ರಾಜ್ಯ ಸುದ್ದಿಗಳು
ದೊಡ್ಡಬಳ್ಳಾಪುರ
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ಇಂದು ಕರ್ನಾಟಕ ರಾಜ್ಯ ಪ್ರಾಣಿ-ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ ವತಿಯಿಂದ ಪತ್ರಿಕಾಗೋಷ್ಠಿ ನಡೆಸಲಾಯಿತು. ಕರ್ನಾಟಕ ರಾಜ್ಯ ಪ್ರಾಣಿ ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ ನ ಪ್ರಥಮ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಸರ್ವಧರ್ಮ ಸಮನ್ವಯ ದೊಂದಿಗೆ ಮಾರ್ಚ್ 1ರಂದು ಸಂಜೆ 6 ಗಂಟೆಗೆ ಹಿರಿಯ ಧರ್ಮಗುರುಗಳಿಗೆ ಸನ್ಮಾನಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ತಾಲೂಕಿನ ಜನತೆ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪ್ರಾಣಿ-ಪಕ್ಷಿಗಳ ದಾಸೋಹ ಸೇವಾ ಟ್ರಸ್ಟ್ ನ ರಾಜ್ಯ ಪ್ರಧಾನ ಕಾರ್ಯದರ್ಶಿ ರಾಮ್ ಕುಮಾರ್ ಮಾತನಾಡಿ ಕಳೆದ ಕೊರೋನಾ ಸಂದರ್ಭದಲ್ಲಿ ಪ್ರಾಣಿಗಳ ಹಸಿವನ್ನು ಕಂಡು ಸಂಸ್ಥಾಪಕರಾದ ಮುನಿರಾಜು ರವರು ಪ್ರಾಣಿ-ಪಕ್ಷಿಗಳ ದಾಸೋಹಕ್ಕೆ ಮುಂದಾಗಿದ್ದು.ಈ ಕಾರ್ಯವು ಸತತವಾಗಿ ಒಂದು ವರ್ಷಗಳಿಂದ ದಿನನಿತ್ಯ ತಾಲ್ಲೂಕಿನ 4 ಭಾಗಗಳಿಗೂ ಹಣ್ಣುಹಂಪಲು, ಆಹಾರವನ್ನು ಕಳಿಸುವ ಕಾರ್ಯ ಸತತವಾಗಿ ಸಾಗುತ್ತಿದೆ. ರಾಜ್ಯಾಧ್ಯಕ್ಷರು ಹಾಗೂ ಸಂಸ್ಥಾಪಕರು ಆದ ಮುನಿರಾಜು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯ ಸಾಗುತ್ತಿದ್ದು ಪ್ರಾಣಿ ಸಂಕುಲದ ಸಂರಕ್ಷಣೆಗೆ ದೊಡ್ಡಬಳ್ಳಾಪುರ ಜನತೆಯ ಸಹಕಾರ ಮತ್ತು ಸಹಾಯ ಅವಶ್ಯಕತೆ ಇದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
Be the first to comment