ರಾಜ್ಯ ಸುದ್ದಿಗಳು
ದೇವನಹಳ್ಳಿ
ತಾಲೂಕಿನ ಕೊಯಿರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರುವನಹಳ್ಳಿ ಸರಕಾರಿ ಶಾಲೆಯಲ್ಲಿ ನಿರ್ಮಿತಿ ಕೇಂದ್ರದಿಂದ ಶಾಲಾ ಕೊಠಡಿಯೊಂದನ್ನು ನಿರ್ಮಿಸಿಕೊಡಲು ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿಯನ್ನು ಸರಿಯಾದ ರೀತಿಯಲ್ಲಿ ಮಾಡುತ್ತಿಲ್ಲವೆಂದು ಪ್ರಶ್ನಿಸಿ ನಿರ್ಮಿತಿ ಕೇಂದ್ರದ ಗುತ್ತಿಗೆದಾರ (ಇಂಜಿನೀಯರ್) ಮತ್ತು ಶಿಕ್ಷಕರ ನಡುವೆ ಮಾತಿನ ಚಕಮಕಿ ನಡೆಯಿತು.
ಕಳೆದ ಎರಡು ದಿನದಲ್ಲಿ ಸಮರ್ಪಕವಾಗಿ ಗುಣಮಟ್ಟದ ಕಾಮಗಾರಿಯನ್ನು ಮಾಡದೆ, ಕಳಪೆ ಸಿಮೆಂಟ್ ಮತ್ತು ಪಾಯದ ಆಳವೂ ಸಹ ಸರಿಯಾದ ರೀತಿಯಲ್ಲಿ ಮಾಡದೆ, ಕ್ಯೂರಿಂಗ್ ಸಹ ಮಾಡದಿರುವುದರಿಂದ ಪ್ರಶ್ನಿಸಲು ಹೋದ ಶಿಕ್ಷಕರನ್ನು ಬಾಯಿಗೆ ಬಂದಂತೆ ಏಕವಚನದಲ್ಲಿ ನಿಂದಿಸಿದ್ದಾರೆಂದು ಗುತ್ತಿದಾರನ ವಿರುದ್ಧ ಶಾಲಾ ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾಮಗಾರಿಯ ಬಗ್ಗೆ ಪ್ರಶ್ನಿಸುತ್ತಿರುವ ಶಿಕ್ಷಕರು ಶಿಕ್ಷಕ ವೃತ್ತಿ ಮಾಡಬೇಕೆ ಹೊರತು ಅದನ್ನು ಬಿಟ್ಟು ಇದನ್ನೆಲ್ಲಾ ಪ್ರಶ್ನಿಸುವ ಹಕ್ಕು ಇಲ್ಲ. ಜತೆಗೆ ಶಿಕ್ಷಕರನ್ನು ಉತ್ತಮ ಗುಣಮಟ್ಟದ್ದಾಗಿದೆ ಈ ಕಾಮಗಾರಿಗೆ ಹೆಚ್ಚು ಖರ್ಚು ಬಂದಿರುತ್ತದೆ. ಅದನ್ನು ಶಿಕ್ಷಕರಾದ ನೀವೆ ಭರಿಸಿ ಎಂದು ಏರು ಧ್ವನಿಯಲ್ಲಿ ಮಾತನಾಡಿರುವುದು ಸರಿಯಾದ ಕ್ರಮವಲ್ಲ. ಒಂದು ಜವಾಬ್ದಾರಿಯುತ ಸೇವೆಯಲ್ಲಿರುವ ಶಿಕ್ಷಕರನ್ನು ಈ ರೀತಿ ನಿಂದಿಸುವುದು ಅಕ್ಷರ ಕಲಿಸುವ ಪ್ರತಿ ಶಿಕ್ಷಕರಿಗೆ ಬೆಲೆ ಇಲ್ಲದಂತೆ ಆಗಿದೆ ಎಂದು ಅರವನಹಳ್ಳಿ ಗ್ರಾಮದ ಮುಖಂಡರು ಮತ್ತು ಕೊಯಿರ ಗ್ರಾಪಂ ಸದಸ್ಯೆ ಬಿಂದು ಬಸವರಾಜ್ ಬೇಸರ ವ್ಯಕ್ತಪಡಿಸಿದ್ದಾರೆ.
*ಕಾಮಗಾರಿಯನ್ನು ಸರಿಯಾದ ರೀತಿಯಲ್ಲಿ ಮಾಡಿಲ್ಲ. ಯಾವುದೇ ಕ್ಯೂರಿಂಗ್ ಮಾಡದೆ ಕಾಮಗಾರಿ ಮಾಡಿದ್ದಾರೆ. ಅದನ್ನು ಪ್ರಶ್ನಿಸಿದರೆ, ಏಕಾಏಕಿ ನಮ್ಮನ್ನು ಏಕವಚನದಲ್ಲಿ ಮಾತನಾಡಿದ ಇಂಜಿನೀಯರ್ (ಗುತ್ತಿಗೆದಾರ) ಮುರುಳಿ ಎಂಬಾತ ಶಿಕ್ಷಕರ ವೃತ್ತಿಗೆ ಅವಮಾನ ಮಾಡಿದ್ದಾರೆ. ಅವರ ಮೇಲೆ ಮೇಲಾಧಿಕಾರಿಗಳು ಕ್ರಮಕೈಗೊಳ್ಳಬೇಕು. ಕೂಡಲೇ ಇಲ್ಲಿ ಬಂದು ಕ್ಷಮೆಯಾಚಿಸಬೇಕು.*– ಸತ್ಯನಾರಾಯಣ್ | ಸಹ ಶಿಕ್ಷಕ, ಅರುವನಹಳ್ಳಿ ಸರಕಾರಿ ಶಾಲೆ
*ಕಾಮಗಾರಿಯ ಗುಣಮಟ್ಟದ ಬಗ್ಗೆ ಎರಡು ಮಾತಿಲ್ಲ. ನಾವು ಸರಿಯಾಗಿಯೇ ಅನುದಾನಕ್ಕೆ ತಕ್ಕಂತೆ ಕಾಮಗಾರಿ ಮಾಡುತ್ತಿದ್ದೇವೆ. ಇಲ್ಲಸಲ್ಲದೆ ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಶಿಕ್ಷಕರನ್ನು ಏಕವಚನದಲ್ಲಿ ನಿಂದಿಸಿಲ್ಲ. ಗುಣಮಟ್ಟದ ಕಾಮಗಾರಿಯನ್ನು ಮಾಡುತ್ತಿದ್ದೇವೆ. ಅವರೇಳುವುದೆಲ್ಲವೂ ಸತ್ಯಕ್ಕೆ ದೂರವಾದ ಮಾತಾಗಿದೆ.*– ಮುರಳಿ | ಗುತ್ತಿಗೆದಾರ, ನಿರ್ಮಿತಿ ಕೇಂದ್ರ
Be the first to comment