ಶರಣಬಸಪ್ಪ ಗೌಡ ದರ್ಶನಾಪುರ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಆಗ್ರಹ

ಶಹಾಪುರ ಮತಕ್ಷೇತ್ರದ ಅಭಿವೃದ್ಧಿಗೆ ಹೆಸರಾದ ಹಾಲಿ ನೂತನ ಶಾಸಕರಾದ ಶರಣಬಸಪ್ಪಗೌಡ ದರ್ಶನಾಪುರವರು ಕಾಂಗ್ರೆಸ್ ಸರ್ಕಾರದ ಪ್ರಥಮ ಕ್ಯಾಬಿನೆಟ್‌ ಸಚಿವ ಸಂಪುಟದಲ್ಲಿ ಸಚಿವರಾಗಿ ಸಮರ್ಥ ಕಾರ್ಯ ನಿರ್ವಹಿಸಬಲ್ಲರು ಈ ಹಿಂದೆ ಮಂತ್ರಿಗಳಾಗಿ ಜಿಲ್ಲಾ ಉಸ್ತುವಾರಿಯಾಗಿ ಕಾರ್ಯ ನಿರ್ವಹಿಸಿದ ಶಾಸಕ ದರ್ಶನಾಪುರವರು ಮತ್ತೊಂದು ಬಾರಿಗೆ ಮಂತ್ರಿಗಳನ್ನಾಗಿಸಬೇಕು ಎಂದು ಕ್ಷೇತ್ರದ ಹೆಗ್ಗನದೊಡ್ಡಿ ಕಾಂಗ್ರೆಸ್ ಯುವ ಮುಖಂಡ ಧರ್ಮರಾಜ್ ಸುಂಬಡ್ ಆಗ್ರಹಿಸಿದ್ದಾರೆ . ಸದಾ ಜನಪರ ಕಾಳಜಿಯನ್ನೊತ್ತು ಕ್ಷೇತ್ರದ ಪ್ರತಿಯೊಂದು ಹಳ್ಳಿ ಗಲ್ಲಿ ರಸ್ತೆಗಳನ್ನು ಸುಧಾರಣೆ ಮಾಡಿದ, ದರ್ಶನಪುರವರು ಪ್ರಗತಿಪರ ಚಿಂತಕರಾಗಿದ್ದಾರೆ.

 

ಅವರ ದೂರದೃಷ್ಟಿಯ ಯೋಜನೆಗಳು ಕ್ಷೇತ್ರದ ಜನತೆಗೆ ಸಹಕಾರವಾಗಿವೆ. ಶೈಕ್ಷಣಿಕ , ಕೃಷಿ ಸಹಕಾರ ಕ್ಷೇತ್ರಕ್ಕೆ ಅಪಾರ ಕಾಳಜಿಯನ್ನು ಹೊಂದಿದ ದರ್ಶನಪುರವರು ಶಹಪುರ ಕ್ಷೇತ್ರವನ್ನು ಮಾದರಿಯ ತಾಣವನ್ನಾಗಿಸುವಲ್ಲಿ ಸಂದೇಹವೇ ಇಲ್ಲ.ಸಚಿವ ಸ್ಥಾನ ನೀಡಿದಲ್ಲಿ ತೀರಾ ಹಿಂದುಳಿದ ಯಾದಗಿರಿ ಜಿಲ್ಲೆಯ ಅಭಿವೃದ್ಧಿಪಡಿಸಲು ಸಕಲ ಯೋಜನಾಭಿಪ್ರಾಯಗಳನ್ನು ಹೊಂದಿದ್ದಾರೆ.

ಯಾದಗಿರಿ ಜಿಲ್ಲಾ ಉಸ್ತುವಾರಿ ಮಂತ್ರಿಗಳನ್ನಾಗಿ ಮಾಡಿದಲ್ಲಿ ಶಾಸಕ ದರ್ಶನಪುರವರು ಯಾದಗಿರಿ ಜಿಲ್ಲೆಯನ್ನು ಅಭಿವೃದ್ಧಿಯತ್ತ ಸಾಗಿಸುವಲ್ಲಿ ಶ್ರಮಿಸುತ್ತಾರೆ. ಅನುಭವಿ, ಖಾತೆಗಳನ್ನು ನಿಭಾಯಿಬಲ್ಲ ಲಕ್ಷಣಗಳನ್ನು ಹೊಂದಿದ

ದರ್ಶನಪುರವರು ಮಂತ್ರಿಗಳಾಗಿ ಕ್ಷೇತ್ರದ ಅಭಿವೃದ್ಧಿಯೊಂದಿಗೆ ಕಲ್ಯಾಣ ಕರ್ನಾಟಕದ ಪ್ರಗತಿಗೆ ಪರಿಶ್ರಮ ಪಡುತ್ತಾರೆ. ಶಾಸಕರಾಗಿ ಆನೇಕ ಯೋಜನೆಗಳ

ಅನುಧಾನ ತಂದು ಪ್ರಗತಿಯನ್ನು ಸಾಧಿಸಿದ್ದು ಇಂದು ಅವರು ಜಯಕ್ಕೆ ಮೂಲಕಾರಣವಾಗಿದೆ.

 

ಹೈಕಮಾಂಡ್ ದರ್ಶನಾಪುರ ಅವರಿಗೆ ಸಚಿವ ಸಂಪುಟದಲ್ಲಿ ಮಂತ್ರಿ ಸ್ಥಾನ ನೀಡಿ ಅಭಿವೃದ್ಧಿಗೆ ಶಕ್ತಿ ನೀಡಬೇಕೆಂದು ಹೆಗ್ಗನದೊಡ್ಡಿಯ ಯುವಕರಾದ ಲಕ್ಷ್ಮಣ ಅಡಿಮನಿ, ನಾಗರಾಜ್, ಶಶಿಕಾಂತ್, ಶರಣಗೌಡ, ಪರಶುರಾಮ್, ಹುಸೇನ್ ಸಾಬ್, ಮಂಜುನಾಥ್, ಬಸವರಾಜ್, ರಮೇಶ್, ಇತರರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

Be the first to comment

Leave a Reply

Your email address will not be published.


*