ಸುರಪುರ: ತಾಲೂಕಿನ ಬಿಜಾಸಪುರ ಸೇರಿದಂತೆ ಖಾನಾಪುರ ಎಸ್.ಹೆಚ್. ಜಿಲ್ಲಾಪಂಚಾಯತಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಶಾಸಕ ನರಸಿಂಹ ನಾಯಕ ಚಾಲನೆ ನೀಡಿದರು,ಮಾಜಿ ಜಿ.ಪಂ ಅಧ್ಯಕ್ಷ ರಾಜಾ ಹನುಮಪ್ಪ ನಾಯಕ (ತಾತಾ)ಇತರರಿದ್ದರು.
ಸುರಪುರ: ತಾಲೂಕಿನ ಅನೇಕ ಗ್ರಾಮಗಳಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಇಮದು ಚಾಲನೆ ನೀಡುತ್ತಿದ್ದು,ಮುಂಬರುವ ಕೆಲವು ತಿಂಗಳುಗಳಲ್ಲಿ ಸಿಸಿ ರಸ್ತೆ ನಿರ್ಮಾಣಗೊಳ್ಳಲಿವೆ ಎಂದರು.ಅಲ್ಲದೆ ಕಾಮಗಾರಿಗಳನ್ನು ನಿರ್ಮಿಸುತ್ತಿರುವ ಸಂಸ್ಥೆಯವರು ಒಳ್ಳೆ ಗುಣಮಟ್ಟದ ಕಾಮಗಾರಿ ನಿರ್ಮಿಸಬೇಕು,ಒಂದು ವೇಳೆ ಉತ್ತಮ ಗುಣಮಟ್ಟವಿಲ್ಲದಿದ್ದಲ್ಲಿ ಅಂತಹ ಕಾಮಗಾರಿ ನಿರ್ಮಿಸಿದ ಸಂಸ್ಥೆ ಮತ್ತು ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವುದಾಗಿ ಶಾಸಕ ನರಸಿಂಹ ನಾಯಕ (ರಾಜುಗೌಡ) ಅಧಿಕಾರಿಗಳಿಗೆ ಎಚ್ಚರಿಸಿದರು.
ತಾಲೂಕಿನ ಖಾನಾಪುರ ಎಸ್.ಹೆಚ್.ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಬಿಜಾಸಪುರ ಗ್ರಾಮದಲ್ಲಿ ಸುಮಾರು ೨೧.೯೭ ಲಕ್ಷ ರೂಪಾಯಿಗಳು ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ಮಾತನಾಡಿ,ಉತ್ತಮವಾದ ಕಾಮಗಾರಿಗಳ ನಿರ್ಮಿಸಿ ಇದರಿಂದ ಹತ್ತಾರು ವರ್ಷಗಳು ಕಾಂಗಾರಿ ಬಾಳಿದರೆ ಜನತೆ ನಿಮ್ಮನ್ನು ಸ್ಮರಿಸಲಿದ್ದಾರೆ ಎಂದರು.
ನಂತರ ರುಕ್ಮಾಪುರ ಗ್ರಾಮದಲ್ಲಿ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಿದರು ಹಾಗು ಚೌಡೇಶ್ವರಿಹಾಳ ಗ್ರಾಮದಲ್ಲಿ ೧೫ ಲಕ್ಷ ವೆಚ್ಚದ ಸಿಸಿ ರಸ್ತೆ ಹಾಗು ಚರಂಡಿ ನಿರ್ಮಾಣಕ್ಕೆ ಗುದ್ದಲಿಪೂಜೆ ನೆರವೇರಿಸಿದರು. ನಂತರ ಸೂಗುರು ಗ್ರಾಮದಲ್ಲಿ ೨೬.೩೭ ಲಕ್ಷ ರೂಪಾಯಿಗಳ ಸಿಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಬೇವಿನಾಳ ಗ್ರಾಮದಲ್ಲಿ ೨೧.೪೩ ಲಕ್ಷ ರೂಪಾಯಿಗಳ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ನಂತರ ಚಂದ್ಲಾಪುರ ಗ್ರಾಮದಲ್ಲಿ ೧೫ ಲಕ್ಷ ವೆಚ್ಚದಲ್ಲಿ ಸಿಸಿ ರಸ್ತೆ ಹಾಗು ಚರಂಡಿ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿ ನಂತರ ಎರಡು ಶಾಲಾ ಕೋಣೆಗಳನ್ನು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರಾಜಾ ಹನಮಪ್ಪ ನಾಯಕ (ತಾತಾ),ಜಿ.ಪಂ ಸದಸ್ಯ ಮರಿಲಿಂಗಪ್ಪ ಕರ್ನಾಳ,ವಿಜಯಕುಮಾರ ಮಂಗ್ಯಾಳ,ಸಣ್ಣ ದೇಸಾಯಿ ದೇವರಗೋನಾಲ,ದೇವರಾಜ ಮಕಾಶಿ,ಭೀಮಣ್ಣ ಬೇವಿನಾಳ,ದೋಡ್ಡ ದೇಸಾಯಿ, ವಿರುಪಾಕ್ಷಿ ಕರ್ನಾಳ,ದುರ್ಗಪ್ಪ ಗೋಗಿಕೇರಾ,ಜಗದೀಶ ಪಾಟೀಲ,ಮಲ್ಲು ಹೂಗಾರ,ನಿಂಗಣ್ಣ ನಾಯಕ ಸೇರಿದಂತೆ ಅನೇಕರಿದ್ದರು.
Be the first to comment