ಲಿಂಗಸುಗೂರು ತಾಲ್ಲೂಕಿನ ಮೀಸಲು ವಿಧಾನಸಭಾ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಾನಪ್ಪ ವಜ್ಜಲ್ ಇವರು ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದಾರೆ . ಇತಿಹಾಸ. ಸೃಷ್ಟಿ ಮಾಡಿದ್ದಾರೆ
ಬಿಜೆಪಿಯ 58,331. ಮತಗಳನ್ನು ಗಳಿಸಿ 2875 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ.
ಹಾಲಿ ಶಾಸಕ ಡಿ ಎಸ್ ಹೂಲಗೇರಿ ಇವರಿಗೆ ಟಪ್ ಪೈಪೋಟಿ ನೀಡಿದ್ದ ಮಾನಪ್ಪ ವಜ್ಜಲ್ ಗೆಲುವು ರೋಚಕ ತಿರುವು ಪಡೆದುಕೊಂಡಿದೆ ಕ್ಷೇತ್ರದಲ್ಲಿ ಕಾಂಗ್ರೆಸ್ ಹೀನಾಯ ಸ್ಥಿತಿಗೆ ಸೋಲೊಪ್ಪಿಕೊಂಡಿದೆ
ಮಾನಪ್ಪ ವಜ್ಜಲ್ ರು ಕಳೆದ ಬಾರಿ ಸೋತು ಕ್ಷೇತ್ರದಲ್ಲಿ ಜನರ ನಾಡಿಮಿಡಿತ ಅರಿತ ವಜ್ಜಲ್ ಕಳೆದ ಎರಡು ಅವಧಿಯಲ್ಲಿ ಶಾಸಕರಾಗಿದ್ದ ಸಂದರ್ಭದಲ್ಲಿ ಮಾಡಿದ ಅನೇಕ ಅಭಿವೃದ್ಧಿ ಯೋಜನೆಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಸಿ ಮತದಾರರ ಮನವೊಲಿಸಲು ಯಶಸ್ವಿಯಾಗಿದ್ದಾರೆ.
ವಜ್ಜಲ್ ರು ಅಧಿಕಾರ ಇಲ್ಲದಿದ್ದರೂ ಕೂಡ ಸರ್ಕಾರದ ಮಹತ್ವಾಕಾಂಕ್ಷಿ ನೀರಾವರಿ ಯೋಜನೆಯಾದ ನಂದವಾಡಗಿ ಯೋಜನೆ ಜಾರಿಗೆ ತರಲು ಇವರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಇದರಿಂದ ಲಿಂಗಸುಗೂರು ಮೀಸಲು ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ನಾಯಕರಲ್ಲಿ ಮನೆಯಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ ಇದಕ್ಕೆಲ್ಲಾ ಕಾರಣ ವಜ್ಜಲ್ ರ ಸಹೋದರರಾದ ನಾಗಪ್ಪ ವಜ್ಜಲ್ ಕರಿಯಪ್ಪ ವಜ್ಜಲ್ ಶ್ರಮ ಅತ್ಯಂತ ಪ್ರಮುಖ ಕೆಲಸ ಮಾಡುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಕಮಲ ಅರಳಿಸುವಲ್ಲಿ ಕಾರಣರಾಗಿದ್ದಾರೆ ಎಂದರೆ ತಪ್ಪಾಗಲಾರದು.
ತಾಲ್ಲೂಕಿನ ಕ್ಷೇತ್ರದ ಜನರಿಗೆ ಕೃತಜ್ಞತೆ ಬಿಜೆಪಿ ಬಾವುಟ ಹಾರಿಸುವ ಮುಖಾಂತರ ಮತ್ತೊಮ್ಮೆ ಶಾಸಕರಾಗಿ ಆಯ್ಕೆಯಾಗಲು ಕಾರಣರಾದ ಮತದಾರರಿಗೆ ಹಾಗೂ ಪಕ್ಷದ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಬೆಂಬಲಿಸಿದ ನಿಮಗೇಲ್ಲಾರಿಗೂ ಧನ್ಯವಾದಗಳು ಎಂದು ನೂತನ ಶಾಸಕ ಮಾನಪ್ಪ ಡಿ ವಜ್ಜಲ್ ಕ್ಷೇತ್ರದ ಜನರಿಗೆ ಅಭಿನಂದನೆಗಳು ಸಲ್ಲಿಸಿದ್ದಾರೆ.
Be the first to comment