ಲಿಂಗಸುಗೂರ ವರದಿ.ಲಿಂಗಸುಗೂರ ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದಲಿತ ಮುಖಂಡರು ಹಾಗೂ ವಾಲ್ಮೀಕಿ ಸಮುದಾಯ ಮುಖಂಡರು
11-01-2012 ರಿಂದ. ಎಸ್ ಟಿ. ಜನಾಂಗದವರಿಗೆ ಜನಸಂಖ್ಯೆಗನುಗುಣವಾಗಿ ಶಿಕ್ಷಣದಲ್ಲಿ ಮತ್ತು ಉದ್ಯೋಗದಲ್ಲಿ ಮೀಸಲಾತಿಯನ್ನು ಹೆಚ್ಚಿಸಲು, ನಿ.ನ್ಯಾ. ನಾಗಮೋಹನದಾಸ ಆಯೋಗವು ಮಾಡಿರುವ ವರದಿಯ ಪ್ರಕಾರ ಸಂಶಿಷ್ಟ ಪಂಗಡಕ್ಕೆ 3.5% ರಿಂದ 7.5 % ಹಾಗು ಪರಿಶಿಷ್ಟ ಜಾತಿಗೆ 15℅ರಿಂದ 18% ಕ್ಕೆ ಹೆಚ್ಚಿಸಲು ಶೀಘ್ರ ಶಿಫಾರಸ್ಸು ಮಾಡಿ ಜಾರಿಗೊಳಿಸಲು ವರದಿಯನ್ನು ಈಗಾಗಲೇ ಸಲ್ಲಿಸಲಾಗಿದೆ, ಸದರಿ ವರದಿಯ ಪ್ರಕಾರ ಮೀಸಲಾತಿ ಹೆಚ್ಚಳ ಮಾಡಲು ಆನೇಕ ಪ್ರತಿಭಟನೆ ಹಾಗೂ ನಮ್ಮ ಸಮುದಾಯದ ಶ್ರೀಗಳು ಧರಣಿ ಕಾರ್ಯಕ್ರಮ ನಡೆದಾಗ್ಯೂ ಸರಕಾರ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೇ ಉದಾಸೀನತೆ ತೋರಿರುತ್ತಾರೆ. ಸರಕಾರದ
ಈ ನೀತಿಯನ್ನು ವಿರೋಧಿಸಿ ದಿನಾಂಕ: 11-07-2012ರಂದು ಪರಿತಿಷ್ಟ ಪಂಗಡ ಹಾಗೂ ಪರಿಶಿಷ್ಟ ಜಾತಿಯ ಸಮುದಾಯಗಳು ಜಂಟಿಯಾಗಿ ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕವ ಕಾರ್ಯಕ್ರಮ ಹಮ್ಮಿ ಕೊಂಡಿದ್ದು ಕಾರಣ ಪರಿಶಿಷ್ಟ ಜಾತಿ . ಹಾಗೂ ಪರಿಶಿಷ್ಟ ಪಂಗಡದ ಸಮುದಾಯದ ಹೆಚ್ಚು ಹೆಚ್ಚು ಜನರು ಭಾಗವಹಿಸಿ ಮುತ್ತಿಗೆ ಕಾರ್ಯಕ್ರಮ ಯಶಸ್ವಿಗೊಳಿಸಲು . ದ್ಯಾಮಣ್ಣ ಪೂಲಬಾವಿ. ಡಿ.ಜಿ. ಗುರಿಕಾರ. ನಿಂಗಪ್ಪ.ಪರಂಗಿ. ಗುಂಡಪ್ಪ ನಾಯಕ್. ಪಾಮಯ್ಯಮುರಾರಿ. ಪರಶುರಾಮ ನಗನೂರ. ಹನುಮಂತ ನಾಯಕ. ಮುದಕಪ್ಪ ನಾಯಕ. ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು
Be the first to comment