ಬಾಗಲಕೋಟೆ:ಮಳೆಯ ಜೊತೆ ರಭಸದ ಗಾಳಿ ಬೀಸಿದ ಪರಿಣಾಮ ಹುನಗುಂದ ತಾಲ್ಲೂಕಿನ ಚಿತ್ತವಾಡಗಿ ಗ್ರಾಮದ ವೀರಭದ್ರೇಶ್ವರ ದೇವಸ್ಥಾನ ಬೇವಿನಮರ ಆವರಣದಲಿನ ಮೇಲಾಗಿ ಬುಡ ಕ್ಯಾಂಟರ್ ವಾಹನದ ಮೇಲೆ ಬಿದ್ದಿದ್ದು, ಕೆಲವರು ಕೂದಲೆಳೆಯ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಗುರುವಾರ ನಡೆದಿದೆ.
ದೇವಸ್ಥಾನದಲ್ಲಿ ಮದುವೆ ಕಾರ್ಯ ನಡೆಯುತ್ತಿದ್ದು, ಕಾಂಪೌಂಡ್‌ನಲ್ಲಿ ಹತ್ತಾರು ಜನ ಆದರೆ ಪಕ್ಕದಲ್ಲಿನ ಮರ ಬಿದ್ದ ಪರಿಣಾಮ ಜನರು ಓಡಿದರು. ಗಾಳಿಯ ರಭಸಕ್ಕೆ ದೇವಸ್ಥಾನದ ಆವರಣದಲ್ಲಿ ಮೂರ್ನಾಲ್ಕು ಗಿಡಗಳ ಟೊಂಗೆಗಳು ಮುರಿದು ಬಿದ್ದಿವೆ. ಕ್ಯಾಂಟರ್ ವಾಹನದ ಹಿಂಬದಿಯಎರಡು ಕಡೆ ಜಖಂಗೊಂಡಿದೆ.
ನಂತರ ಜೆಸಿಬಿ ವಾಹನದಿಂದ ಕ್ಯಾಂಟರ್ ವಾಹನದ ಮೇಲೆ ಬಿದ್ದ ಮರವನ್ನು ತೆರವುಗೊಳಿಸಲಾಯಿತು. ಗಾಳಿಯ ಆರ್ಭಟಕ್ಕೆ ಯಡಹಳ್ಳಿ ಮತ್ತು ಚಿತ್ತವಾಡಗಿ ಗ್ರಾಮದಲ್ಲಿ 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ನಾಗೂರು ಗ್ರಾಮದಲ್ಲಿ ಸಾಧಾರಣ ಮಳೆಯಾಗಿದ್ದು ಹತ್ತಾರೂ ಮರದ ಟೊಂಗೆಗಳು ಮುರಿದು ಬಿದ್ದಿವೆ.
Be the first to comment