ಕಬಡ್ಡಿ ಆಟಗಾರರಿಗೆ ಅಪಘಾತ : ಶಾಸಕ ರಾಜುಗೌಡ ಆಸ್ಪತ್ರೆಗೆ ಭೇಟಿ

ಯಾದಗಿರಿ : ಚಿತ್ತಾಪೂರ ರಸ್ತೆಯ ಮಾರ್ಗ ಮಧ್ಯದಲ್ಲಿ ಸೇಡಂ ತಾಲೂಕಿನ ಲಾಡಲಾಪೂರ ಹತ್ತಿರ ಆಣಿಕೇರಿಯಲ್ಲಿ ನಡೆದ ಕಬ್ಬಡ್ಡಿ ಪಂದ್ಯದಲ್ಲಿ ಭಾಗವಹಿಸಿದ ಸುರಪುರ ತಾಲೂಕಿನ ಕರ್ನಾಳ ಗ್ರಾಮದ ಕಬಡ್ಡಿ ಆಟಗಾರರು

ಆಟವನ್ನು ಮುಗಿಸಿಕೊಂಡು ಮರಳಿ ಬರುವಾಗ ಯಾದಗಿರಿ ಸಮೀಪದ ಮಾರ್ಗ ಮಧ್ಯದಲ್ಲಿ ಅಪಘಾತ ಸಂಭವಿಸಿದೆ.ಅದೃಷ್ಟವಶಾತ ಯಾವುದೇ ಪ್ರಾಣಪಾಯವಾಗಿಲ್ಲ 38 ಆಟಗಾರರ ಪೈಕಿ 28 ಯುವಕರಿಗೆ ಗಾಯಗಳಾಗಿದ್ದು ಇನ್ನೂ ಮೂರು ಯುವಕರಿಗೆ ಗಂಭೀರ ಗಾಯಗಳಾಗಿದ್ದು ಇನ್ನೂಳಿದ ಯುವಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಕಲಬುರ್ಗಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳುಗಳನ್ನು ಸುರಪುರ ಶಾಸಕ ನರಸಿಂಹ ನಾಯಕ ರಾಜುಗೌಡರು ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.

ನಂತರ ಗಾಯಗೊಂಡ ಆಟಗಾರಿಗೆ ದೈರ್ಯ ತುಂಬಿದರು ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ವೈಯಕ್ತಿಕವಾಗಿ 2 ಲಕ್ಷ ರೂಪಾಯಿಗಳನ್ನು ನೀಡಿ ಮುಂದಿನ ಚಿಕಿತ್ಸೆಗಾಗಿ ಸಹಾಯ ಮಾಡುತ್ತೆನೆ ಎಂದು ಹೇಳಿದರು

ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಮರಿಲಿಂಗಪ್ಪ ನಾಯಕ ಕರ್ನಾಳ ಸೇರಿದಂತೆ ಕರ್ನಾಳ ಗ್ರಾಮದ ಮುಖಂಡರು ಇದ್ದರು

Be the first to comment

Leave a Reply

Your email address will not be published.


*