ಜಿಲ್ಲಾ ಸುದ್ದಿಗಳು
ಕುಮಟಾ
ಸೂರ್ಯಾರಾಧನೆಯ ಹಬ್ಬವಾದ ಮಕರ ಸಂಕ್ರಾಂತಿ ಪ್ರಸಿದ್ದವಾಗಿರುವ ಸುಗ್ಗಿಯ ಕಾಲದ ಹಬ್ಬ. ಸೂರ್ಯೋದಯ ಎಂದೊಡನೆ ಮೊದಲು ನೆನಪಾಗುವುದು ರಂಗೋಲಿ. ಕುಮಟಾ ತಾಲೂಕಿನ ಮುರೂರಿನಲ್ಲಿ ಸಂಸ್ಕೃತಿಗೆ ಹೆಸರಾದ ಪ್ರಗತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಸಂಕ್ರಾಂತಿಯ ಸಂಭ್ರಮವನ್ನು ಕೊರೋನ ನಿಯಮಾವಳಿಗಳೊಂದಿಗೆ ಅಚ್ಚುಕಟ್ಟಾಗಿ ಆಚರಿಸುವುದರೊಂದಿಗೆ ಮಕ್ಕಳಿಗಾಗಿ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ವಿದ್ಯಾನಿಕೇತನ ಮೂರೂರು – ಕಲ್ಲಬ್ಬೆ ಸಂಸ್ಥೆಯ ಸದಸ್ಯರಾದ ಶ್ರೀಮತಿ ಪ್ರತಿಭಾ ಹೆಗಡೆಯವರು ಸ್ಪರ್ಧೆಯನ್ನು ಉದ್ಘಾಟಿಸಿದರು. ಸಂಸ್ಥೆಯ ಆಡಳಿತಾಧಿಕಾರಿಯಾದ ಶ್ರೀ ಜಿ.ಎಮ್.ಭಟ್ಟ, ಶಾಲಾ ಮುಖ್ಯಾಧ್ಯಾಪಕರಾದ ಶ್ರೀ ವಿವೇಕ ಆಚಾರಿ ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಎರಡೂ ವಿಭಾಗದಲ್ಲಿ ವಿದ್ಯಾರ್ಥಿನಿಯರು ಹರ್ಷದಿಂದ ಪಾಲ್ಗೊಂಡರು. ಸ್ಪರ್ಧೆಯ ತೀರ್ಪುಗಾರರಾಗಿ ಶ್ರೀಮತಿ ಭಾರತಿ ಕುಲಕರ್ಣಿ, ಶ್ರೀಮತಿ ಮಾಯಾ ನಾಯ್ಕ, ಶ್ರೀ ಶಿವಮೂರ್ತಿಯವರು ನ್ಯಾಯಯುತ ತೀರ್ಪು ನೀಡಿದರು. ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
Be the first to comment