ಬೆಂಗಳೂರು:ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಮೇ. 15 ರಿಂದ 29 ರವರೆಗೆ ಬೇಸಿಗೆ ರಜೆ ಮಂಜೂರು ಮಾಡಿ ಆದೇಶ ಹೊರಡಿಸಿದೆ.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ಎಲ್ಲ ರಾಜ್ಯಗಳಲ್ಲೂ 15 ದಿವಸ ಬೇಸಿಗೆ ರಜೆ ಇದೆ.ಮೇ 1ರಿಂದ ನೀಡಬೇಕಿದ್ದ ರಜೆಯನ್ನು ಚುನಾವಣೆ ಹಿನ್ನೆಲೆಯಲ್ಲಿ ಮುಂದೂಡಿ ಮೇ 15ರ ನಂತರ ನೀಡಲು ಸೂಚಿಸಲಾಗಿತ್ತು.
ರಾಜ್ಯದಲ್ಲೂ 2000 ಇಸವಿಯಿಂದ ನೀಡಲಾಗುತ್ತಿದೆ. ತಕ್ಷಣ ರಜೆ ಮಂಜೂರು ಮಾಡದಿದ್ದರೆ ನಮ್ಮ ರಜೆಯನ್ನು ನಾವು ಪಡೆಯುತ್ತೇವೆ ಎಂದು ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು.
ಇದೀಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ 15 ದಿನ ಬೇಸಿಗೆ ರಜೆ ಮಂಜೂರು ಮಾಡಿ ಆದೇಶ ಹೊರಡಿಸಿದ್ದು, ರಜೆ ಸಮಯದ ಪೂರಕ ಪೌಷ್ಟಿಕ ಆಹಾರವನ್ನು ಪ್ರತಿ ಫಲಾನುಭವಿಗಳ ಮನೆ ಬಾಗಿಲಿಗೆ ವಿತರಿಸು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದೆ.
Be the first to comment