ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಜಿಲ್ಲೆಯಲ್ಲಿರುವ ಖಾದ್ಯತೈಲ ಮತ್ತು ಖಾದ್ಯತೈಲ ಬೀಜಗಳ ಸಂಸ್ಕರಣಾದಾರರು, ಮಾರಾಟಗಾರರು ಹಾಗೂ ಸ್ಟಾಕಿಸ್ಟ್‍ದಾರರು ಅವರಲ್ಲಿರುವ ಖಾದ್ಯತೈಲ ಮತ್ತು ಖಾದ್ಯತೈಲ ಬೀಜಗಳ ದಾಸ್ತಾನು ವಿವರಗಳನ್ನು ಕೇಂದ್ರ ಸರಕಾರದ ವೆಬ್‍ಸೈಟ್ ನಲ್ಲಿ ಕೂಡಲೇ ನೋಂದಣಿ ಮಾಡಿಕೊಂಡು ಖಾದ್ಯತೈಲ ಮತ್ತು ಖಾದ್ಯತೈಲ ಬೀಜಗಳ ದಾಸ್ತಾನು ವಿವರಗಳನ್ನು ಪ್ರದರ್ಶಿಸುವುದು ಕಡ್ಡಾಯವಾಗಿದೆ.
ಈ ಕುರಿತು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಆಯುಕ್ತರು ನಿರ್ದೇಶನ ನೀಡಿದ್ದು, ಸಕಾರದ ಅಧಿಸೂಚನೆ ಡಿಸೆಂಬರ 21, 2021ರಲ್ಲಿ ನಿಗಧಿಪಡಿಸಿದಂತೆ ಖಾದ್ಯತೈಲ ಮತ್ತು ಖಾದ್ಯತೈಲ ಬೀಜಗಳ ಚಿಲ್ಲರೆ ಮತ್ತು ಸಗಟುದಾರರು ದಾಸ್ತಾನು ಮಾಡಬೇಕಾಗಿದೆ. ಎಡಿಬಲ್ ಆಯಿಲ್ ರಿಟೇಲ್ 50 ಕ್ವಿಂಟಲ್ಸ್, ಹೋಲಸೆಲ್ 1200 ಕ್ವಿಂಟಲ್ಸ್, ಎಡಿಬಲ್ ಆಯಿಲ್ ರಿಟೇಲ್ ಸೀಡ್ಸ್ 50 ಕ್ವಿಂಟಲ್ಸ್, ಹೋಲಸೆಲ್ 2000 ಕ್ವಿಂಟಲ್ಸ್ ಇರುತ್ತದೆ.
ಹೆಚ್ಚಿನ ಪ್ರಮಾಣದಲ್ಲಿ ದಾಸ್ತಾನು ಹಾಗೂ ಹೆಚ್ಚಿನ ದರಕ್ಕೆ ಮಾರಾಟ ಮಾಡುವುದು ಹಾಗೂ ಕೃತಕ ಅಭಾವ ಸೃಷ್ಟಿಸಿ ಸಾರ್ವಜನಿಕರಿಗೆ ತೊಂದರೆ ಮಾಡುವುದು ಕಂಡುಬಂದಲ್ಲಿ ಆಹಾರ ಕಾನೂನು ಮಾಪನಶಾಸ್ತ್ರ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ಕಾನೂನು ರೀತ್ಯ ಕ್ರಮ ಕೈಗೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Be the first to comment