ಫೇ. ೨೮ ಅರಣ್ಯವಾಸಿಗಳ- ಜಾಥ ಕುಮಟದಲ್ಲಿ ಉದ್ಘಾಟನೆ.

ವರದಿ-ಕುಮಾರ್ ನಾಯ್ಕ ,ಉಪ ಸಂಪಾದಕರು

ರಾಜ್ಯ ಸುದ್ದಿಗಳು 

ಕುಮಟ

ರಾಜ್ಯಾದ್ಯಂತ ಅರಣ್ಯ ಭೂಮಿ ಹಕ್ಕಿಗೆ ಸಂಬAಧಿಸಿ ವ್ಯಾಪಕ ಜಾಗೃತ ಮೂಡಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಅರಣ್ಯವಾಸಿಗಳನ್ನ ಉಳಿಸಿ- ಜಾಥ ಕಾರ್ಯಕ್ರಮ ಫೇ. ೨೮(ಸೋಮವಾರ) ಬೆಳಿಗ್ಗೆ ೧೦:೩೦ ಕ್ಕೆ ಕುಮಟ ತಾಲೂಕಿನ ಮಾಸ್ತಿಕಟ್ಟೆ ದೇವಸ್ಥಾನದ ಆವರಣದಲ್ಲಿ ಉದ್ಘಾಟನೆಗೊಳ್ಳಲಿದೆ ಹಾಗೂ ಸದ್ರಿ ಕಾರ್ಯಕ್ರಮವನ್ನು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಆದ್ಯಕ್ಷ ರವೀಂದ್ರ ನಾಯ್ಕ ಅವರು ಚಾಲನೆ ನೀಡಲಿದ್ದಾರೆ ಎಂದು ತಾಲೂಕ ಅಧ್ಯಕ್ಷ ಮಂಜುನಾಥ ಮರಾಠಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

CHETAN KENDULI

   ಕಾರ್ಯಕ್ರಮ ದಿ. ೨೮-೨-೨೦೨೨(ಸೋಮವಾರ) ಮುಂಜಾನೆ ೧೦:೩೦ ಕ್ಕೆ ಮಹಾಸತಿ ದೇವಸ್ಥಾನ ಆವರಣದಿಂದ ಚಾಲನೆ ನೀಡಲಾಗುವುದು. ಜಾಥ ಚಾಲನೆ ನಂತರ ಕುಮಟ ತಾಲೂಕಿನ ಪ್ರಮುಖ ರಸ್ತೆಯಾಗಿರುವ ಮಾಸ್ತಿಕಟ್ಟೆ ದೇವಸ್ಥಾನ ಆವರಣ- ಹಳೇ ಬಸ್‌ಸ್ಟಾಂಡ್- ಜೈವಂತ ಸ್ಟುಡಿಯೋ- ಗುಡಿಗಾರಗಲ್ಲಿ ರಸ್ತೆ- ಗಿಬ್ ಹೈಸ್ಕೂಲ್ ಸರ್ಕಲ್ ಮೂಲಕ ಮಹಾಸತಿ ದೇವಾಲಯದ ಅವರಣಕ್ಕೆ ಬಂದು ಸಭೆಯಾಗಿ ಪರಿವರ್ತನೆ ಗೊಳ್ಳುವುದು.

   ಅರಣ್ಯವಾಸಿಗಳನ್ನ ಉಳಿಸಿ ಜಾಥವು ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂದಿನ ೩೦ ದಿನಗಳಲ್ಲಿ ೧೦೦೦ ಕೀ.ಮೀ ‘ಹೋರಾಟದ ವಾಹನ’ ಸಂಚರಿಸಿ ೫೦೦ ಹಳ್ಳಿಗಳಿಗೆ ಭೇಟಿ ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದೆ.  ಆಸಕ್ತ ಅರಣ್ಯವಾಸಿಗಳು ಹೇಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ಹೋರಾಟಗಾರರ ವೇದಿಕೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Be the first to comment

Leave a Reply

Your email address will not be published.


*