ಜಿಲ್ಲಾ ಸುದ್ದಿಗಳು
ಮುದ್ದೇಬಿಹಾಳ(ವಿಜಯಪುರ):
ಮುದ್ದೇಬಿಹಾಳ ಪಟ್ಟಣದ ಬನಶಂಕರಿ ನಗರದ ಬಿಜೆಪಿ ಮುಖಂಡ ಹಾಗೂ ಮಾಜಿ ಪುರಸಭೆ ಸದಸ್ಯ ರಾಜಶೇಖರ ಹೊನ್ನೊಟಗಿ ಹಾಗೂ ಮುದ್ದೇಬಿಹಾಳ ತಾಲೂಕಿನ ಕವಡಿಮಟ್ಟಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶಂಕರಗೌಡ ಪಾಟೀಲ ಬಿಜೆಪಿ ಪಕ್ಷ ತೊರೆದು ಶಾಂತಗೌಡ ಪಾಟೀಲ ನಡಹಳ್ಳಿ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾಗಿ ಪಟ್ಟಣದಲ್ಲಿ ಕಾಂಗ್ರೇಸ್ ಪಕ್ಷಕ್ಕೆ ಹೆಚ್ಚಿನ ಬೆಂಬಲ ದೊರಕಿದಂತಾಯಿತು.
ಈಗಾಗಲೇ ಗ್ರಾಮೀಣ ಪ್ರದೇಶದಲ್ಲಿ ಜನರ ಬೇಡಿಕೆಗಳನ್ನು ಈಡೇರಿಸದ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ಜನ ಬೆಂಬಲ ಕುಸಿತಗೊಂಡಿದೆ. ಆದರೆ ಮುದ್ದೇಬಿಹಾಳ ಹಾಗೂ ತಾಳಿಕೋಟಿ ಪಟ್ಟಣದಲ್ಲಿ ಸಿಸಿ ರೋಡ ಮತ್ತು ಲೈಟಗಳನ್ನು ಹಾಕುವ ಮೂಲಕ ಎರಡೂ ಪಟ್ಟಣದಲ್ಲಿ ಅಲ್ಪಮಟ್ಟದಲ್ಲಿ ಸ್ಥಳೀಯವಾಗಿ ಜನ ಬೆಂಬಲ ಎ.ಎಸ್.ಪಾಟೀಲ ನಡಹಳ್ಳಿ ಅವರಿಗೆ ನೀಡಲಾಗುತ್ತಿತ್ತು. ಆದರೆ ಸ್ಥಳೀಯವಾಗಿಯೂ ಕೆಲ ಮುಖಂಡರನ್ನು ನಿರ್ಲಕ್ಷವಹಿಸಿ ಹಾಗೂ ಮುಖಂಡರ ಬೇಡೆಕೆಗಳನ್ನು ಈಡೇರಿಸದ ಕಾರಣ ಸ್ಥಳೀಯವಾಗಿ ಸಾಕಷ್ಟು ಮುಖಂಡರು ಎ.ಎಸ್.ಪಾಟೀಲ ನಡಹಳ್ಳಿ ವಿರುದ್ಧವಾಗಿದ್ದಾರೆ. ಇಂತಹ ಮುಖಂಡರಲ್ಲಿ ರಾಜಶೇಖರ ಹೊನ್ನಟಗಿ ಒಬ್ಬರಾಗಿದ್ದಾರೆ. ಆದ್ದರಿಂದ ಬಿಜೆಪಿ ಪಕ್ಷ ತೊರೆದು ಇಂದು ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ಎಂದು ಸಿ.ಎಸ್.ನಾಡಗೌಡ ಅಪ್ಪಾಜಿ ಬೆಂಬಲಿಗರು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪುರಸಭೆ ನಾಮನಿರ್ದೇಶಕ ಸದಸ್ಯ ರಾಜು ಹೊನ್ನಟಗಿ, ನಮ್ಮ ನಗರ ಜನಸೇವೆಯೇ ನನ್ನನ್ನು ರಾಜಕೀಯಕ್ಕೆ ಇಳಿಯುವಂತೆ ಮಾಡಿತ್ತು. ಅದರಂತೆ ನಮ್ಮ ಬೆಂಬಲಿಗರ ಮಾತಿನಂತೆ ಸತತವಾಗಿ ಪುರಸಭೆ ಸದಸ್ಯನಾಗಿ ಆಯ್ಕೆಯಾಗುತ್ತಾ ಬಂದೆ. ಆದರೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎ.ಎಸ್.ಪಾಟೀಲ ನಡಹಳ್ಳಿ ಅವರು ನನ್ನ ವಾರ್ಡಿನ ಸಂಪೂರ್ಣ ಸಮಸ್ಯೆಗಳನ್ನು ಹಾಗೂ ಜನರ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದು ಹೇಳಿದಾಗ ನಾನು ಅವರನ್ನು ಬೆಂಬಲಿಸಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನು. ಆದರೆ ಚುನಾವಣೆಯಾದ ನಂತರ ಎ.ಎಸ್.ಪಾಟೀಲ ನಡಹಳ್ಳಿ ಅವರು ನನ್ನನ್ನು ಹಾಗೂ ನಮ್ಮ ವಾರ್ಡಿನ ಜನ ಬೇಡಿಕೆಗಳನ್ನು ಮರೆತರು. ಇದರಿಂದ ಬೇಸತ್ತು ನಾನು ಮತ್ತೇ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂದು ಅವರು ಹೇಳಿದರು.
Be the first to comment