ಹುಣಸಗಿ: ದೇಶದಲ್ಲಿಯೇ ಬಡವರ ಏಳಿಗೆಗಾಗಿ ಶ್ರಮಿಸಿದ ಹಾಗೂ ರೈತರ ಜೀವನ ಉದ್ಧಾರಗೊಳಿಸಲು ಹಗಲಿರುಳು ಎನ್ನದೇ ಈ ಭಾಗದ ರೈತರ ಜಮೀನುಗಳಿಗೆ ನೀರಾವರಿ ಸೌಲಭ್ಯವನ್ನು ಕಲ್ಪಿಸಿಕೊಟ್ಟ ಕಾಂಗ್ರೆಸ್ ಪಕ್ಷವು ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿದೆ ಹೀಗಾಗಿ ಈ ಬಾರಿ ನಡೆಯುವ ೨೦೨೩ ರ ವಿಧಾನಸಭೆ ಚುನಾವಣೆಯಲ್ಲಿ ರಾಜಾವೆಂಕಟಪ್ಪನಾಯಕ ಅವರನ್ನು ಮತ್ತೊಮ್ಮೆ ಸುರಪುರ ಶಾಸಕರನ್ನಾಗಿ ಮಾಡಲು ಹಗಲಿರುಳು ಶ್ರಮಿಸುತ್ತೇನೆ ಎಂದು ನೂತನ ಹುಣಸಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪದಗ್ರಹಣ ಮಾಡಿದ ಚಂದ್ರಶೇಖರ ದಂಡಿನ ಹೇಳಿದರು.
ಪಟ್ಟಣದ ಯುಕೆಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಹಮ್ಮಿಕೊಂಡ ತಾಲೂಕ ಬ್ಲಾಕ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿ, ನನ್ನ ವೈಯಕ್ತಿಕ ಕೆಲಸಗ ಕಾರ್ಯಗಳನ್ನು ಬದಿಗಿಟ್ಟು ನಿರಂತರ ಕಾಂಗ್ರೆಸ್ ಪಕ್ಷಕ್ಕಾಗಿ ಶ್ರಮಿಸುವೆ. ಪಕ್ಷ ವಹಿಸಿದ ಜವಾಬ್ದಾರಿಯನ್ನು ಕಷ್ಟ ಪಟ್ಟು ಮಾಡದೇ ಇಷ್ಟ ಪಟ್ಟು ಪ್ರಾಮಾಣಿಕವಾಗಿ ಮಾಡುವೆ. ನಿಷಾವಂತ ಸ್ವಾಭಿಮಾನ ಮತದಾರರು ಆಸೆ ಆಮಿಷಕ್ಕೆ ಒಳಗಾಗದೆ ನಮ್ಮ ಕಾಂಗ್ರೆಸ್ ಪಕ್ಷವು ಈಹಿಂದೆ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಒಮ್ಮೆ ಅವಲೋಕನ ಮಾಡಿಕೊಂಡು ಪಕ್ಷಕ್ಕಾಗಿ ಕೆಲಸ ಮಾಡಿ ತಾಲೂಕಿನಲ್ಲಿ ಬಡವರ ಏಳಿಗೆಗಾಗಿ ಶ್ರಮಿಸಿದ ಕಾಂಗ್ರೆಸ್ ಪಕ್ಷವನ್ನು ಬಲಪಡಿಸುವ ಮೂಲಕ ರಾಜಾವೆಂಕಟಪ್ಪನಾಯಕ ಅವರನ್ನು ಮತ್ತೊಮ್ಮೆ ಸುರಪುರ ಶಾಸಕರನ್ನಾಗಿ ಆಯ್ಕೆ ಮಾಡುವುದರೊಂದಿಗೆ ನಮ್ಮ ಮತಕ್ಷೇತ್ರದಲ್ಲಿ ಅತೀ ಹೆಚ್ಚು ಮತಗಳ ಅಂತರದಿಂದ ಗೆಲ್ಲಿಸೋಣ ಎಂದರು.
ಅಶ್ವಾರೂಢ ಮೆರವಣಿಗೆಯೊಂದಿಗೆ ಅದ್ಧೂರಿಯಾಗಿ ಜರುಗಿದ ನೂತನ ಹುಣಸಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ
ಮಹಾಂತಸ್ವಾಮಿ ವೃತ್ತದಿಂದ ಪಟ್ಟಣದ ಮುಖ್ಯ ಬೀದಿಯೊಂದಿಗೆ ಬಸವೇಶ್ವರ ವೃತ್ತದ ಮೂಲಕ ಯು.ಕೆ.ಪಿ ಕ್ಯಾಂಪಿನ ನೀಲಕಂಠೇಶ್ವರ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ ಬೃಹತ್ ವೇದಿಕೆಯವರೆಗೆ ಬೈಕ್ ರ‍್ಯಾಲಿ, ಕುದರೆ ಕುಣಿತ ಡಿಜೆಯೊಂದಿಗೆ ಬೃಹತ್ ಮೆರವಣಿಗೆ ಮೂಲಕ ರಾಜಾ ವೆಂಕಟಪ್ಪ ನಾಯಕ ಕಾಂಗ್ರೆಸ್ ಮುಖಂಡರೊಂದಿಗೆ ವೇದಿಕೆಗೆ ಆಗಮಿಸಿದರು.
* ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುದಿಗೌಡಪ್ಪಗೌಡ ಅವರಿಂದ ನೂತನ ಹುಣಸಗಿ ತಾಲೂಕು ಅಧ್ಯಕ್ಷರಾದ ಚಂದ್ರಶೇಖರ ದಂಡಿನ ಅವರಿಗೆ ಪಕ್ಷದ ಧ್ವಜ ಕೊಡುವ ಮೂಲಕ ತಮ್ಮ ಅಧಿಕಾರ ಹಸ್ತಾಂತರ ಮಾಡಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಜಿ ಶಾಸಕ ರಾಜಾ ವೆಂಕಟಪ್ಪ ನಾಯಕ ಮಾತನಾಡಿ, ಅನ್ನ ಬಾಗ್ಯ, ಕ್ಷೀರ ಭಾಗ್ಯ ಹೀಗೆ ಹಲವಾರು ಭಾಗ್ಯಗಳನ್ನು ನೀಡಿದ ಕಾಂಗ್ರೆಸ್ ಸರಕಾರ. ಕಾರ್ಯಕರ್ತರ ಪಕ್ಷವಾದ ಕಾಂಗ್ರೆಸ್ ಪಕ್ಷವನ್ನು ೨೦೨೩ ರ ಚುನಾವಣೆಯಲ್ಲಿ ಆಶೀರ್ವದಿಸಬೇಕೆಂದು ಕೇಳಿದರು.
ಜಿಪಂ ಮಾಜಿ ಆಧ್ಯಕ್ಷ ರಾಜಶೇಖರ ಪಾಟೀಲ ವಜ್ಜಲ್, ಸುರಪುರ ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ನಿಂಗರಾಜೊ ಬಾಚಿಮಟ್ಟಿ, ಡೆವಿಡ್ ಮುದ್ನೂರ, ನಾಗಣ್ಣ ಸಾಹು ದಂಡಿನ ಮಾತನಾಡಿ ನಂತರ ದೇವಿಂದ್ರಪ್ಪ (ಡೇವಿಡಿ) ಮುದನೂರು ಮಾತನಾಡಿ ಹುಣಸಗಿ ಪಟ್ಟಣದ ಮೂಲಕ ಅಶ್ವಮೇಧ ಆರಂಭವಾಗಿದೆ ಅಶ್ವಮೇಧದ ಕುದುರೆ ಎಂದರೆ ಚಂದ್ರಶೇಖರ ದಂಡಿನ ಅವರಾಗಿದ್ದರೆ. ಇಂದಿನ ರಾಜಕೀಯ ರಂಗದಲ್ಲಿ ಶಾಂತಿಯಿಂದ ಇದ್ದರೆ ಆಗದು ಸಂಗೊಳ್ಳಿ ರಾಯಣ್ಣ ಮತ್ತು ಕಿತ್ತೂರು ಚನ್ನಮ್ಮಳಂತೆ ಕತ್ತಿಯನ್ನು ಹಿಡಿದು ಯುದ್ದಕ್ಕೆ ತಯಾರಾಗಿ ನಿಲ್ಲಬೇಕು ಅಂದಾಗ ನಾವು ಎದುರಾಳಿಗೆ ತಕ್ಕ ಪಾಠ ಕಲಿಸಲು ಸಾಧ್ಯವಾಗುತ್ತದೆ. ಜೊತೆಗೆ ಈ ನಮ್ಮ ಸುರಪುರ ಮತಕ್ಷೇತ್ರದಲ್ಲಿ ಯಾವುದೇ ಜಾತಿ ಭೇದವಿಲ್ಲದೇ ಎಲ್ಲರನ್ನೂ ಸಮನಾಗಿ ತನ್ನ ಮನೆಯವರಂತೆ ನೋಡಿಕೊಂಡು ಹೋಗುವ ವ್ಯಕ್ತಿ ಹಾಗೂ ಜಾತಿರಹಿತಕ್ಕಾಗಿ ರಾಜಕೀಯ ಮಾಡಿಕೊಂಡು ಬಂದಿರುವ ಜೊತೆಗೆ ಯುವಕರಿಗೆ ಒಳ್ಳೆಯ ಉದ್ಯೋಗ ಸಿಗಬೇಕಾದರೆ ಈ ಬಾರಿ ರಾಜಾವೆಂಕಟಪ್ಪನಾಯಕರಿಗೆ ಮತ ಹಾಕುವ ಮೂಲಕ ಅವರನ್ನು ಮತ್ತೊಮ್ಮೆ ಈ ರಾಜ್ಯದ ವಿಧಾನ ಸಭೆಯ ಪಡಸಾಲೆಗೆ ಕಳುಹಿಸಿಕೊಡುವ ಜವಾಬ್ದಾರಿ ನಮ್ಮೆಲ್ಲರ ಜವಾಬ್ದಾರಿ ಇದೆ ಎಂದು ಹೇಳಿದರು.
* ಚೆನ್ನಯ್ಯಸ್ವಾಮಿ ಹಿರೇಮೀಠ ಪ್ರಾಸ್ಥಾವಿಕವಾಗಿ ಮಾತನಾಡಿ, ರಾಜಕೀಯಮನೆತನದಿಂದ ಬಂದವರು ನಾಗಣ್ಣ ಸಾಹು ದಂಡಿನ ಅವರ ಕುಟುಂಬ ನಲವತ್ತು ವರ್ಷಗಳ ಕಾಲ ರಾಜಕೀಯ ರಂಗದಲ್ಲಿ ಬೆಳೆದು ಬಂದಿದೆ. ಅದೇ ರೀತಿ ಚಂದ್ರಶೇಖರ ದಂಡಿನ ಅವರು ಕೂಡಾ ಉತ್ತಮ ನಾಯಕನಾಗಿ ಕಾರ್ಯ ನಿರ್ವಹಿಸುವ ಭರವಸೆ ಇದೆ. ಪಕ್ದ ಹಿರೀಯರ ಮಾರ್ಗದರ್ಶನದಲ್ಲಿ ನಡೆದುಕೊಂಡು ಹೋಗುವವರು ಎಂದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ನಾಗಣ್ಣ ಸಾಹು ದಂಡಿನ, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರಗೌಡ ಪಾಟೀಲ, ಕೆಪಿಸಿಸಿ ಸದಸ್ಯ ಸಿದ್ದಣ್ಣ ಮಲಗಲದಿನ್ನಿ, ಗುಂಡಪ್ಪ ಸೋಲ್ಲಾಪುರ, ಮಲ್ಲಣ್ಣ ಸಹುಕಾರ ಮುಧೋಳ, ಬಸವರಾಜ ಬಳಿ, ಮುದಿಗೌಡ ಕುಪ್ಪಿ, ವೆಂಕು ಸಾಹುಕಾರ, ಶರಣು ದಂಡಿನ, ಆರ್ ಎಮ್ ರೇವಡಿ, ಪರಮಣ್ಣ ಶಾಂತಪೂರ, ಈಶ್ವರಪ್ಪ ವಜ್ಜಲ್, ರಾಜಾ ವೇನುಗೋಪಾಲ, ರವಿಕುಮಾರ ಆಲ್ದಾಳ, ರಾಜಾ ಪಿಡ್ಡನಾಯಕ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ಸುವರ್ಣ ಯಲಿಗಾರ, ಸಿದ್ರಾಮಪ್ಪ ಮುದಗಲ್, ಸಿದ್ದು ರೇವಡಿ, ರವಿಕುಮಾರ ಮಲಗಲದಿನ್ನಿ, ಸೂಗಪ್ಪ ಚಂದಾ, ಶಾಂತಗೌಡ ಪಾಟೀಲ, ತಾರಾನಾಥ ಚವ್ಹಾಣ, ಸುರಪುರ ನಗರ ಸಭೆಯ ಎಲ್ಲ ಗೌರವಾನ್ವಿತ ಸದಸ್ಯರು, ಕಕ್ಕೇರಾ ಪುರಸಭೆಯ ಗೌರವಾನ್ವಿತ ಸದಸ್ಯರು ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.
ಇದೇ ಸಂದರ್ಭದಲ್ಲಿ ಕೋಳಿಹಾಳ ಗ್ರಾಮದ 70 ಮಹಿಳೆಯರು, ಬೊಮ್ಮಗುಡ್ಡ, ಗುಳಬಾಳ ಗ್ರಾಮದ ಜನರು ಬಿಜೆಪಿ ಪಕ್ಷ ತೊರೆದು ರಾಜಾ ವೆಂಕಟಪ್ಪ ನಾಯಕ ಸಮ್ಮುಖದಲ್ಲಿ ಅಣ್ಣಪ್ಪಗೌಡ ಪೋಲಿಸ್ ಪಾಟೀಲ, ಎಲ್ ಎಫ್ ಮುಜಾವರ, ಆರ್ ಎ ಪಾಟೀಲ, ಬಸವರಾಜ ಎನ್ ಸಾಸನೂರ, ಹುಲಗಪ್ಪ ಗುರಿಕಾರ, ಪರಮಣ್ಣ ಬೂದಿಹಾಳ, ಪರಮಣ್ಣ ಎನ್ ಪೂಜಾರ, ಸಾಹೇಬ ಪಟೇಲ ಸಾಲೋಡಗಿ ಸೇರಿದಂತೆ ೭೯ ಜನ ಕಾಂಗ್ರೆಸ್ ಪಕ್ಷ ಸೇರಿದರು.
ಬಾಪೂಗೌಡ ಪಾಟೀಲ ಸ್ವಾಗತಿಸಿದರು. ಆರ್. ಎಲ್. ಸುಣಗಾರ ಕಾರ್ಯಕ್ರಮ ನಿರೂಪಿಸಿದರು. ರಾಮು ಅಳ್ಳಳ್ಳಿ ವಂದಿಸಿದರು.
Be the first to comment