ಸುರಪುರ ಶಾಸಕ ಆರ್ ವಿ ಎನ್ ಗೆ ಸಚಿವ ಸ್ಥಾನ ನೀಡುವಂತೆ ರಾಜಾ ಪಿಡ್ಡನಾಯಕ ಒತ್ತಾಯ

ಯಾದಗಿರಿ . ಜಿಲ್ಲೆಯ ಸುರಪುರ ವಿಧಾನಸಭಾ ಕ್ಷೇತ್ರದಿಂದ ಸುಮಾರು 25 ಸಾವಿರಕ್ಕಿಂತ ಅಧಿಕ ದಾಖಲೆ ಮತಗಳಿಂದ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷದ .

ಶಾಸಕ ಡಾ.ರಾಜಾ ವೆಂಕಟಪ್ಪ ನಾಯಕ ಅವರಿಗೆ ಕ್ಯಾಬಿನೆಟ್ ದರ್ಜೆ ಸಚಿವ ಸ್ಥಾನಮಾನ ನೀಡುವಂತೆ.
ರಾಜಾ ಪಿಡ್ಡನಾಯಕ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಮತ್ತು ರಾಜ್ಯ ನಾಯಕರಿಗೆ ಪತ್ರಿಕಾ ಪ್ರಕಟಣೆಯ ಮೂಲಕ ಸುರಪುರ ವಿಧಾನ ಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸುಮಾರು ವರ್ಷಗಳಿಂದ ಕಾಂಗ್ರೆಸ್ ಪಕ್ಷದ ನಿಷ್ಠಾವಂತರು ಕೂಡಾ ಹೌದು, ವಿದ್ಯಾಭ್ಯಾಸದಲ್ಲಿ ಎಂಬಿಬಿಎಸ್ ವ್ಯಾಸಂಗ ಮುಗಿದಿದ್ದು ಹಾಗೂ ಅನುಭವಿ ರಾಜಕಾರಣಿಗಳು ದೀನ ದಲಿತರ ಧೀಮಂತ ನಾಯಕರು ಸರ್ವಜನಾಂಗದವರನ್ನು ತೆಗೆದುಕೊಂಡು ಹೋಗುವಂತ ಸಾಮರ್ಥ್ಯ ಉಳ್ಳವರು ಹಾಗೂ ರೈತಪರ ,ನಾಡು,ನುಡಿಪರ ಧ್ವನಿ ಎತ್ತುವ ನಾಯಕಾರಾಗಿದ್ದಾರೆ ಆದ ಕಾರಣ
ಈ ಬಾರಿಯ ಮೊದಲ ಸಚಿವ ಸಂಪುಟ ಸಭೆಯಲ್ಲಿ ಉನ್ನತ ಖಾತೆಯನ್ನು ನೀಡುವಂತೆ ರಾಜಾ ಪಿಡ್ಡನಾಯಕ ಪತ್ರಿಕಾ ಹೇಳಿಕೆ ನೀಡುವುದರ ಮೂಲಕ ಒತ್ತಾಯ ಮಾಡಿದರು.

 

Be the first to comment

Leave a Reply

Your email address will not be published.


*