ಬಾಗಲಕೋಟೆ:ಗುಳೇದಗುಡ್ಡ ತಾಲ್ಲೂಕಿನ ಕೋಟೆಕಲ್ ಅಮರೇಶ್ವರ ಮಠದಲ್ಲಿ ಅಮರೇಶ್ವರ ಸ್ವಾಮೀಜಿ 54ನೇ ಪುಣ್ಯಸ್ಮರಣೆ, ಕಾಶಿಯ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅಮೃತ ಮಹೋತ್ಸವ, ಸಿದ್ಧಾಂತ ಶಿಖಾಮಣಿ ಗ್ರಂಥ ಬಿಡುಗಡೆ, ಶ್ರೀಮಠದ ಡಾ. ನೀಲಕಂಠ ಶಿವಾಚಾರ್ಯ ಸ್ವಾಮೀಜಿ ದ್ವಾದಶ ಪಟ್ಟಾಧಿಕಾರ ಮಹೋತ್ಸವ ಹಾಗೂ ನೂತನ ಮಠದ ಕಟ್ಟಡ ಉದ್ಘಾಟನಾ ಸಮಾರಂಭ ನಡೆಯಿತು.
ಸಮಾರಂಭದಲ್ಲಿ ಮಾತನಾಡಿದ ಗಿರಿಸಾಗರದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ‘ಸಮಾಜವನ್ನು ಸರಿಯಾದ ದಾರಿಯಲ್ಲಿ ನಡೆಸುವ,ಜನರಲ್ಲಿ ಬುದ್ಧಿ ಬೆಳೆಸಿ, ಸಂಸ್ಕಾರ ನೀಡುವಂತಹ ಶ್ರೇಷ್ಠ ಗುರುಗಳು ಇಂದು ಅಗತ್ಯ ತ್ಯಾಗ ಎಲ್ಲಿದೆಯೋ ಅಲ್ಲಿ ಅಮೃತವಿದೆ. ಸಿದ್ಧಾಂತ ಶಿಖಾಮಣಿ ವ್ಯಕ್ತಿಯ ಬದುಕನ್ನು ಬೆಳಗುವ ಗ್ರಂಥವಾಗಿದೆ.ಹಿಂದಿ, ಅರಬ್ಬಿ ಸೇರಿದಂತೆ 18 ಭಾಷೆಗಳಲ್ಲಿ ಇದು ಅನುವಾದಗೊಂಡಿರುವುದು ಹೆಮ್ಮೆಯ ಸಂಗತಿ’ ಎಂದರು.ಸ್ವಾಮೀಜಿಗಳು ಮಠದ ಮಾಲೀಕರಲ್ಲ, ಸಮಾಜದ ನಿಷ್ಠಾವಂತ ಸೇವಕರು. ಎಲ್ಲವನ್ನೂ ಸಮಾಜಕ್ಕಾಗಿ, ದಾಸೋಹಕ್ಕಾಗಿ ನೀಡುವವರೇ ಸ್ವಾಮೀಜಿಗಳು’ ಎಂದು ತಿಳಿಸಿದರು.
ಬಿಲ್ ಬಿಲ್ವಾಶ್ರಮದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘ಈ ಹಿಂದಿನ ಅಮರೇಶ್ವರ ಸ್ವಾಮೀಜಿ ಭವರೋಗ ನಿವಾರಕರಾಗಿದ್ದರು. ಕಾಶಿ ಪೀಠಕ್ಕೆ ಜ್ಞಾನ ಸಂಪತ್ತಾದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಅವರನ್ನು ನೇಮಿಸಿ ಮಠದ ಹೆಸರನ್ನು ಬೆಳಗಿದ್ದಾರೆ’ ಎಂದು ಹೇಳಿದರು. ಕೋಟೆಕಲ್ ಹೊಳೆಹುಚ್ಚೇಶ್ವರ ಮಠದ ಹೊಳೆಹುಚ್ಚೇಶ್ವರ ಸ್ವಾಮೀಜಿ, ಕೆರೂರು ಚರಂತಿಮಠದ ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ಶ್ರೀಮಠದ ಪೀಠಾಧ್ಯಕ್ಷ ಡಾ.ನೀಲಕಂಠ ಶಿವಾಚಾರ್ಯ ಸ್ವಾಮೀಜಿ, ಮಸ್ಕಿಗಚ್ಚಿನಮಠದ ವರರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಸಿದ್ಧಲಿಂಗ ದೇವರು,ಶಿವಾನಂದ ದೇವರು ಸಾನ್ನಿಧ್ಯ ವಹಿಸಿದ್ದರು.ಡಾ.ಪರಮೇಶ್ವರಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂಗೀತ ಶಿಕ್ಷಕ ಶಂಕರ ಮುಂದಿನಮನಿ, ಬಸವರಾಜ ಸಿಂದಗಿಮಠ,ಚಿದಾನಂದ ಕಾಟವಾ ಅವರಿಂದ ಸಂಗೀತ ಸುಧೆ ಕಾರ್ಯಕ್ರಮ ನಡೆಯಿತು.ಎಸ್.ಎಂ. ಪಾಟೀಲ, ಘನಶ್ಯಾಮದಾಸ ರಾಠಿ, ಮಾಗುಂಡಪ್ಪ ಸುಂಕದ, ಮಲಮಹೋತ್ಸವಜುನ ತಾಂಡೂರ ಹಲವರು ಹಾಜರಿದ್ದರು.
Be the first to comment