ಗುರು ಮಂಟೇಶ್ವರ ಪ್ರೌಢಶಾಲೆಯ ಫಲಿತಾಂಶ ಶೇ.100

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಪ್ರಥಮ: 625/550 ಪ್ರದೀಪ್                          ದ್ವಿತೀಯ:625/543 ಅಂಜಲಿ,ಮಂಜುಳಾ        ತೃತೀಯ:625/542 ಹನಮಗೌಡ                             ಸಮಾಜ ವಿಜ್ಞಾನ:ಶರಣಪ್ಪ ಕಟಾಪೂರ100/100

CHETAN KENDULI

ಬಾಗಲಕೋಟೆ:ಇಳಕಲ್ಲ ತಾಲೂಕಿನ ಶ್ರೀ ಗುರು ಮಂಟೇಶ್ವರ ಪ್ರೌಢಶಾಲೆ ಕೆಲೂರಿನ ವಿದ್ಯಾರ್ಥಿ ಪ್ರದೀಪ್ ಭಾವಿಕಟ್ಟಿ 625 ಕ್ಕೆ 550 ಅಂಕಗಳನ್ನು ಪಡೆದು, ಶೇ.88 ರ ಮೂಲಕ A ಗ್ರೇಡ್ ಶ್ರೇಣಿಯಲ್ಲಿ ತೇರ್ಗಡೆ ಹೊಂದಿ ಶಾಲೆಗೆ ಪ್ರಥಮಸ್ಥಾನ ಪಡೆದಿದ್ದಾನೆ.

ಪರೀಕ್ಷೆಗೆ ಕುಳಿತ ಒಟ್ಟು 39 ವಿದ್ಯಾರ್ಥಿಗಳ ಪೈಕಿ 39 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದು ಶಾಲೆಯ ಫಲಿತಾಂಶ ಶೇ.100ರಷ್ಟು ಬಂದಿದ್ದು, ಅಂಜಲಿ ಐಹೊಳ್ಳಿ,ಮಂಜುಳಾ ಹೆಳವರ ಇರ್ವರು 543 ಅಂಕ ಪಡೆದು (ಶೇ.86.88) ಶಾಲೆಗೆ ದ್ವಿತೀಯ,ಹನಮಗೌಡ ಕೊಡತಿ 542 (ಶೇ.86.72) ಅಂಕ ಪಡೆದು ತೃತೀಯ ಸ್ಥಾನ ಪಡೆದಿದ್ದಾರೆ.ಸಮಾಜ ವಿಜ್ಞಾನ ವಿಷಯದಲ್ಲಿ ಶರಣಪ್ಪ ಕಟಾಪೂರ 100ಕ್ಕೆ 100 ಅಂಕ ಪಡೆದಿದ್ದಾನೆ.

ವಿದ್ಯಾರ್ಥಿಗಳ ಸಾಧನೆಗೆ ಡಾ.ಮಲಯ ಶಾಂತಮುನಿ ದೇಶಿಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳು,ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ,ಗೌರವ ಕಾರ್ಯದರ್ಶಿ ಮಹೇಶ ಅಥಣಿ, ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶಟ್ಟರ , ಬಿ.ಹೆಚ್.ಆರ್.ಡಿ. ನಿರ್ದೇಶಕ ಎಸ್.ಆರ್.ಮನಹಳ್ಳಿ, ಶಿಕ್ಷಣ ವಿಸ್ತರಣಾಧಿಕಾರಿ ಬಿ.ಆರ್.ಬೋಳಿಶೆಟ್ಟಿ ಶಾಲಾ ಮುಖ್ಯೋಪಾಧ್ಯಾಯ ಎಸ್.ಬಿ.ಹೆಳವರ, ಶಿಕ್ಷಕ ವೃಂದ,ಗ್ರಾಮದ ಹಿರಿಯರು ಅಭಿನಂದಿಸಿದ್ದಾರೆ.

Be the first to comment

Leave a Reply

Your email address will not be published.


*