ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯು ಇದ್ದು ಇಲ್ಲದಂತಾಗಿದೆ ನಿಪುಣ ಶಸ್ತ್ರಚಿಕಿತ್ಸೆ ವೈದ್ಯರು ಇಲ್ಲ!ಹೃದಯರೋಗ ಕಾಯಿಲೆಗೆ ಸಂಬಂಧಿಸಿದಂತೆ ವೈದ್ಯರ ಇಲ್ಲ!ನಿಪುಣ ಹೇರಿಗೆ ವೈದ್ಯರು ಇಲ್ಲ!
ಸಾರ್ವಜನಿರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕಾದ ವೈದ್ಯರು ಇಲ್ಲ! ಸುರಪುರದ ಅಧಿಕಾರಸ್ತರ ದಿವ್ಯ ನಿರ್ಲಕ್ಷ್ಯದಿಂದ ಆಸ್ಪತ್ರೆಯಲ್ಲಿ ಅಧೋಗತಿ ಕಡೆಗೆ ಸಾಗಿದೆ ಎಂದು ಆರೋಪಿಸಿದರು.
ಸುರಪುರ ತಾಲ್ಲೂಕಿನ ಬಡ ರೋಗಿ ಕಾಯಿಲೆಗಳು ಕಾಯಿಲೆ ಪರೀಕ್ಷಿಸಲು ಬಂದರೆ ಕಾಯಿಲೆ ಪರೀಕ್ಷಾ ಸಾಮಾನುಗಳಾದ ಇ.ಸಿ.ಜಿ, ಮತ್ತು ಹೃದಯಕ್ಕೆ ಸಂಬಂಧಿಸಿದಂತೆ ಯಾವುದೇ ತಪಾಪಣೆ ಸಾಮಾನುಗಳು ಇಲ್ಲ. ತಾಲ್ಲೂಕಿನ ಯಾದ್ಯಂತ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಹೆಚ್ಚಿನ ಜನ ಸಾವಿಗೀಡಾಗಿತ್ತಿದು ಚಿಕಿತ್ಸೆ ನೀಡಬೇಕಾದ ಸುರಪುರ ಆಸ್ಪತ್ರೆಯೆ ಯಮಧರ್ಮನ ಆಸ್ಥಾನದಂತಾಗಿದೆ.ಜನರಿಗೆ ಚಿಕಿತ್ಸೆ ನೀಡಲು ಸ್ಟಾಪ್ ನರ್ಸಗಳ ಬೇಕು ಆದರೆ ಈ ಆಸ್ಪತ್ರೆಯಲ್ಲಿ ಸ್ಟಾಪ ನರ್ಸಗಳ ಕೊರತೆ ಕೂಡಾ ಇದೆ. ಇರುವ ಸಿಬ್ಬಂದಿ ವರ್ಗದವರು ಸಮಯಕ್ಕೆ ಸರಿಯಾಗಿ ಕರ್ತವ್ಯ ಬರುತ್ತಾರೆ ಎಂದರೆ ಅದು ಇಲ್ಲ ಕೆಲವರು ಕರ್ತವ್ಯ ನಿರ್ವಹಿಸುವುದಿಲ್ಲ. 6 ತಿಂಗಳ ಹಿಂದೆ ಸಿಟಿ ಸ್ಕ್ಯಾನ್ ಬಂದರೂ ಕೂಡಾ ಆಸ್ಪತ್ರೆ ಗೆ ಬರುವ ಹೋಗಿಗಳಿಗೆ ಬಳಸುತ್ತಿಲ್ಲ ಬಂದ ಮಾಡಿ ಇಟ್ಟಿದ್ದಾರೆ. ಸಿಟಿ ಸ್ಕ್ಯಾನ್ ಅವಶ್ಯಕತೆ ಇದ್ದರೆ ಖಾಸಗಿ ಆಸ್ಪತ್ರೆಗೆ ಹೋಗಿ ಸಿಟಿ ಸ್ಕ್ಯಾನ ಮಾಡಿಸಿಕೋಳಬೇಕಾದ ಪರಿಸ್ಥಿತಿ ಬಡ ರೋಗಿಗಳದಾಗಿದೆ. ಇದರಿಂದ ಬಡರೋಗಿಗಳು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಸುರಪುರದ ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳಿಗೆ ಉತ್ತಮ ಮತ್ತು ಉಚಿತ ಆರೋಗ್ಯ ಸೇವೆ ಹೊದಗಿಸಬೇಕು. ತಾಲ್ಲೂಕಿನ ಆಸ್ಪತ್ರೆಯಲ್ಲಿ ಇರುವ ಅವ್ಯವಸ್ಥಯನ್ನು ಕೂಡಲ್ಲೇ ಸರಿಪಡಿಸಬೇಕು. ಇಲ್ಲವಾದಲ್ಲಿ ಮುಂದಿನಗಳಲ್ಲಿ ಹಂತ ಹಂತವಾಗಿ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ( ಸಂಘಟನೆಗಳ ಒಕ್ಕೂಟದ) ಜಿಲ್ಲಾಧ್ಯಕ್ಷ ಶಿವಮೋನಯ್ಯ ಎಲ್.ಡಿ. ನಾಯಕ ದೇವರಗೋನಾಲ ಅವರು ಹೋರಾಟದ ಎಚ್ಚರಿಕೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಪದಾಧಿಕಾರಿಗಳು ಮತ್ತು ತಾಲೂಕು ಪದಾಧಿಕಾರಿಗಳು ,ಕಾರ್ಯಕರ್ತರು ಭಾಗಿಯಾಗಿದ್ದರು.
ಯಾದಗಿರಿ ಜಿಲ್ಲಾ ಕ್ರೈಮ ವರದಿಗಾರರು : ಮೌನೇಶ ಆರ್ ಭೋಯಿ ತಿಂಥಣಿ
Be the first to comment