ಮಂಡ್ಯ:: ಮಂಡ್ಯ ಹೆಮಾವತಿ ಜಲಾಶಯ ಯೋಜನೆಯ ಹೊಸಹೊಳಲು ಕೆರೆ ಮೇಲ್ಕಂಡ ನಾಲಾಯ ನಿರ್ಮಾಣದ ಉದ್ದೇಶಕ್ಕಾಗಿ ಭೂಸ್ವಾಧೀನ ಪಡಿಸಿಕೊಂಡಿದ್ದು .4(1) , 6(1),ಅಧಿ ಸೂಚನೆಯಾಗಿರುತ್ತದೆ ಆದರೆ ಇದೀಗ ಬೂಕನಕೆರೆ ಸಹಾಯಕ ಕಾರ್ಯಪಾಲಕ ಅಭಿಯಂತರು ರವಿ ಮತ್ತು ಗುತ್ತಿಗೆದಾರರು ಸೇರಿಕೊಂಡು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ.
ಮರ ಮತ್ತು ಜಮೀನನ್ನು ಕಳೆದುಕೊಂಡ ರೈತರಿಗೆ ಯಾವುದೇ ಪರಿಹಾರ ಕೊಡದೆ ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಚೌಡೇನಹಳ್ಳಿ ಗ್ರಾಮ ಪಂಚಾಯಿತಿಗೆ ಸೇರಿದ್ದ ನೂರಾರು ರೈತರು ಪ್ರತಿಭಟನೆ ಮಾಡಿದರು.
ಜಮೀನು ಮತ್ತು ಮರಗಳನ್ನು ಕಳೆದುಕೊಂಡ ರೈತರಿಗೆ ಕಾನೂನುಬದ್ಧವಾಗಿ ತಕ್ಕ ಪರಿಹಾರ ಕೊಡದಿದ್ದರೆ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಉಪವಾಸ ಸತ್ಯಾ ಮಾಡಬೇಕಾಗುತ್ತದೆ ಎಂದು ವಕೀಲರಾದ ಧನಂಜಯ ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಮರವನ್ನು ಕಳೆದುಕೊಂಡ ರೈತ ಮಹಿಳೆ ನಮಗೆ ಜೀವನ ಸಾಗಿಸಲು ಇದ್ದ ಮರಗಳನ್ನು ಕಡಿದು ಹಾಕಿ ನಮಗೆ ಬೀದಿ ಪಾಲಾಗಿ ಮಾಡಿದ್ದಾರೆ ಎಂದು ತಮ್ಮ ಅಳುವನ್ನು ತೂರಿಕೊಂಡರು.
ಮನವಿಯನ್ನು ಸ್ವೀಕರಿಸಿದ ಮನೋಹರ್ ಅವರು ಮೇಲ್ಮಟ್ಟದ ಅಧಿಕಾರಿಗಳಿಗೆ ವಿಚಾರವನ್ನು ತಿಳಿಸಿ ಸೂಕ್ತ ಪರಿಹಾರವನ್ನು ಕೊಡುವುದಾಗಿ ಭರವಸೆ ನೀಡಿದರು.
ಇದೇ ಸಂದರ್ಭದಲ್ಲಿ ರೈತರಾದ ಶ್ರೀನಿವಾಸ್ ,ತಿಮ್ಮೇಗೌಡ, ತಮ್ಮಣ್ಣೇಗೌಡ ,ರಾಮೇಗೌಡ, ಪಾಂಡುರಂಗೇಗೌಡ ,ವೆಂಕಟೇಗೌಡ, ರಾಜ ದಾಸಯ್ಯ ,ಜವರ ದಾಸಯ್ಯ, ವೆಂಕಟೇಶ್ ,ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಹಾಜರಿದ್ದರು
Be the first to comment