ರಾಜ್ಯ ಸುದ್ದಿಗಳು
ಭಟ್ಕಳ
ಇತ್ತೀಚಿಗೆ ಭಟ್ಕಳದಲ್ಲಿ ಅರಣ್ಯವಾಸಿಗಳ ಮೇಲೆ ದೌರ್ಜನ್ಯವೆಸಗಿದ ಅರಣ್ಯ ಸಿಬ್ಬಂದಿಗಳನ್ನ ತಕ್ಷಣ ಅಮಾನತ್ತುಗೊಳಿಸಬೇಕು, ಜಿಪಿಎಸ್ ಒಳಪಟ್ಟ ಕ್ಷೇತ್ರದಲ್ಲಿ ಅರಣ್ಯ ಸಿಬ್ಬಂದಿಗಳು ಆತಂಕ ಉಂಟುಮಾಡಬಾರದು, ಅರಣ್ಯವಾಸಿಗಳಿಗೆ ಉಂಟಾದ ನಷ್ಟವನ್ನು ಭರಿಸಬೇಕೆಂದು ಅಗ್ರಹಿಸಿ ಭಟ್ಕಳ ಅರಣ್ಯ ಇಲಾಖೆಯ ಆವರಣದಲ್ಲಿ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ನೇತ್ರತ್ವದಲ್ಲಿ ಅಹೋರಾತ್ರಿ ಧರಣಿ ಪ್ರಾರಂಭವಾಗಿದ್ದು ಇರುತ್ತದೆ.
ಅರಣ್ಯವಾಸಿಗಳಿಗೆ ನಿರಂತರ ಅರಣ್ಯ ಸಿಬ್ಬಂದಿಗಳಿAದ ಉಂಟಾಗುತ್ತಿರುವ ದೌರ್ಜನ್ಯ, ಕಿರುಕುಳ ಹಾಗೂ ನಷ್ಟದ ಕುರಿತು ಸರಕಾರದ ಗಮನ ಸೆಳೆಯುವ ಹಾಗೂ ದೌರ್ಜನ್ಯ ನಿಯಂತ್ರಿಸುವ ಉದ್ದೇಶದಿಂದ ಅಹೋರಾತ್ರಿ ಧರಣಿ ಪ್ರಾರಂಭಿಸಲಾಗಿದೆ.
ಅರಣ್ಯ ಹಕ್ಕು ಕಾಯಿದೆಯಲ್ಲಿ ಅರಣ್ಯವಾಸಿಗಳಿಗೆ ಒಕ್ಕಲೆಬ್ಬಿಸಬಾರದೆಂಬ ನಿರ್ಧೇಶನ ಇದ್ದಾಗಲೂ ಕೇಂದ್ರ ಮತ್ತು ರಾಜ್ಯ ಸರಕಾರ ಅರಣ್ಯವಾಸಿಗಳಿಗೆ ನಿರ್ಧೇಶನ ನೀಡಿದಾಗಲೂ ಅರಣ್ಯ ಸಿಬ್ಬಂದಿಗಳ ಕಾನೂನು ಬಾಹಿರ ಕೃತ್ಯ ಕುರಿತು ಪ್ರತಿಭಟನೆಯ ಖಂಡಿಸಲಾಯಿತು.
ಪ್ರತಿಭಟನೆಯಲ್ಲಿ ಜಿಲ್ಲಾ ಸಂಚಾಲಕರಾದ ದೇವರಾಜ ಗೊಂಡ, ಪಾಂಡುರAಗ ನಾಯ್ಕ, ರಿಜವಾನ್, ಕಯುಂ, ಇನಾಯತ್ ಸಾಬಂದ್ರಿ, ನಾರಾಯಣ ನಾಯ್ಕ, ಶ್ರೀಧರ ನಾಯ್ಕ, ಮಂಜುನಾಥ ನಾಯ್ಕ ಹಾಗೂ ಸಂತ್ರಸ್ಥರ ಕುಟುಂಬದವರು ಉಪಸ್ಥಿತರಿದ್ದರು.ದೌರ್ಜನ್ಯ ಸ್ಥಳಕ್ಕೆ ಭೇಟ್ಟಿ: ದಿ. ೨೪ ರಂದು ಭಟ್ಕಳ ತಾಲೂಕಿನ ವಿವಿಧ ಕ್ಷೇತ್ರದಲ್ಲಿ ಅರಣ್ಯ ಸಿಬ್ಬಂದಿಗಳಿAದ ಉಂಟಾದ ದೌರ್ಜನ್ಯ ಸ್ಥಳಕ್ಕೆ ಭೇಟ್ಟಿ ನೀಡಿ ಸ್ಥಳ ಪರೀಶಿಲನೆ ಜರುಗಿಸಲಾಯಿತು.
Be the first to comment