MSGP ತ್ಯಾಜ್ಯ ವಿಲೇವಾರಿ ಘಟಕ ತೆರವುಗೊಳಿಸುವಂತೆ ಆಗ್ರಹಿಸಿ ಉಗ್ರ ಹೋರಾಟ – ಸಾರಥಿ ಕೆ ವಿ ಸತ್ಯ ಪ್ರಕಾಶ್ 

ಹರೀಶ್ ದೊಡ್ಡಬಳ್ಳಾಪುರ  ಅಂಬಿಗ ನ್ಯೂಸ್

ರಾಜ್ಯ ಸುದ್ದಿಗಳು 

ದೊಡ್ಡಬಳ್ಳಾಪುರ 

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಹೋಬಳಿಯ ಭಕ್ತರಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೆಂಗಳೂರು ಮಹಾನಗರ ಪಾಲಿಕೆಯು ಎಂ ಎಸ್ ಜಿ ಪಿ ಘಟಕವನ್ನು ತೆರೆದಿದ್ದು ಈ ಕಸ ವಿಲೇವಾರಿ ಘಟಕವು ಸುತ್ತಮುತ್ತಲಿನ ಹಳ್ಳಿಗಳಲ್ಲಿ ವಿಷಪೂರಿತ ನೀರು ಮತ್ತು ವಿಷಪೂರಿತ ಗಾಳಿಯನ್ನು ಹರಡುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು ಸಾರ್ವಜನಿಕರ ಬೆಂಬಲವಾಗಿ ನವ ಬೆಂಗಳೂರು ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಕೆ ವಿ ಸತ್ಯ ಪ್ರಕಾಶ್ (ಸಾರಥಿ ), ಸಂಸ್ಥಾಪಕಅಧ್ಯಕ್ಷರಾದ ಜಿ ಏನ್ ಪ್ರದೀಪ್ ಮತ್ತು ಭಕ್ತರ ಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿದ್ದಲಿಂಗಯ್ಯ ಗ್ರಾಮಸ್ಥರೊಂದಿಗೆ ಭಕ್ತರಹಳ್ಳಿ ವ್ಯಾಪ್ತಿಯ ಎಂ ಎಸ್ ಜಿ ಪಿ ಘಟಕಕ್ಕೆ ಭೇಟಿ ನೀಡಿ ಎಂ ಎಸ್ ಜಿ ಪಿ ಘಟಕವನ್ನು ಮುಚ್ಚುವಂತೆ ಆಗ್ರಹಿಸಿದರು.

CHETAN KENDULI

 ಈ ಸಂದರ್ಭದಲ್ಲಿ ನವ ಬೆಂಗಳೂರು ಹೋರಾಟ ಸಮಿತಿಯ ಗೌರವಾಧ್ಯಕ್ಷರಾದ ಕೆ ವಿ ಸತ್ಯಪ್ರಕಾಶ್ ( ಸಾರಥಿ )ಮಾತನಾಡಿ ಈ ಕಸ ವಿಲೇವಾರಿ ಘಟಕವು ಸುತ್ತಮುತ್ತಲಿನ ಗ್ರಾಮಗಳಿಗೆ ಮಾರಕವಾಗಿದೆ ಈ ಕುರಿತಾಗಿ ಹಲವು ಬಾರಿ ನಾವು ಮನವಿ ಸಲ್ಲಿಸಿದರು ರಾಜಕೀಯ ನಾಯಕರ ಗಮನಕ್ಕೆ ತಂದರೂ ಕೂಡ ಇದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಈ ಕೂಡಲೇ ಕಸ ವಿಲೇವಾರಿ ಘಟಕವನ್ನು ಮುಚ್ಚಬೇಕು ಕಾರಣ ಈ ಕಸ ವಿಲೇವಾರಿ ಘಟಕದಲ್ಲಿ ಬಯೋಕೆಮಿಕಲ್ ಸೇರಿದಂತೆ ಹಲವು ವಿಷಪೂರಿತ ತ್ಯಾಜ್ಯಗಳನ್ನು ಸಹ ವಿಲೇವಾರಿ ಮಾಡಲಾಗುತ್ತಿದ್ದು ಈ ತ್ಯಾಜ್ಯಗಳಿಂದ ಬರುವಂತಹ ವಿಷಪೂರಿತ ನೀರನ್ನು ಗ್ರಾಮಗಳ ಜಲಮೂಲಗಳಿಗೆ ಹರಿಯ ಬಿಡುತ್ತಿದ್ದು ಗ್ರಾಮಗಳಲ್ಲಿ ನೀರು ವಿಷಪೂರಿತವಾಗಿದೆ ಈ ಕಾರಣದಿಂದಾಗಿ ಸುತ್ತಮುತ್ತಲ ಗ್ರಾಮದವರು ಹಲವಾರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ ಈ ಕಸ ವಿಲೇವಾರಿ ಘಟಕವನ್ನು ಕೂಡಲೇ ಮುಚ್ಚಬೇಕು ಇಲ್ಲದಿದ್ದಲ್ಲಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಮುಂದಾಗುತ್ತೇವೆ ಜೊತೆಗೆ ಮುಂದಿನ ದಿನಗಳಲ್ಲಿ ಆಗಬಹುದಾದ ಅನಾಹುತಗಳಿಗೆ ಸರ್ಕಾರವೇ ಹೊಣೆಯಾಗಿರುತ್ತದೆ ತಿಳಿಸಿದರು

 ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಸಿದ್ದಲಿಂಗಯ್ಯನವರು ಮಾತನಾಡಿ ಈ ಕಸ ವಿಲೇವಾರಿ ಘಟಕಕ್ಕೆ ಭಕ್ತರ ಹಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ಯಾವುದೇ ರೀತಿಯಾದಂತಹ ಅನುಮೋದನೆ ನೀಡಿರುವುದಿಲ್ಲ ಈ ಕುರಿತಾಗಿ ಹಿಂದೆ ನಾಲ್ಕು ಬಾರಿ ನೋಟಿಸ್ ನೀಡಿದರೂ ಸಹ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ ಗ್ರಾಮ ಪಂಚಾಯಿತಿಯಲ್ಲಿ ಅನುಮೋದನೆ ನೀಡಿರುವ ಕುರಿತಾಗಿ ಯಾವುದೇ ರೀತಿಯ ದಾಖಲೆ ಪತ್ರಗಳು ಲಭ್ಯವಿರುವುದಿಲ್ಲ ಗ್ರಾಮಸ್ಥರ ಹಿತಕ್ಕಾಗಿ ಗ್ರಾಮ ಪಂಚಾಯಿತಿಯ ಸರ್ವ ಸದಸ್ಯರು ಮತ್ತು ಗ್ರಾಮಸ್ಥರೊಂದಿಗೆ ಹೋರಾಟಕ್ಕೆ ಮುಂದಾಗುತ್ತೇವೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ನವ ಬೆಂಗಳೂರು ಹೋರಾಟ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಜಿ ಏನ್ ಪ್ರದೀಪ್ ಹೋರಾಟ ಸಮಿತಿಯ ಎಲ್ಲಾ ಪದಾಧಿಕಾರಿಗಳು ಗ್ರಾಮಪಂಚಾಯತಿಯ ಸದಸ್ಯರುಗಳಾದ ಕೆ ವಿ ಕೃಷ್ಣಮೂರ್ತಿ ರಾಜಪ್ಪ ರವಿಕುಮಾರ್ ಹರೀಶ್ ಮತ್ತು ಪಿಡಿಓ ತ್ರಿವೇಣಿ ಮುಖಂಡರಾದ ಅಶ್ವತ್ಥನಾರಾಯಣಸ್ವಾಮಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಉಪಸ್ಥಿತರಿದ್ದರು

Be the first to comment

Leave a Reply

Your email address will not be published.


*