ಉಜ್ಜಿನಿ:2500ಜನರಿಗೆ ಉಚಿತ ತಪಾಸಣೆ, 296 ಜನರಿಗೆ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸೆ

ವಿಜಯನಗರ:  ಜಿಲ್ಲೆ ಕೂಡ್ಲಿಗಿ, ಶ್ರೀಕ್ಷೇತ್ರ ಉಜ್ಜಿನಿ ಗ್ರಾಮದಲ್ಲಿ .ಶ್ರೀಮದ್ ಉಜ್ಜಯಿನಿ ಸದ್ಧರ್ಮ ಸಿಂಹಾಸನಾದೀಶ್ವರ, 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕ ಕೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ. ದಿವಂಗತ ಎನ್.ಟಿ.ಬೊಮ್ಮಣ್ಣನವರ ಸ್ಮರಣಾರ್ಥ, ಡಾ,ಎನ್.ಟಿ.ಶ್ರೀನಿವಾಸ ಅಭಿಮಾನಿಗಳ ಬಳಗದಿಂದ. ಮಾ19ರಂದು ಜರುಗಿದ, ಉಚಿತ ಆರೋಗ್ಯ ತಪಾಸಣಾ ಶಿಬಿರದಲ್ಲಿ. ಉಜ್ಜನಿ ಗ್ರಾಮ ಸೇರಿದಂತೆ ನೆರೆ ಹೊರೆ ಗ್ರಾಮಗಳಿಂದ ಆಗಮಿಸಿದ್ದ, ಎರೆಡು ಸಾವಿರಕ್ಕೂ ಹೆಚ್ಚು ಜನರು ವಿವಿದ ರೀತಿಯ ಅನಾರೋಗ್ಯ ಕ‍ಾರಣಕ್ಕೆ ತಪಾಸಣೆ ಮಾಡಿಸಿಕೊಂಡರು. ಅದರಲ್ಲಿ 296ಜನರಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗೆ, ಅರ್ಹರೆಂದು ಗುರುತಿಸಲಾಯಿತು. ಅವರನ್ನು ಹೊಸಪೇಟೆಯ ಅಶ್ವಿನಿ ಕಣ್ಣಿನ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಅವರಿಗೆ ಉಚಿತವಾಗಿ ಶಸ್ತ್ರ ಚಿಕಿತ್ಸೆ ಮಾಡಿಸಿ. ಅವರು ಮರಳಿ ಬರುವ ವ್ಯವಸ್ಥೆಯನ್ನು ಡಾ,ಎನ್.ಟಿ.ಶ್ರೀನಿವಾಸರು ಮಾಡಿದ್ದಾರೆ.

*ತಂದೆಯ ಕನಸು-ನನಸು ಮಾಡಲು ಸಮಾಜ ಸೇವೆ*-

ತಪಾಸಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ, ಎನ್.ಟಿ.ಶ್ರಿನಿವಾಸರವರು ಮಾತನಾಡಿದರು. ಮೊಟ್ಟ ಮೊದಲನೆಯದಾಗಿ ಶ್ರೀಉಜ್ಜಿನಿ ಪೀಠಕ್ಕೆ, ಹಾಗೂ ಶ್ರೀಜಗದ್ಗುರುಗಳಿಗೆ ಗೌರವಪೂರ್ವಕವಾದ ನಮಸ್ಕಾರಗಳು ಎಂದು ನಮಿಸಿದರು.

ಭಾರತೀಯ ಪರಂಪರೆಯಲ್ಲಿ ಮಠಗಳಿಗೆ ತುಂಬಾ ಪ್ರಾಚೀನತೆ ಇದೆ, ಸಮಾಜಿಕವಾಗಿ ಹಾಗೂ ಸಾಂಸ್ಕೃತಿಕವಾಗಿ, ಮಠಗಳು ತನ್ನದೇ ಆದ ನೆಲೆಯಲ್ಲಿ ಶ್ರಮಿಸಿರುವುದನ್ನು ಕಾಣಬಹುದು. ಮಠಗಳು ಮಾನವ ಸಮಾಜದ ಒಳಿತಿಗಾಗಿ, ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಿಂದಿನಿಂದಲೂ ಹಾಕಿಕೊಂಡು ಬಂದಿವೆ.

ಉಜ್ಜಿನಿ ಪೀಠದ ಶ್ರೀ ಜಗದ್ಗುರು ಸಿದ್ಧಲಿಂಗ ಸ್ವಾಮೀಜಿಗಳ ಮಠ ಪರಂಪರೆ, ಮತ್ತು ಇಲ್ಲಿನ ಬೇಡನಾಯಕರಿಗೂ ಸಾಂಸ್ಕೃತಿಕವಾದ ಸಂಬಂಧಗಳಿವೆ.

ಹೀಗಾಗಿ ನನ್ನ ತಂದೆಯವರು ಕೂಡ್ಲಿಗಿ ತಾಲೂಕಿನ ಕುಗ್ರಾಮಗಳಲ್ಲಿ, ತಮ್ಮದೇ ಆದ ಶಾಲೆಗಳನ್ನು ತೆರೆದು ಅಕ್ಷರ ಬೀಜವನ್ನು ಬಿತ್ತಿದವರು. ನನ್ನ ತಂದೆಯವರು ತಮ್ಮ ಮಗ ವೈದ್ಯರಾಗಿ ಸಮಾಜ ಸೇವೆ ಮಾಡಬೇಕು, ಎಂಬುದಾಗಿ ಅವರು ಕನಸು ಕಂಡಿದ್ದರು. ಹೀಗಾಗಿ ಅವರ ಆಸೆ ಮತ್ತು ಕನಸ್ಸಿನಂತೆ, ನಾನು ನಿಮ್ಮ ಸೇವೆ ಮಾಡಲು ನಿಮ್ಮ ಮುಂದೆ ಬಂದು ನಿಂತಿದ್ದೇನೆ ಎಂದು ಎನ್.ಟಿ.ಶ್ರೀನಿವಾಸರು ನುಡಿದರು.

ಈ ಸಂದರ್ಭದಲ್ಲಿ ಸಮಾಜ ಸೇವಕರೂ ಹಾಗೂ ನೇತ್ರತಜ್ಞರಾದ ಎನ್.ಟಿ.ಶ್ರೀನಿವಾಸ ಹಾಗೂ, ಅವರ ಸಹಪಾಟಿ ವೈದ್ಯರು. ಮತ್ತು ಅವರ ಆಸ್ಪತ್ರೆ ಸಿಬ್ಬಂದಿಯವರು, ಶಿಬಿರದಲ್ಲಿ ತಪಾಸಣೆ ಕಾರ್ಯ ನಿರ್ವಹಿಸಿದರು. ಮಾಜಿ ಶಾಸಕರಾದ ದಿವಂಗತ ಎನ್.ಟಿ.ಬೊಮ್ಮಣ್ಣನವರ ಅಭಿಮಾನಿಗಳು ಹಾಗೂ ಸ್ನೇಹಿತರು, ಡಾ,ಎನ್.ಟಿ.ಶ್ರೀನಿವಾಸ ಅಭಿಮಾನಿಗಳ ಬಳಗದ ಪದಾಧಿಕಾರಿಗಳು. ಎನ್.ಟಿ.ತಮ್ಮಣ್ಣನವರ ಅಭಿಮಾನಿಗಳು ಹಾಗೂ ಸ್ನೇಹಿತರು, ಶಿಬಿರದಲ್ಲಿ ಸಕ್ರೀಯವಾಗಿ ಪಾಲ್ಗೊಂಡಿದ್ದರು. ಉಜ್ಜನಿ ಗ್ರಾಮದ ಹಾಗೂ ನೆರೆ ಹೊರೆ ಗ್ರಾಮಗಳ ಹಿರಿಯ ಗಣ್ಯರು, ವಿವಿದ ಜನಪ್ರತಿನಿಧಿಗಳು,ವಿವಿದ ಸಮುದಾಯಗಳ ಮುಖಂಡರು, ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿದ್ದರು. ಆರೋಗ್ಯ ತಪಾಸಣೆ ಶಿಬಿರದಲ್ಲಿ ಉಪಸ್ಥಿತರಿದ್ದ, ಸರ್ವರಿಗೂ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

 

Be the first to comment

Leave a Reply

Your email address will not be published.


*