ಬೆಂಗಳೂರ: ದೇಶದ ಮೊದಲ ಇಂಟೆಲಿಜೆನ್ಟ್ ಫ್ಯಾನ್ ಅನ್ನು ಹ್ಯಾವೆಲ್ಸ್ ಇಂಡಿಯಾ ಲಿಮಿಟೆಡ್ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದೆ. ಈ ಫ್ಯಾನ್ ಕೊಠಡಿಯ
ತಾಪಮಾನವನ್ನು ತಂತಾನೆ ಗ್ರಹಿಸಿ ಅದಕ್ಕೆ ತಕ್ಕಂತೆ ವೇಗವನ್ನು ಹೊಂದಿಸಿಕೊಂಡು ತಂಗಾಳಿ ನೀಡಲಿದೆ.
ಇದರ ಹೆಸರು ಇಂಟೆಲಿಜೆನ್ಟ್ ಸೀಲಿಂಗ್ ಫ್ಯಾನ್ ಹಾವ್ವೆಲ್ಸ್ ಕಾರ್ನೆಸಿಯಾ-1.
ಬೇರೆ ಫ್ಯಾನ್ ಗಳಂತೆ ನೀವು ಇದರಲ್ಲಿ ಸ್ಪೀಡನ್ನು ಫಿಕ್ಸ್ ಮಾಡುವಂತಿಲ್ಲ. ಕೊಠಡಿಯ ತಾಪಮಾನ ಎಷ್ಟಿದೆ.? ಅದಕ್ಕೆ ಎಷ್ಟು ಗಾಳಿ ಬೇಕು.? ಎಷ್ಟು ವೇಗದಲ್ಲಿ ತಿರುಗಬೇಕು.? ಇಂತಹದನ್ನೆಲ್ಲ ಈ ಫ್ಯಾನ್ ತಂತಾನೆ ನಿರ್ಧರಿಸುತ್ತದೆ.
ಅದಕ್ಕೆ ತಕ್ಕಂತೆ ಗಾಳಿಯನ್ನು ನೀಡುತ್ತದೆ. ಇದಲ್ಲದೆ ಸ್ಲೀಪ್ ಮತ್ತು ಬ್ರಿಜ್ ನೊಂದಿಗೆ ರಾತ್ರಿವೇಳೆ ಗಾಳಿಯನ್ನು ನೀಡಲಿದೆ. 5 ಹಂತದ ವೇಗ ನಿಯಂತ್ರಕ ಗಳನ್ನು ಹೊಂದಿದ್ದು, ಟೈಮರ್ ಸೆಟಿಂಗ್ ಮತ್ತು ಆಟೋಮ್ಯಾಟಿಕ್ ಒನ್ ಅಂಡ್ ಆಫ್ ಸೌಲಭ್ಯವನ್ನು ಹೊಂದಿದೆ.
ಈ ಪ್ಯಾನ್ ಅನ್ನು ಬಿಡುಗಡೆ ಮಾಡಿ ಮಾತನಾಡಿದ ಹವೇಲ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಎಲೆಕ್ಟ್ರಿಕಲ್ ಡುರ್ರಬ್ಲೆಸ್ ಅಧ್ಯಕ್ಷ ರವೀಂದ್ರ ಸಿಂಗ್ ನೇಗಿ ಅವರು ‘ಈ ಚತುರ ಫ್ಯಾನ್ ಆಕರ್ಷಕ ಬೆಲೆ ಯಾದ 2500 ರುಪಾಯಿಗಳಲ್ಲಿ ಲಭ್ಯವಿದೆ ಎಂದರು.
Be the first to comment