ನಿರಂತರ ಮುಷ್ಕರದಿಂದ ಕಾರ್ಮಿಕ ಕುಟುಂಬಗಳು ತೊಂದರೆ ಅನುಭವಿಸುತ್ತಿವೆ : ದೇವೇಂದ್ರ ತಳವಾರ

ವರದಿ : ರಾಮು ಜೇವರ್ಗಿ ಜಿಲ್ಲಾ ವರದಿಗಾರರು ಕಲಬುರಗಿ

ಬೆಂಗಳೂರು: ಕರೋನಾ ಸಂಕಷ್ಟದಿಂದ ಉದ್ಭವಿಸಿದ ಲಾಕ್‌ಡೌನ್‌ನಿಂದಾಗಿ ಸುಮಾರು 2 ವರ್ಷಗಳ ಕಾಲ ಕಾರ್ಮಿಕರ ಬದುಕು ದುಸ್ತರವಾಗಿತ್ತು. ಇದೀಗ ಪದೇ ಪದೇ ಹೋರಾಟ ಮತ್ತು ಮುಷ್ಕರ ನಡೆಸುವುದರಿಂದ ಕಾರ್ಮಿಕರಯ ನೌತಿಕ ಸ್ಥೈರ್ಯ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಇದೇ 7ರಂದು ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್‌ ಕರೆ ನೀಡಿರುವ ಪ್ರತಿಭಟನೆಗೆ ತಮ್ಮ ಸಂಘಟನೆ ಬೆಂಬಲ ಇಲ್ಲ ಎಂದು ಕರ್ನಾಟಕ ರಾಜ್ಯ ಕಾರ್ಮಿಕರ ಹಿತರಕ್ಷಣಾ ಸಂಘ (ರಿ) ಸ್ಪಷ್ಟಪಡಿಸ

ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಸಂಘಟನೆ ಕಾರ್ಯಾಧ್ಯಕ್ಷ  ದೇವೇದ್ರ, ತಳವಾರ ಫಡರೇಷನ್‌ ಮಂಡಳಿ ಮುಂದೆ ಇರಿಸಿರುವ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ ರೂಪ ನೀಡುವ ಅಗತ್ಯವಿಲ್ಲ. ಬೇಡಿಕೆಗಳ ಈಡೇರಿಕೆಗೆ ಸಂಘಟನೆ ಹಿರಿಯರು ಮತ್ತು ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಬಗೆಹರಿಸುವಂತಹ ಸ್ವರೂಪದ್ದಾಗಿವೆ ಎಂದು ಪ್ರತಿಪಾದಿಸಿರುವ ಅವರು, ಹೀಗಾಗಿಯೇ ಕರ್ನಾಟಕ ರಾಜ್ಯ ಕಾರ್ಮಿಕರ ಹಿತ ರಕ್ಷಣಾ ಸಂಘ (ರಿ) ಮತ್ತು ತಮ್ಮ ಈ ಸಂಘಟನೆ ಜತೆ ಗುರ್ತಿಸಿಕೊಂಡಿರುವ ಇತರೆ ಸಂಘ ಸಂಸ್ಥೆಗಳು ಈ ಮುಷ್ಕರದಿಂದ ದೂರ ಉಳಿಯುವುದಾಗಿ ಸ್ಪಷ್ಟಪಡಿಸಿದ್ದಾರೆ.

ತಮ್ಮ ಯೂನಿಯನ್‌ ಸತತ ಪ್ರಯತ್ನದಿಂದ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ವಿವಿಧ ಸಹಾಯಧನಗಳ ಅರ್ಜಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಇತ್ಯರ್ಥಪಡಿಸಿದೆ. ಸರ್ಕಾರ ಸಹಾಯಧನ ನೀಡಲು ಆದೇಶ ಹೊರಡಿಸಿದೆ. ಸಹಾಯಧನ ಶೀಘ್ರ ಬಿಡುಗಡೆಗೆ ಒತ್ತಾಯಿಸುವುದಾಗಿ ತಿಳಿಸಿರುವ ಅವರು, ರಾಜ್ಯ ಸ್ಕಾಲರ್‌ ಶಿಪ್‌ ಪೋರ್ಟಲ್‌ ಮೂಲಕ 400 ಕೋಟಿಗೂ ಅಧಿಕ ಮೊತ್ತದ ವಿದ್ಯಾರ್ಥಿ ವೇತನ ನೀಡಲಾಗಿದ್ದು, ವಿದ್ಯಾರ್ಥಿ ವೇತನ ಅರ್ಜಿ ಸಲ್ಲಿಕೆಗೆ ಮೇ 31ರ ವರೆಗೆ ಕಾಲಾವಕಾಶ ವಿಸ್ತರಿಸಿದ್ದು ಉತ್ತಮ ಬೆಳವಣಿಗೆ ಎಂದಿರುವ ದೇವೇಂದ್ರ , ಪ್ರಸಕ್ತ ವರ್ಷ ಮನೆ ನಿರ್ಮಾಣಕ್ಕೆ ಸಹಾಯಧನ ಒದಗಿಸುವ ಪ್ರಸ್ತಾವನೆಯನ್ನು ತಮ್ಮ ಸಂಘಟನೆ ಬೆಂಬಲಿಸಿದೆ ಎಂದು ತಿಳಿಸಿದ್ದಾರೆ.
ರಾಜ್ಯದಾದ್ಯಂತ ಮೊಬೈಲ್‌ ಕ್ಲಿನಿಕ್‌, ಶಿಶುಪಾಲನಾ ಕೇಂದ್ರಗಳ ಆರಂಭ ಮಾಡಿರುವುದು ಮತ್ತು ಕಟ್ಟಡ ಕಾರ್ಮಿಕ ಮಕ್ಕಳಿಗೆ ಐಎಎಸ್‌ ಮತ್ತು ಕೆಎಎಸ್‌ ತರಬೇತಿ ಸೇರಿದಂತೆ ಇಂಟಿಗ್ರೆಟೆಡ್‌ ಪದವಿಯೊಂದಿಗೆ ತರಬೇತಿ ಹಾಗೂ ಪೈಲೆಟ್‌ ತರಬೇತಿಗಾಗಿ ಯೋಜನೆ ರೂಪಿಸಿರುವ ಸಚಿವ ಶಿವರಾಂ ಹೆಬ್ಬಾರ್ ನೇತೃತ್ವದ ಕಾರ್ಮಿಕ ಇಲಾಖೆಯ ಯೋಜನೆಗಳು ಕಾರ್ಮಿಕ ಬದುಕನ್ನು ಹಸನಾಗಿರುವ ಕ್ರಮಗಳಾಗಿವೆ ಎಂದು ಕಾರ್ಮಿಕ ಹಿತ ರಕ್ಷಣಾ ಸಂಘದ ರಾಜ್ಯ ಕಾರ್ಯಾಧ್ಯಕ್ಷ ತಿಳಿಸಿದ್ದಾರೆ.
ಕಟ್ಟಡ ಕಾರ್ಮಿಕರ ಮಕ್ಕಳು ಖಾಸಗಿ ಶಾಲೆಯ ಮಕ್ಕಳು ಪಡೆಯುತ್ತಿರುವ ಶಿಕ್ಷಣವನ್ನು ಪಡೆಯುವಂತೆ ಅನುವಾಗಲು ಸಾಮಗ್ರಿಗಳ ಹೊರತಾಗಿ ಇತರೆ ವಿಶೇಷ ಸಾಮಗ್ರಿಗಳನ್ನು ನೀಡಲು ಕ್ರಮಕೈಗೊಂಡಿರುವುದು ಕಾರ್ಮಿಕ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಅಮೂಲ್ಯವಾದ ಕ್ರಮ ಎಂದು ಹೇಳಿರುವ ಅವರು, ಕಟ್ಟಡ ಕಾರ್ಮಿಕರ ತರಬೇತಿಗೆ ಅಗತ್ಯವಾದ ಸಾಮಗ್ರಿಗಳ ವಿತರಣೆ, ಕಾರ್ಮಿಕರು ಮತ್ತು ಅವರ ಅಲಂಭಿತರ ಆರೋಗ್ಯ ದೃಷ್ಟಿಯಿಂದ ನಡೆಸಲಾಗುತ್ತಿರುವ ಆರೋಗ್ಯ ತಪಾಸಣಾ ಶಿಬಿರಗಳಂತಹ ಕ್ರಮಗಳನ್ನು ಮುಂದುವರೆಸುವಂತೆ ಸಂಘಟನೆ ಆಗ್ರಹಪಡಿಸಿದೆ.

ಸಹಾಯಧನ ಏರಿಕೆಗೆ ಓತ್ತಾಯ:

ಪ್ರಸ್ತುತ ವೈದ್ಯಕೀಯ ವೆಚ್ಚವನ್ನು ಹೋಲಿಸಿದಾಗ ಸಹಾಯಧನ ಕಡಿಮೆ ಇದ್ದು, ವಾಸ್ತವಿಕ ಚಿಕಿತ್ಸಾ ವೆಚ್ಚವನ್ನು ನೀಡುವಂತೆ ಮತ್ತು ಕಟ್ಟಡ ಕಾರ್ಮಿಕ ಮಕ್ಕಳಿಗೆ ತಾಂತ್ರಿಕ ಹಾಗೂ ಜಾಬ್‌ ಓರಿಯಂಟೆಂಡ್‌ ಕೋರ್ಸ್‌ಗಳ ತರಬೇತಿ ನೀಡುವಂತೆ ತಮ್ಮ ಸಂಘಟ ಒತ್ತಾಯಿಸುತ್ತಿರುವುದಾಗಿ ಹೇಳಿಕೆಯಲ್ಲಿ ದೇವೇಂದ್ರ ತಿಳಿಸಿದ್ದಾರೆ.
ಮದುವೆ ಸಹಾಯಧನವನ್ನು ಲಕ್ಷ ರೂ.ಗಳಿಗೆ ಏರಿಕೆ ಮಾಡಬೇಕು, ಕಾರ್ಮಿಕ ಕಲ್ಯಾಣ ಮಂಡಳಿ ಯೋಜನೆಗಳನ್ನು ಕಟ್ಟಡ ಕಾರ್ಮಿಕ ಮಂಡಳಿಯಂತೆ ಎಲ್ಲರಿಗೂ ತಲುಪಿಸುವ ಜತೆಗೆ 21 ಸಾವಿರ ರೂ. ವೇತನ ಪಡೆಯುತ್ತಿರುವ ಯೋಜನೆಯನ್ನು 30 ಸಾವಿರ ರೂ.ಗೆ ವಿಸ್ತರಣೆ ಮಾಡಬೇಕು. ಮಂಡಳಿಯಲ್ಲಿ ಇಎಸ್‌ಐ, ಪಿಎಫ್‌ ಇರುವುದರಿಂದ ಹೆಚ್ಚಿನ ಸಹಾಯಧನ ಪಡೆಯಲು ಸಾಧ್ಯವಾಗುತ್ತಿಲ್ಲ ಹೀಗಾಗಿ ವಾಸ್ತವಿಕ ವೈದ್ಯಕೀಯ ವೆಚ್ಚವನ್ನು ನೀಡಬೇಕು ಎಂದು ಆಗ್ರಹಿಸಲಾಗಿದೆ.
ಕಾರ್ಮಿಕ ಕಲ್ಯಾಣ ಮಂಡಳಿ ನಿರ್ದೇಶಕರಿಗೆ ವಿವೇಷನಾ ನಿಧಿಯನ್ನು ಸ್ಥಾಪಿಸುವ ಮೂಲಕ ಸಂಘಟನೆಗಳಿಗೆ ನೆರವಾಗಬೇಕು ಮತ್ತು ನೊಂದಾಯಿತರಲ್ಲದ ಕಟ್ಟಡ ಕಾರ್ಮಿಕರು ಮರಣ ಹೊಂದಿದ ಸಂದರ್ಭದಲ್ಲಿ 5 ಲಕ್ಷ ರೂ. ಪರಿಹಾರ ಒದಗಿಸುವ ಜತೆಗೆ ಮನೆಗಳ ನಿರ್ಮಾಣಕ್ಕೆ ನೀಡುವ ಸಾಲವನ್ನು ಸಹಾಯಧನನ್ನಾಗಿ ಪರಿವರ್ತಿಸಲು ತಮ್ಮ ಸಂಘಟನೆ ಸರ್ಕಾರವನ್ನು ಒತ್ತಾಯಿಸುತ್ತಿರುವುದಾಗಿ ದೇವೇಂದ್ರ ತಿಳಿಸಿದ್ದಾರೆ.

ಕಾರ್ಮಿಕ ಇಲಾಖೆ ಅಧಿಕಾರಿಗಳೊಂದಿಗಿನ ಚರ್ಚೆ, ಸಮಾಲೋಚನೆಯಿಂದ ಪರಿಹಾರ ಕಂಡುಕೊಳ್ಳಬಹುದಾದ ಸಂದರ್ಭ ಇದ್ದಾಗಲೂ ಮತ್ತು ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್ ಅವರು ತ್ವರಿತವಾಗಿ ಸ್ಪಂದಿಸುತ್ತಿರುವ ಸಂದರ್ಭದಲ್ಲೂ ಪದೇ ಪದೇ ಹೋರಾಟ ಮುಷ್ಕರದ ಹೆಸರಿನಲ್ಲಿ ಕಾರ್ಮಿಕರನ್ನು ಬೀದಿಗೆ ತಂದು ಅವರ ನೈತಿಕ ಸ್ಥೈರ್ಯ ಕುಗ್ಗಿಸುವ ಪ್ರಯತ್ನ ಸಲ್ಲದು. ಇದರ ಬದಲಿಗೆ ಸತತ ಸಂಪರ್ಕ ಮತ್ತು ಒತ್ತಡದಿಂದ ಕಾರ್ಮಿಕರ ಸಂಕ್ಷೇಮಕ್ಕೆ ಪ್ರಯತ್ನಿಸುವುದ ಒಳಿತು. ಹೀಗಾಗಿಯೇ ಕಾರ್ಮಿಕ ಹಿತ ರಕ್ಷಣಾ ಯೂನಿಯನ್‌ ಸರ್ಕಾರದ ಎದುರು ಹಲವು ಬೇಡಿಕೆಗಳನ್ನು ಮಂಡಿಸುತ್ತಿದ್ದು, ಇವುಗಳ ಈಡೇರಿಕೆಗೆ ಆಗ್ರಹಪಡಿಸುತ್ತಿದೆ

Be the first to comment

Leave a Reply

Your email address will not be published.


*