ರಾಜ್ಯ ಸುದ್ದಿಗಳು
ಬೆಂಗಳೂರು
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿರುವ ಸೋನು ಶ್ರೀನಿವಾಸ್ ಗೌಡ ಈಗ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಅಲ್ಲಿ ತಮ್ಮ ಕುರಿತು ಶಾಕಿಂಗ್ ವಿಷಯವನ್ನು ತಿಳಿಸಿದ್ಧಾರೆ.
ಬಿಗ್ ಬಾಸ್ ಒಟಿಟಿ ಶೋನಲ್ಲಿ ಬಿಗ್ಬಾಸ್ ಸ್ಪರ್ಧಿಗಳಿಗೆ ನಾನು ಯಾರು ಎಂಬ ಟಾಸ್ಕ್ ನೀಡಿದ್ದಾರೆ. ಇದರಲ್ಲಿ ಪ್ರತಿಯೊಬ್ಬ ಸ್ಪರ್ಧಿಯೂ ತಮ್ಮ ಖಾಸಗಿ ಬದುಕಿನ ವಿವರಗಳನ್ನು ಹಂಚಿಕೊಂಡಿದ್ದಾರೆ. ಈ ವೇಳೆ ಸೋನು ಶ್ರೀನಿವಾಸ್ ಗೌಡ ತಮ್ಮ ಖಾಸಗಿ ವಿಡಿಯೋ ಲೀಕ್ ಆಗಿತ್ತು ಎಂಬ ವಿಷಯವನ್ನು ಒಪ್ಪಿಕೊಂಡಿದ್ದಾರೆ. ಅಷ್ಟೇ ಅಲ್ಲ, ತಮ್ಮದು ಇನ್ನೊಂದು ವಿಡಿಯೋ ಇದೆ ಎಂದು ಹೇಳಿದ್ಧಾರೆ
ಸೋನು ಗೌಡ ನನಗೆ ಗೊತ್ತಿರುವ ವ್ಯಕ್ತಿ ನನ್ನ ಜೊತೆ ಮೂರು ವರ್ಷ ಇದ್ದ. ಅವನು ಎಂಎಸ್ಸಿ ಮುಗಿಸಿದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋದ. ನಂತರ ಪ್ರಪೋಸ್ ಮಾಡಿದ. ನಾನೂ ಒಪ್ಪಿಕೊಂಡೆ. ನಂತರ ನಮ್ಮ ಪ್ರೀತಿ ನಿಜವಾಗಿದ್ದರೆ ವಿಡಿಯೋ ಕಾಲ್ ಮಾಡು ಅಂದ. ನಾನು ನೇರವಾಗಿ ವಿಡಿಯೋ ಕಾಲ್ ಮಾಡಿದೆ. ಎಲ್ಲ ಹುಡುಗಿಯರ ಲೈಫ್ನಲ್ಲಿ ಇದು ಕಾಮನ್. ಆದರೆ ಅವನು ಅದನ್ನೆಲ್ಲ ರೆಕಾರ್ಡ್ ಮಾಡಿಕೊಂಡ ಎಂದು ಹೇಳಿದ್ದಾರೆ. ಅವನು ನೀನು ನನ್ನನ್ನು ಬಿಟ್ಟು ಬೇರೆ ಯಾರನ್ನೂ ಮದುವೆ ಆಗೋಕೆ ಆಗಲ್ಲ ಅಂತ ಆತ ಬ್ಲಾಕ್ ಮೇಲ್ ಮಾಡಲು ಶುರುಮಾಡಿದ. ಆಮೇಲೆ ನನಗೇ ಆ ವಿಡಿಯೋ ಕಳಿಸಿದ. ಒಂದೇ ಕ್ಷಣದಲ್ಲಿ ನಾನು ನಮ್ಮ ಮನೆಯ ಮಾನ ಮರ್ಯಾದೆ ತೆಗೆದುಹಾಕಿಬಿಟ್ಟೆ. ಹುಡುಗಿಯಾಗಿ ಹುಟ್ಟಿದ್ದೇ ತಪ್ಪಾಯ್ತು ಅಂತ ಅಳಲು ಶುರುಮಾಡಿದೆ. ಕುಟುಂಬದವರು ಮತ್ತು ಸಂಬಂಧಿಕರೆಲ್ಲ ನನಗೆ ಬೈಯ್ದರು ಎಂದು ಆ ಕಹಿ ಘಟನೆಯನ್ನು ನೆನಪು ಮಾಡಿಕೊಂಡು ಸೋನು ಕಣ್ಣೀರು ಹಾಕಿದ್ದಾರೆ.
Be the first to comment