ಶ್ರೀಶೈಲ ಜಾತ್ರೆಗೆ ವಿಶೇಷ ಬಸ್ ವ್ಯವಸ್ಥೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ಆಂದ್ರ ಪ್ರದೇಶ ರಾಜ್ಯದ ಶ್ರೀಶೈಲ ಜಾತ್ರೆಗೆ ಸಾರ್ವಜನಿಕ ಭಕ್ತಾಧಿಗಳ ಅನುಕೂಲಕ್ಕಾಗಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಾಗಲಕೋಟೆ ಘಟಕದಿಂದ ಮಾರ್ಚ 23 ರಿಂದ ಏಪ್ರೀಲ್ 1 ವರೆಗೆ ಜಮಖಂಡಿ, ಮುಧೋಳ, ಬೀಳಗಿ, ಬಾಗಲಕೋಟೆ, ಬಾದಾಮಿ, ಗುಳೇದಗುಡ್ಡ, ಹುನಗುಂದ ಹಾಗೂ ಇಲಕಲ್ಲ ಘಟಕಗಳಿಂದ ವಿಶೇಷ ಸಾರಿಗೆ ಸೌಲಭ್ಯ ಕಲ್ಪಿಸಲಾಗಿದೆ.

ಜಮಖಂಡಿ ಘಟಕದಿಂದ ಮಧ್ಯಾಹ್ನ 3, ಸಂಜೆ 4 ಮತ್ತು 5 ಗಂಟೆಗೆ (7760991778), ಮುಧೋಳ ಘಟಕದಿಂದ ಸಂಜೆ 4, 5 ಮತ್ತು 6 ಗಂಟೆಗೆ (7760991779), ಬೀಳಗಿ ಘಟಕದಿಂದ ಸಂಜೆ 4, 5 ಮತ್ತು 6 ಗಂಟೆಗೆ (7760991780), ಬಾಗಲಕೋಟೆ (ಸಂಜೆ 6, 7 ಮತ್ತು 8 ಗಂಟೆಗೆ (7760991775), ಬಾದಾಮಿ ಘಟಕದಿಂದ ಸಂಜೆ 5 ಗಂಟೆಗೆ (7760991776), ಗುಳೇದಗುಡ್ಡ ಘಟಕದಿಂದ ಸಂಜೆ 5.45 ಗಂಟೆಗೆ (7760991781), ಹುನಗುಂದ ಘಟಕದಿಂದ ಸಂಜೆ 6, 7 ಮತ್ತು 8 ಗಂಟೆಗೆ (9606068611), ಇಲಕಲ್ಲ ಘಟಕದಿಂದ ಸಂಜೆ 7, 8 ಮತ್ತು 9 ಗಂಟೆಗೆ (7760991777) ಕಾರ್ಯಚರಣೆಗೊಳ್ಳಲಿವೆ.

Be the first to comment

Leave a Reply

Your email address will not be published.


*