ಬೆಳಗಾವಿ-ಹುನಗುಂದ-ರಾಯಚೂರು ಗ್ರೀನ್ ಫೀಲ್ಡ್ ಹೆದ್ದಾರಿ ನಿರ್ಮಾಣಕ್ಕೆ ಬಾಗಲಕೋಟೆ ಜಿಲ್ಲೆಯಲ್ಲಿ ಭೂಸ್ವಾಧೀನ – ಅಧಿಸೂಚನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಭಾರತಮಾಲಾ ಪರಿಯೋಜನೆಯಡಿ ಹೈದರಾಬಾದ-ಪಣಜಿ ಎಕನಾಮಿಕ್ ಕಾರಿಡಾರ್ (Hyderabad-Panaji Economic Corridor) ರಸ್ತೆ ಕಾಮಗಾರಿ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದ್ದು, ಜಮೀನು ವಶಪಡಿಸಿಕೊಳ್ಳುವ ಕಾರ್ಯ ಆರಂಭವಾಗಿದೆ.

ಬಾಗಲಕೋಟೆ:ಬೆಳಗಾವಿ-ಹುನಗುಂದ (Belagavi-Hungund) 168 ಕಿ.ಮೀ ಮತ್ತು ಹುನಗುಂದ-ರಾಯಚೂರ (Hungund-Raichur) 156 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಕಾಮಗಾರಿಯ ಸಲುವಾಗಿ ಬಾಗಲಕೋಟೆ ಜಿಲ್ಲೆ (Bagalkot District) ಯಲ್ಲಿ ಕೆಲ ಗ್ರಾಮ, ತಾಲೂಕು ಗಳಲ್ಲಿ ಭೂಮಿ ವಶಪಡಿಸಿಕೊಳ್ಳುವ ಕಾರ್ಯ (Land Acqisition work) ಆರಂಭವಾಗಲಿದ್ದು, ಕೇಂದ್ರ ಅನುಸೂಚಿ ಹೊರಡಿಸಿದೆ.

ಕೇಂದ್ರ ಸರಕಾರದ ರಾಷ್ಟ್ರೀಯ ಹೆದ್ದಾರಿ ಯೋಜನೆಯ ಭಾರತಮಾಲಾ ಪರಿಯೋಜನೆಯಡಿ ಹೈದರಾಬಾದ-ಪಣಜಿ ಎಕನಾಮಿಕ್ ಕಾರಿಡಾರ್ (Hyderabad-Panaji Economic Corridor) ರಸ್ತೆ ಕಾಮಗಾರಿ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದ್ದು, ಜಮೀನು ವಶಪಡಿಸಿಕೊಳ್ಳುವ ಕಾರ್ಯ ಆರಂಭವಾಗಿದೆ.

ಬೆಳಗಾವಿ-ಹುನಗುಂದ (Belagavi-Hungund) 168 ಕಿ.ಮೀ ಮತ್ತು ಹುನಗುಂದ-ರಾಯಚೂರ (Hungund-Raichur) 156 ಕಿ.ಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ರಸ್ತೆ ನಿರ್ಮಾಣ ಕಾಮಗಾರಿಯ ಸಲುವಾಗಿ ಬಾಗಲಕೋಟೆ ಜಿಲ್ಲೆ (Bagalkot District) ಯಲ್ಲಿ ಕೆಲ ಗ್ರಾಮ, ತಾಲೂಕು ಗಳಲ್ಲಿ ಭೂಮಿ ವಶಪಡಿಸಿಕೊಳ್ಳುವ ಕಾರ್ಯ (Land Acqisition work) ಆರಂಭವಾಗಲಿದ್ದು, ಕೇಂದ್ರ ಅನುಸೂಚಿ ಹೊರಡಿಸಿದೆ.

ಎಸ್. ಓ. 1622(ಇ): ಕೇಂದ್ರ ಸರ್ಕಾರಕ್ಕೆ ಇದೀಗ ಸಾರ್ವಜನಿಕ ಉದ್ದೇಶಕ್ಕಾಗಿ ಇದರೊಂದಿಗೆ ಲಗತ್ತಿಸಿರುವ ಅನುಸೂಚಿಯಲ್ಲಿ ಜಮೀನುಗಳನ್ನು ಕರ್ನಾಟಕ ರಾಜ್ಯದ ಬಾಗಲಕೋಟೆ ಜಿಲ್ಲೆ ಬೆಳಗಾವಿ-ಹುನಗುಂದ-ರಾಯಚೂರು (EC ಹೈದರಾಬಾದ್ ಪಣಜಿ) ಕಿ.ಮೀ. 136+800 5೦ದ ಕಿ.ಮೀ. ರಿಂದ 182+300ವರೆಗೆ ರಸ್ತೆಯ ನಿರ್ಮಾಣ, ನಿರ್ವಹಣೆ (ಅಗಲೀಕರಣ/ಎರಡು ಲೇನ್ ಸುಸಜ್ಜಿತ ಭುವ ನಾಲ್ಕು ಲೇನಿಂಗ್ ಇತ್ಯಾದಿ), ವ್ಯವಸ್ಥಾಪನೆ, ಕಾರ್ಯನಿರ್ವಾಹಣೆ ಮತ್ತು ಪ್ರಕ್ರಿಯೆ ಮಾಡುವ ಸಲುವಾಗಿ ಜಮೀನುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳಲು ಅವಶ್ಯಕವಾಗಿರುತ್ತದೆ. ಆದ ಕಾರಣ ಕೇಂದ್ರ ಸರ್ಕಾರವು ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956 (1956 ರ 48) ರ ಪ್ರಕಾರ ನಿಯಮ (3) ಉಪನಿಯಮ (1) ರಲ್ಲಿ ಪ್ರದತ್ತವಾಗಿರುವ ಅಧಿಕಾರವನ್ನು ಚಲಾಯಿಸಿ ಇದರೊಂದಿಗೆ ಲಗತ್ತಿಸಿರುವ ಅನುಸೂಚಿಯಲ್ಲಿ ವಿವರಿಸಿರುವ ಜಮೀನುಗಳನ್ನು ಭೂಸ್ವಾಧೀನಪಡಿಸಿಕೊಳ್ಳಲು ಈ ಮೂಲಕ ಸೂಚನೆ ನೀಡಿದೆ.

ಸದರಿ ಜಮೀನುಗಳ ಬಗ್ಗೆ ಹಿತಾಸಕ್ತಿ ಉಳ್ಳವರು ಈ ಅಧೀಸೂಚನೆ ಹೊರಡಿಸಿರುವ ಹಾಗೂ ಸಾರ್ವಜನಿಕ ಅವಗಾಹನೆಗಾಗಿ ಈ ಪ್ರಕಟಣೆ ಪ್ರಕಟಿಸಿದ ದಿನಾಂಕದಿಂದ ಇಪ್ಪತ್ತೊಂದು ದಿವಸಗಳ ಒಳಗಾಗಿ ನಿಯಮ 3C (1) ಅನ್ವಯ ಆಕ್ಷಪಣೆಯನ್ನು ಸಲ್ಲಿಸಬಹುದಾಗಿರುತ್ತದೆ.

ಅಂತಹ ಆಕ್ಷೇಪಣೆಯನ್ನು ಸಕ್ಷಮ ಪ್ರಾಧಿಕಾರಿಗಳು ಅಂದರೆ ವಿಶೇಷ ಭೂಸ್ವಾಧೀನಾಧಿಕಾರಿಗಳು, ಭಾರತೀಯ ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರ, ಬಾಗಲಕೋಟ C/O ಶೋಭಾ ಯಡಹಳ್ಳಿ, 4ನೇ ಕ್ರಾಸ್, ಪಿ.ನಂ. 37, ಸ.ನಂ.123/1ಬಿ, ವಿದ್ಯಾಗಿರಿ, ಬಾಗಲಕೋಟ, ಕರ್ನಾಟಕ ರವರಿಗೆ ಬರಹದ ಮೂಲಕ ಸಕಾರಣಗಳೊಂದಿಗೆ ಸಲ್ಲಿಸತಕ್ಕದು ಹಾಗೂ ಸಕ್ಷಮ ಪ್ರಾಧಿಕಾರಿಗಳು ಆಕ್ಷೇಪಣಿದಾರರ ಅಹವಾಲುಗಳನ್ನು ಆಲಿಸಲು ಆಕ್ಷೇಪಣಿದಾರರಿಗೆ ಅಥವಾ ಅವರ ವಕೀಲರಿಗೆ ಅವಕಾಶ ನೀಡಿ ಅವರು ಸಲ್ಲಿಸಿರುವ ಆಕ್ಷೇಪಣೆಗಳ ಬಗ್ಗೆ ವಿಚಾರಣೆ ನಡೆಸಿ ಸೂಕ್ತವೆಂದು ಕಂಡುಬಂದಲ್ಲಿ ಇತರೆ ಅಂಶಗಳನ್ನು ಪರಿಗಣಿಸಿ ಪುರಸ್ಕರಿಸಬಹುದು ಅಥವಾ ತಿರಸ್ಕರಿಸಬಹುದು.

ರಾಷ್ಟ್ರೀಯ ಹೆದ್ದಾರಿ ಕಾಯ್ದೆ 1956 (1956ರ 48) ನಿಯಮ 3C (2)ರಂತೆ ಸಕ್ಷಮ ಪ್ರಾಧಿಕಾರಿಗಳು ಮಾಡಿದ ಆದೇಶ ಅಂತಿಮವಾಗಿರುತ್ತದೆ. ಈ ಅಧಿಸೂಚನೆಗೆ ಒಳಪಟ್ಟಿರುವ ಜಮೀನುಗಳ ನಕಾಶೆಗಳು ಮತ್ತು ಇತರೆ ವಿವರಗಳು ಹಿತಾಸಕ್ತಿ ಉಳ್ಳವರ ಪರಿಶೀಲನೆಗೆ ಸದರಿ ಸಕ್ಷಮ ಪ್ರಾದೀಕಾರದ ಕಛೇರಿಯಲ್ಲಿ ಲಭ್ಯವಿರುತ್ತವೆ.

Be the first to comment

Leave a Reply

Your email address will not be published.


*