ಜೇವರ್ಗಿ :- ಜೇವರ್ಗಿ ತಾಲ್ಲೂಕ ಕೇಂದ್ರದಲ್ಲಿ ಇರುವ ಮೈನಾರಿಟಿ ಮೊರಾರ್ಜಿ ಹಾಸ್ಟೆಲ್ ಗೆ ಹೋಗಲು ವಿದ್ಯಾರ್ಥಿಗಳಿಗೆ ದಾರಿ ಇಲ್ಲ.
ಹಾಸ್ಟಲ್ ನಲ್ಲಿ ಇರುವ ವಿದ್ಯಾರ್ಥಿಗಳು ಮಳೆ ಬಂದಾಗ ಕೆಸರಿನಲ್ಲಿ ಹೋಗಬೇಕು. ಕ್ಷೇತ್ರದ ಶಾಸಕರು ಮತ್ತು ಅಧಿಕಾರಿಗಳು ಮೈನಾರಟಿ ಸಮುದಾಯದ ಬಗ್ಗೆ ದೊಡ್ಡದಾದ ಭಾಷಣಕ್ಕೆ ಮಾತ್ರ ಸೀಮಿತವಾಗಿದ್ದು, ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಕಿಂಚಿತ್ತೂ ಕಾಳಚಿ ತೋರುತ್ತಿಲ್ಲ. ಮೈನಾರಿಟಿಗೆ ZP,TP Ticket ಇಲ್ಲಾ . ಮೈನಾರಿಟಿಗೆ ಶಾದಿ ಮಹಲ್ ಇಲ್ಲ. ಕೋನೆ ಮೈನಾರಿಟಿ ಸಮುದಾಯದ ವಿದ್ಯಾರ್ಥಿಗಳಿಗಾಗಿ ಇರುವ ಹಾಸ್ಟೆಲ್ ಗಾದರು ಮೂಲ ಸೌಕರ್ಯ ವಾದ ದಾರಿ ಕೂಡ ಇಲ್ಲ. ತಾಲೂಕಿನಾದ್ಯಂತ ಇರುವ ಮೈನಾರಿಟಿ ಶಾಲೆಗಳ ರಿಪೇರಿ ಇಲ್ಲ. ಮೈನಾರಿಟಿ ಏರಿಯಾದಲ್ಲಿ ಶೋಚ ಶೋಚನೀಯವಾಗಿದೆ. ಮೈನಾರಿಟಿ ಬಗ್ಗೆ ಮಾತಾಡುವವರು ಕೋನೆ ಪಕ್ಷ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯ ಮಾಡಿಕ್ಲ. ಮೈನಾರಿಟಿಗಳಿಗೆ ಇಷ್ಟೆಂದು ಸಮಸ್ಯೆಗಳು ಇವೆ ಸ್ಥಳಿಯ ಶಾಸಕರು,ಅಧಿಕಾರಿಗಳು, ಕೋನೆ ಪಕ್ಷ ರಾಜಕೀಯ ಮಾಡುತ್ತಿರುವ ಮುಸ್ಲಿಂ ಸಮುದಾಯದ ಮುಖಂಡರು ಸೌಲಭ್ಯಗಳ ಸಲುವಾಗಿ ಧ್ವನಿ ಎತ್ತದೆ ಇರುವುದು ಸಾಮಾನ್ಯ ಮುಸ್ಲಿಂ ಜನರಲ್ಲಿ ಯಕ್ಷ ಪ್ರಶ್ನೆ ಆಗಿ ಕಾಡುತ್ತಿದೆ ? ಮಾನ್ಯ ಶಾಸಕರಿಗೆ ಕೇವಲ ಮುಸ್ಲಿಂ ಸಮುದಾಯದ ಮತ ಬೇಕು ಅದರಲ್ಲೂ ಜೇವರ್ಗಿ, ಯಡ್ರಾಮಿ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಇರುವ ಮುಸ್ಲಿಂ ಮತಗಳ ಪಡೆದು ಶಾಸಕರಾಗುತ್ತಿರುವ ಜೇವರ್ಗಿ ಶಾಸಕರಿಗೆ ಮುಸ್ಲಿಂ ಸಮುದಾಯದ ಅಭಿವೃದ್ಧಿ ಕೆಲಸ ಮಾಡುಲು ಮನಸ್ಸಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ.
ಮುಸ್ಲಿಂ ಸಮುದಾಯದ ವಿದ್ಯಾರ್ಥಿಗಳ ಹಾಸ್ಟೆಲ್ ದಾರಿಯಾದರು ನಿರ್ಮಿಸಿ ಕೋಡುವವರೆ ಕಾದು ನೋಡಬೇಕಾಗಿದೆ.
Be the first to comment