ಗುತ್ತಿಗೆದಾರನಿಂದ ಕಳಪೆ ಕಾಮಗಾರಿ ಕೆಬಿಜೆಎನ ಎಲ್ ಅಧಿಕಾರಿಗಳು ಶಾಮೀಲ ರೈತ ಸಂಘ ಆರೋಪ.!

ಅಮರೇಶ ಕಾಮನಕೇರಿ

ಹುಣಸಗಿ: ಹುಣಸಗಿ ತಾಲ್ಲೂಕಿನ  ಚನ್ನೂರ ಬಳಿಯ ಕೆಬಿಜೆಎನ ಕಾಲುವೆಗೆ ಪಿಕ್ ಅಪ್ ಕಾಮಗಾರಿಯ ಅಡಿಯಲ್ಲಿ ನಿರ್ಮಿಸಲಾಗುತ್ತಿರುವ ಕಾಲುವೆ ನಿರ್ಮಾಣ ಕಾಮಗಾರಿ ಕಳಪೆಯಾಗಿದೆ ಎಂದು ರೈತರು

ಆರೋಪಿಸಿದ್ದಾರೆ.ಗುಣಮಟ್ಟದ ಕಾಮಗಾರಿ ನಡೆಸುವವರೆಗೂ ಗುತ್ತಿಗೆದಾರರಿಗೆ ಬಿಲ್ ಪಾವತಿಸಬಾರದು.
ಅಧಿಕಾರಿಗಳು ಒತ್ತಡಕ್ಕೆ ಮಣಿದು ಬಿಲ್ ಪಾವತಿ ಮಾಡಿದರೆ ಹೋರಾಟ ನಡೆಸಲಾಗುವುದು ಎಂದು ಭಾರತೀಯ ಕಿಸಾನ ಸಂಘದ ಸಿದ್ಧಲಿಂಗಯ್ಯಸ್ವಾಮಿ ಹಿರೇಮಠ ಹಾಗೂ ಇತರರು ಕೃಷ್ಣಾ ಭಾಗ್ಯ ಜಲ ನಿಗಮದ ಅಧಿಕಾರಿಗಳಿಗೆ ತಿಳಿಸಿದ್ದಾರೆ.

ಕೃಷ್ಣಾ ಭಾಗ್ಯ ಜಲ ನಿಗಮದ ನಾರಾಯಣಪುರ ವಲಯದ ಹುಣಸಗಿ ಉಪವಿಭಾಗದಿಂದ ಕಾಮಗಾರಿ ನಡೆಸಲಾಗುತ್ತಿದೆ. ಕಾಲುವೆ ಕಾಮಗಾರಿ ನಿರ್ಮಾಣ ಹಂತದಲ್ಲಿಯೇ ಸಿಮೆಂಟ್ ಕಾಂಕ್ರೀಟ್ ಗೋಡೆ ಕುಸಿದು ಬಿದ್ದಿದೆ. ಇದು ಕಳಪೆ ಕಾಮಗಾರಿಗೆ ಹಿಡಿದ ಕೈಗನ್ನಡಿ ಎಂದು ಈರಣ್ಣಗೌಡ, ವಿಜಯಕುಮಾರ ಗುಡಗುಂಟಿ, ನಿಂಗಣ್ಣ ಮೇಟಿ, ಶಂಕರಗೌಡ ಗುಡಗುಂಡ ಆರೋಪಿಸಿದರು.

ಚನ್ನೂರ ಗ್ರಾಮದ ಮುಖಾಂತರ ಹರಿಯುತ್ತಿರುವ ಹಿರೆ ಹಳ್ಳದಿಂದ ಸುಮಾರು 40 ಕ್ಯುಸೆಕ್ ನೀರನ್ನು ಸುಮಾರು 3 ಸಾವಿರ ಎಕರೆ ಪ್ರದೇಶಕ್ಕೆ ಹರಿಸುವ ಕಾಮಗಾರಿ ಇದಾಗಿದೆ. ನಾಲ್ಕು ಹಳ್ಳಿಗಳ ರೈತರಿಗೆ ಇದರಿಂದ ಅನುಕೂಲವಾಗಲಿದ್ದು, ಅಂದಾಜು ₹1.33 ಕೋಟಿ ಇದೆ. ಕಳೆದ ಒಂದು ದಶಕದ ಹಿಂದೆ ಎಸ್ಸಿಪಿ-ಟಿಎಸ್ಪಿ ಅನುದಾನದಲ್ಲಿ ಅಂದಾಜು ₹5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿತ್ತು ಎಂದಿದ್ದಾರೆ.

ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ಸೋಮವಾರ ಸ್ಥಳ ಪರಿಶೀಲನೆ ನಡೆಸಲಾಗುವುದು. ಈ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದ ನಿಗಮದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ವಿ.ಎಲ್. ಕಮ್ಮಾರ ‘ಅಂಬಿಗ ನ್ಯೂಸ’ಗೆ ತಿಳಿಸಿದರು

Be the first to comment

Leave a Reply

Your email address will not be published.


*