ನಗರ ಸ್ವಚ್ಛಮಾಡುವ ಪೌರಕಾರ್ಮಿಕರ ಗೋಳು ಕೇಳಿಸಿಕೊಳ್ಳದ ದೊಡ್ಡಬಳ್ಳಾಪುರ ನಗರಸಭೆ

ವರದಿ ಹರೀಶ್ ದೊಡ್ಡಬಳ್ಳಾಪುರ

ರಾಜ್ಯ ಸುದ್ದಿಗಳು 

ಬೆಂಗಳೂರು 

ಏಪ್ರಿಲ್ 28 ರಂದು ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ವತಿಯಿಂದ ಪತ್ರಿಕಾಗೋಷ್ಠಿ ಕರೆಯಲಾಗಿತ್ತುಪತ್ರಿಕಾಗೋಷ್ಠಿಯಲ್ಲಿ ಪ್ರಮುಖವಾಗಿ ಹಲವು ವಿಚಾರಗಳನ್ನು ತಿಳಿಸಲಾಯಿತುಕಳೆದ ಎಪ್ರಿಲ್ 26ರಂದು ದೊಡ್ಡಬಳ್ಳಾಪುರ ನಗರದ ನೂತನ ನಗರಸಭಾ ಕಟ್ಟಡದ ಉದ್ಘಾಟನಾ ಸಮಾರಂಭದಲ್ಲಿ ಪೌರಕಾರ್ಮಿಕರಿಗೆ ಪೊಟ್ಟಣದ ಊಟಗಳನ್ನು ನೀಡುವ ಮುಖಾಂತರ ಅವಮಾನಿಸಲಾಗಿದೆ ಎಂದು ಸಂಘದ ಅಧ್ಯಕ್ಷರಾದ ತಿಪ್ಪಣ್ಣ ತಿಳಿಸಿದರು

CHETAN KENDULI

 ಏಪ್ರಿಲ್ 26 ರ ನಗರಸಭಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಬಂದ ಅತಿಥಿಗಳಿಗೆ ಗಣ್ಯರಿಗೆ ಹಾಗೂ ನಗರಸಭೆ ಅಧಿಕಾರಿಗಳಿಗೆ ಟೇಬಲ್ ಹಾಕಿ ಒಬ್ಬಟ್ಟು ಊಟ ನೀಡಲಾಗಿದೆ ಆದರೆ ದೊಡ್ಡಬಳ್ಳಾಪುರ ನಗರಾದ್ಯಂತ ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಮಾತ್ರ ನೂತನ ನಗರಸಭಾ ಕಟ್ಟಡದ ಹೊರಗಡೆ ಪೊಟ್ಟಣದಲ್ಲಿ ಊಟ ನೀಡಿ ಅವಮಾನಿಸಿದ್ದಾರೆ ಎಂದು ಸಂಘದ ಅಧ್ಯಕ್ಷ ತಿಪ್ಪಣ್ಣ ಆರೋಪಿಸಿದರು 21ನೇ ಶತಮಾನದಲ್ಲೂ ಕೂಡ ಜಾತಿವ್ಯವಸ್ಥೆ ತಾಂಡವವಾಡುತ್ತಿರುವುದು ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಪೌರಕಾರ್ಮಿಕರಿಗೆ ಊಟದ ವಿಷಯದಲ್ಲಿ ತಾರತಮ್ಯ ಮಾಡಿರುವುದು ತುಂಬಾ ನೋವಿನ ಸಂಗತಿಯಾಗಿದೆ ಇಂತಹ ಅವಮಾನ ತಾರತಮ್ಯ ಘಟನೆಗಳನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.*ದೊಡ್ಡಬಳ್ಳಾಪುರ ನಗರಸಭೆಯ ಪೌರಕಾರ್ಮಿಕರಿಗೆ ಅಧಿಕಾರಿಗಳಿಂದಲೇ ಟಾರ್ಚರ್* 

 ದೊಡ್ಡಬಳ್ಳಾಪುರ ನಗರದ ನಗರಸಭಾ ಪೌರಕಾರ್ಮಿಕರಿಗೆ ನಗರಸಭಾ ಅಧಿಕಾರಿಗಳಿಂದಲೇ ತೊಂದರೆಯಾಗುತ್ತಿದ್ದು ಸರಿಯಾದ ವ್ಯವಸ್ಥೆ ದೊರೆಯುತ್ತಿಲ್ಲ ಕಾರ್ಯನಿರ್ವಹಿಸಲು ಮುಖ್ಯವಾಗಿ ಬೇಕಾಗಿರುವ ಮುಖ ಕವಚ, ಕೈಚೀಲಗಳು ,ಪಾದರಕ್ಷೆಗಳನ್ನು ಸರಿಯಾಗಿ ನೀಡುತ್ತಿಲ್ಲ ಎಂದು ಆರೋಪಿಸಿದರು. ನಗರಸಭಾ ಅಧಿಕಾರಿಗಳಾದ ರೂಪರವರು ಪೌರಕಾರ್ಮಿಕರಿಂದ ಮಾಸಿಕವಾಗಿ ಹಣ ಪಡೆಯುತ್ತಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು . ನಗರಸಭಾ ಅಧಿಕಾರಿಗಳಾದ ರೂಪ ರವರು ದೊಡ್ಡಬಳ್ಳಾಪುರ ನಗರಸಭೆಗೆ ಬಂದು ಹತ್ತು – ಹನ್ನೊಂದು ವರ್ಷ ಕಳೆದರೂ ಇನ್ನೂ ವರ್ಗಾವಣೆ ಆಗಿಲ್ಲ ಅವರನ್ನು ಈ ಕೂಡಲೇ ವರ್ಗಾವಣೆ ಮಾಡಬೇಕು ಎಂದು ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ಪಿ ಮಹೇಶ್ ಕುಮಾರ್ ಖಜಾಂಚಿಗಳಾದ ಪಿ.ವೆಂಕಟೇಶ್ ಬಾಬು ಕಾರ್ಯದರ್ಶಿಗಳಾದ ಸಿ. ಮಂಜುನಾಥ ಸಲಹಾ ಸಮಿತಿ ಸದಸ್ಯರಾದ ರಾಜರತ್ನಂ, ಭಗವಂತಪ್ಪ, ಹಾಗೂ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*