೇರಿ ರಾಯಚೂರು ಜಿಲ್ಲೆಯ ನಾಲ್ಕು ವಿಧಾನ ಸಭಾ ಕ್ಷೇತ್ರಗಳು ಕೈ ವಶವಾಗಿವೆ. ಜನರ ಆಸೆ-ಆಕಾಂಕ್ಷೆ, ಅಭಿಲಾಷೆ,ಒತ್ತಾಯ ನಿರೀಕ್ಷೆಗೆ ತಕ್ಕಂತೆ ಸಚಿವ ಸ್ಥಾನ ಕೊಡಬೇಕು ಎಂದು ಪಕ್ಷದ ರಾಜ್ಯ ಮತ್ತು ರಾಷ್ಟ್ರ ಮಟ್ಟದ ಮುಖಂಡರಲ್ಲಿ ಪತ್ರಿಕೆಯ ಮೂಲಕ ಮನವಿ ಮಾಡಿದ್ದಾರೆ.

Be the first to comment

Leave a Reply

Your email address will not be published.


*