ಜಿಲ್ಲಾ ಸುದ್ದಿಗಳು
ಉಡುಪಿ
ಈಗಾಗಲೇ ಹಿಜಾಬ್ ವಿವಾದದದಿಂದ ಇಡೀ ದೇಶದ ಗಮನಸೆಳೆದಿದ್ದಂತ ಉಡುಪಿ, ಈಗ ಮತ್ತೊಂದು ಪ್ರಕರಣದಿಂದ ಸುದ್ದಿಯಾಗಿದೆ. ಕಾಲೇಜಿನ ಪಿಆರ್.ಓ ಒಬ್ಬರು ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶ ಕಳುಹಿಸಿದ್ದರಿಂದಾಗಿ, ಅವರ ವಿರುದ್ಧ ವಿದ್ಯಾರ್ಥಿಗಳು ರೊಚ್ಚಿಗೆದ್ದಿದ್ದಾರೆ.ಈ ಕಾರಣದಿಂದಾಗಿಯೇ ಕಾಲೇಜಿನ ಮುಂದೆ ಪ್ರತಿಭಟನೆ ಕೂಡ ನಡೆಸುತ್ತಿದ್ದಾರೆ.ಉಡುಪಿಯ ಖಾಸಗಿ ಕಾಲೇಜೊಂದರ ಸಾರ್ವಜನಿಕ ಸಂಪರ್ಕಾಧಿಕಾರಿಯೊಬ್ಬರು ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶವನ್ನು ಕಳುಹಿಸುತ್ತಿದ್ದಾಗಿ ತಿಳಿದು ಬಂದಿದೆ. ಈ ಕಾರಣದಿಂದಾಗಿ ಇಂದು ವಿದ್ಯಾರ್ಥಿಗಳು ಕಾಲೇಜು ಮುಂದೆ ಪ್ರತಿಭಟನೆ ಕೂಡ ನಡೆಸಿದ್ದಾರೆ.
ಕಾಲೇಜಿನ ಮುಂಭಾಗದಲ್ಲಿ ಪಿ ಆರ್ ಓ ವಜಾಗೊಳಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಈ ವೇಳೆ ಆಗಮಿಸಿದಂತ ಪ್ರಾಂಶುಪಾಲರು ಪಿ ಆರ್ ಓ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳೋದಾಗಿ ತಿಳಿಸಿ, ಪ್ರತಿಭಟನೆ ಕೈ ಬಿಡುವಂತೆ ಮನವಿ ಮಾಡಿದರು. ಆದ್ರೇ ಪ್ರಾಂಶುಪಾಲರ ಮನವಿಗೆ ವಿದ್ಯಾರ್ಥಿಗಳು ಮಣಿಯಲಿಲ್ಲ.ಪ್ರತಿಭಟನೆ ಮುಂದುವರೆಸಿದಂತ ವಿದ್ಯಾರ್ಥಿಗಳು, ಪಿ ಆರ್ ಓ ಸ್ಥಳಕ್ಕೆ ಕರೆಸುವಂತೆಯೂ ಒತ್ತಾಯಿಸಿದರು. ಹೀಗಾಗಿ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದಂತ ಪೊಲೀಸರು, ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿ, ಪರಿಸ್ಥಿತಿ ತಿಳಿಗೊಳಿಸಿ, ವಿದ್ಯಾರ್ಥಿಗಳ ಪ್ರತಿಭಟನೆ ಕೈಬಿಡುವಂತೆ ಮಾಡಿದರು.
Be the first to comment