ಜೇವರ್ಗಿ ವರದಿ : ಜಿಲ್ಲೆಯ ಕೋನೆ ಹಳ್ಳಿ ಜೇವರ್ಗಿ ತಾಲ್ಲೂಕಿನ ಪ್ರಮುಖ ಹಳ್ಳಿ ಆಗಿರುವ ಜೇರಟಗಿಯಲ್ಲಿ ಸುಮಾರು 3000 ಜನಸಂಖ್ಯೆ ಹೊಂದಿದೆ.ಗ್ರಾಮವು ರಾಜ್ಯ ಹೆದ್ದಾರಿ 50ಕ್ಕೆ ಹೊಂದಿಕೊಂಡಂತೆ ಇದ್ದು ಕಲ್ಯಾಣ ನಗರವೆಂದೆ ಖ್ಯಾತವಾಗಿರುವ ಈ ಊರಿನಲ್ಲಿ ಗ್ರಾಮದ ರಸ್ತೆಗಳು ಸಂಪೂರ್ಣವಾಗಿ ಹದಗಟ್ಟಿವೆ ಪ್ರತಿನಿತ್ಯ ಗ್ರಾಮಸ್ಥರು ಗಟಾರದಂತೆ ಇರುವ ರಸ್ತೆಗಳ ಮದ್ಯ ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸಬೇಕಾಗಿದೆ.
ಗ್ರಾಮದ ಅಭಿವೃದ್ಧಿಗೆ ಬಂದ ಬೃಹತ್ ಪ್ರಮಾಣದ ಅನುದಾನ ಕೂಡ ಯಾರ ಪಾಲಾಗುತ್ತದೆ ಅಂತ ಗೊತ್ತಾಗುತ್ತಿಲ್ಲ.? ಇದಕ್ಕೆ ಸಂಬಂಧಪಟ್ಟಂತೆ ಪಂಚಾಯಿತಿ ಅಧಿಕಾರಿಗಳಿಗೆ ಕೇಳಲು ಹೋದರೆ ಅಧಿಕಾರಿಗಳು ಸಾಮಾನ್ಯರ ಕೈಗೆ ಸಿಗುವುದಿಲ್ಲ ಒಂದು ವೇಳೆ ಸಿಕ್ಕರೆ ಮೇಲಾಧಿಕಾರಿಗಳ ಕಡೆ ಕೈ ಮಾಡಿ ತೋರಿಸುತ್ತಾರೆ ಗ್ರಾಮದ ವಿಕಾಸವಾದರೆ ದೇಶ ವಿಕಾಸವಾದಂತೆ ಎಂದು ದೊಡ್ಡ ದೊಡ್ಡ ಭಾಷಣ ಬಿಗಿಯುವ ಭಾಷಣಕಾರರು ಮತ್ತು ರಾಜಕಾರಣಿಗಳು ಇತ್ತ ಕಡೆ ಸ್ವಲ್ಪ ಲಕ್ಷ್ಯ ಕೋಡಿಬೇಕು ಜನಸಾಮಾನ್ಯರ ಕಷ್ಟಗಳು ನಿಮ್ಮ ಕಣ್ಣಿಗೆ ಕಾಣುತ್ತಿಲ್ಲವವೇ ಎಂದು ಯುವ ಸಮುದಾಯದ ಮತ್ತು ಮಹಿಳೆಯರು ತಾಲೂಕಿನ ಶಾಸಕರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಶ್ರೀ ಚನ್ನಯ್ಯ ವಸ್ತ್ರದ ಉಪಾಧ್ಯಕ್ಷರು ಕಲ್ಯಾಣ ಕರ್ನಾಟಕ
ರಾಜ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ
ಜೇರಟಗಿ ಗ್ರಾಮದ ಅಭಿವೃದ್ಧಿಗೆಂದು ಬರುವ ಹಣ ಶಾಸಕರ ಮತ್ತು ಅಧಿಕಾರಗಳ ಹಿಂಬಾಲಕರ ಪಾಲಾಗುತ್ತಿದ್ದು ಶಾಸಕರು ಮತ್ತು ಅಧಿಕಾರಿಗಳು ಗ್ರಾಮದ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಮಾಜಿ ಮುಖ್ಯಮಂತ್ರಿ ಕ್ಷೇತ್ರ ಇಂತ ಹೀನಾಯ ಸ್ಥಿತಿಗೆ ತಲುಪಲು ಅವರ ಮಗನೆ ಕಾರಣವಾಗುತ್ತಿರುವುದು ಕ್ಷೇತ್ರದ ಜನತೆಯ ಕರ್ಮ
ಗ್ರಾಮಗಳ ಗೋಳು ಅದಗ ಗ್ರಾಮದ ಉದ್ಧಾರದ ಸಂಕಲ್ಪದೊಂದಿಗೆ ಗ್ರಾಮ ವಾಸ್ತವ್ಯ ಮಾಡಿದರಿವ ಶಾಸಕರು ಮತ್ತು ಅಧಿಕಾರಿಗಳು ವಾಸ್ತವವಾಗಿ ನೋಡಿದರೆ ಯಾವುದೇ ಅಭಿವೃದ್ಧಿ ಕಾರ್ಯಗಳು ಕೂಡ ನಡೆದೆ ಇರುವುದು ನೋಡಿ ಸುಮ್ಮನೆ ಇರುವುದು ನೋಡಿದರೆ ಬೇಲಿನೆ ಎದ್ದು ಹೊಲ ಮೈದಂತಿದೆ. ಹ ಶಾಸಕರು ಇತ್ತ ಕಡೆ ಸ್ವಲ್ಪ ಗಮನ ಕೊಡಬೇಕು ಕನಿಷ್ಠ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿಯುವ ನೀರು,ಜನರು ಸಂಚರಿಸುವಂತ ರಸ್ತೆ ಮತ್ತು ವಿದ್ಯಾರ್ಥಿಗಳು ಮತ್ತು ರೈತರಿಗೆ ತೊಂದರೆ ಆಗದ ರೀತಿಯಲ್ಲಿ ನಿರಂತರ ವಿದ್ಯುತ್ ಆದರೂ ಒದಗಿಸಿ ಗ್ರಾಮದ ವಿಕಾಸ ಕನಸು ನನಸು ಮಾಡಬೇಕಾಗಿದೆ ಶಾಸಕರು ಮತ್ತು ಅಧಿಕಾರಿಗಳು. ಜೇರಟಗಿ ಗ್ರಾಮದ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಎಲ್ಲ ಅಧಿಕಾರಗಳ ಜೋತೆ ಈ ಕೂಡಲೇ ಚರ್ಚಿಸಿ ಸಮಸ್ಯೆಗಳಿಗೆ ಮುಕ್ತಿ ನೀಡಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ.
Be the first to comment