ಜಾಲಿಗೆ ಗ್ರಾಪಂ ವ್ಯಾಪ್ತಿಗೆ ಜಿಪಂ ಸಿಇಒ ಭೇಟಿ, ನರೇಗಾ ಕಾಮಗಾರಿ ಪರಿಶೀಲನೆ

ವರದಿ ಹೈದರ್ ಸಾಬ್ ಕುಂದಾಣ

ರಾಜ್ಯ ಸುದ್ದಿಗಳು 

 

ದೇವನಹಳ್ಳಿ

CHETAN KENDULI

ತಾಲೂಕಿನ ಜಾಲಿಗೆ ಗ್ರಾಪಂ ವ್ಯಾಪ್ತಿಯ ಬೆಟ್ಟೇನಹಳ್ಳಿ ಮತ್ತು ಜುಟ್ಟನಹಳ್ಳಿ ಗ್ರಾಮಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರೇವಣಪ್ಪ ಭೇಟಿ ನೀಡಿ ಮನರೇಗಾ ಕಾಮಗಾರಿಗಳ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಅವರು ಗ್ರಾಪಂ ವ್ಯಾಪ್ತಿಯಲ್ಲಿ ನರೇಗಾ ಕಾಮಗಾರಿಗಳು ಗುಣಮಟ್ಟದಿಂದ ಕೂಡಿದ್ದು, ಇದೇ ರೀತಿ ಬೇರೆ ಬೇರೆ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಉತ್ತಮವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಿ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಮಾಡಿ ಎಂದು ಅಧಿಕಾರಿಗಳಿಗೆ ಮತ್ತು ಗ್ರಾಪಂನ ಜನಪ್ರತಿನಿಧಿಗಳಿಗೆ ಸಲಹೆ ಸೂಚನೆ ನೀಡಿದರು.ಗ್ರಾಪಂ ಅಧ್ಯಕ್ಷೆ ದೀಪ್ತಿ ವಿಜಯ್‌ಕುಮಾರ್ ಮಾತನಾಡಿ, ನರೇಗಾ ಯೋಜನೆಯಡಿಯಲ್ಲಿ ಗ್ರಾಪಂಯಿಂದ ಉತ್ತಮ ಕೆಲಸ ಕಾರ್ಯಗಳು ಆಗುತ್ತಿವೆ. ಮಳೆ ನೀರಿನ ಕಾಲೂವೆಗಳನ್ನು ಮಾಡಿಸಲಾಗಿದೆ. ಮುಂದಿನ ದಿನಗಳಲ್ಲಿ ಜಾಲಿಗೆ ಗ್ರಾಪಂ ವ್ಯಾಪ್ತಿಯ ಜುಟ್ಟನಹಳ್ಳಿಯ ಕೆರೆ ಹಾಗೂ ಇತರೆ ಗ್ರಾಮ ಕೆರೆಗಳ ಹೂಳೆತ್ತುವ ಮತ್ತು ಜಾಲಿಗೆಯಿಂದ ಜುಟ್ಟನಹಳ್ಳಿ ರಸ್ತೆ ಕಾಮಗಾರಿಯನ್ನು ಮಾಡಬೇಕು ಎಂದು ತೀರ್ಮಾನಿಸಲಾಗಿದೆ. ಈಗಾಗಲೇ ಗ್ರಾಪಂನಿಂದ ಮಾಡಿರುವ ಕಾಮಗಾರಿಗಳನ್ನು ಜಿಪಂ ಸಿಇಒ ರೇವಣಪ್ಪ ಅವರು ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಹೇಳಿದರು. 

ಗ್ರಾಪಂ ಉಪಾಧ್ಯಕ್ಷ ಬಾಲಸುಬ್ರಮಣ್ಯ ಮಾತನಾಡಿ, ಗ್ರಾಪಂಯ ಅನುದಾನದಲ್ಲಿ ಕಾಮಗಾರಿಗಳು ಪಂಚಾಯಿತಿ ವ್ಯಾಪ್ತಿಯಲ್ಲಿ ಚೆನ್ನಾಗಿ ಆಗುತ್ತಿದೆ. ನರೇಗಾ ಯೋಜನೆಯಡಿಯಲ್ಲಿ ಏನೆಲ್ಲಾ ಕಾಮಗಾರಿಗಳನ್ನು ಮಾಡಲು ಸಾದ್ಯವೋ ಅವೆಲ್ಲವನ್ನೂ ಮಾಡಲಾಗುತ್ತಿದೆ. ಜುಟ್ಟನಹಳ್ಳಿ ಕೆರೆ ಹೂಳೆತ್ತುವ ಬಗ್ಗೆ ಸಿಇಒ ಗಮನಕ್ಕೆ ತರಲಾಗಿದೆ. ರಸ್ತೆ ಕಾಮಗಾರಿಯ ಬಗ್ಗೆಯೂ ಸಹ ಚರ್ಚಿಸಲಾಗಿದೆ ಎಂದರು.ಈ ವೇಳೆಯಲ್ಲಿ ಗ್ರಾಪಂ ಸದಸ್ಯರಾದ ಜುಟ್ಟನಹಳ್ಳಿ ಪದ್ಮಾವತಿ, ಬೆಟ್ಟೇನಹಳ್ಳಿ ಮಹೇಶ್‌ಕುಮಾರ್, ತಾಲೂಕು ಐಇಸಿ ಸಂಯೋಜಕಾಧಿಕಾರಿ ಪ್ರಕಾಶ್, ಸಹಾಯಕ ಅಭಿಯಂತರ ಪ್ರಶಾಂತ್, ಪಿಡಿಒ ಮೋಹನ್‌ಕುಮಾರ್, ಅಧಿಕಾರಿ ವರ್ಗ, ಗ್ರಾಪಂ ಸಿಬ್ಬಂದಿ, ಗ್ರಾಮಸ್ಥರು ಇದ್ದರು.

Be the first to comment

Leave a Reply

Your email address will not be published.


*