ರಾಜ್ಯ ಸುದ್ದಿಗಳು
ದೇವನಹಳ್ಳಿ
ಮುಸಲ್ಮಾನರ ನಬಿ ಎಂದೇ ಹೆಸರಾಗಿರುವ ಪ್ರವಾದಿ ಮೊಹಮ್ಮದ್ (ಸ) ಪೈಗಂಬರ್ ಸುನ್ನತ್‌ಗಳಲ್ಲಿ ಒಂದಾಗಿರುವ “ಹಿಜಾಮ” ಪ್ರಕ್ರಿಯೆ ಇಂದಿಗೂ ಜಾರಿಯಲ್ಲಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಯಾವುದೇ ಜಾತಿ-ಭೇದವಿಲ್ಲದೆ ಹಿಜಾಮ ಮಾಡಿಸಿಕೊಳ್ಳು ಜನರು ಮುಂದಾಗುತ್ತಾರೆ. ಏನಿದು ಹಿಜಾಮ? : ಸಾಮಾನ್ಯವಾಗಿ ಮೂಡುವ ಪ್ರಶ್ನೆ ಹಿಜಾಮ ಎಂದರೇನು ಎಂದು, ಹಿಜಾಮ ಎನ್ನುವುದು ಒಂದು ರೀತಿಯ ವೈಜ್ಞಾನಿಕವಾಗಿ ನಡೆಸಲಾಗುವ ಸರಳ ನೋವು ರಹಿತ ಚಿಕಿತ್ಸಾ ಪ್ರಕ್ರಿಯೆ ಆಗಿದೆ. ಈ ರೀತಿಯ ಚಿಕಿತ್ಸೆ ಪಡೆಯುವುದು ಇಸ್ಲಾಂ ಧರ್ಮದಲ್ಲಿ ಪುಣ್ಯದ ಕಾರ್ಯ ಹಾಗೂ ಪ್ರವಾದಿ ಮೊಹಮ್ಮದರ ಸುನ್ನತ್ ಎಂದು ಭಾವಿಸುತ್ತಾರೆ. ಅನಾದಿ ಕಾಲದಿಂದಲೂ ಈ ಪದ್ಧತಿ ರೂಢಿಯಲ್ಲಿತ್ತು. ಈ ಚಿಕಿತ್ಸೆ ಆಗಿನ ಕಾಲದಲ್ಲಿ ಜಿಗಣೆ ಹುಳುಗಳನ್ನು ಬಳಸಿಕೊಂಡು ಮಾಡಲಾಗುತ್ತಿತ್ತು ಎನ್ನುತ್ತಾರೆ ಮುಸ್ಲಿಂ ಸಮುದಾಯದ ಪೂರ್ವಿಕರು.
ದೇವನಹಳ್ಳಿ ಪಟ್ಟಣದ ಜಾಮಿಯ ಅಹಲೇ ಹದೀಸ್ ಮಸೀದಿಯಲ್ಲಿ ಏರ್ಪಡಿಸಿದ್ದ ಹಿಜಾಮ ತೆರಪಿ ಶಿಬಿರದಲ್ಲಿ ಮುಸ್ಲಿಂ ಸಮುದಾಯದವರು ಮತ್ತು ಕೆಲ ಹಿಂದು ಸಮುದಾಯದ ಯುವಕರು ಸಹ ಹಿಜಾ ಮಾಡಿಸಿಕೊಂಡರು. ಈ ರೀತಿಯ ಚಿಕಿತ್ಸೆ ಪಡೆದುಕೊಳ್ಳುವುದರಿಂದ ದೇಹದಲ್ಲಿ ನೋವು ವೇಗವಾಗಿ ನಿವಾರಣೆಯಾಗುತ್ತದೆ. ಕಪ್ಪಿಂಗ್ ಬಳಸುವುದರಿಂದ ಸಂಧಿವಾತ, ಕೆಳ ಬೆನ್ನು ನೋವು, ಇತ್ಯಾದಿಗಳಿಂದ ಉಂಟಾಗುವ ಸಮಸ್ಯೆಗಳು ನಿವಾರಣೆಯಾಗುತ್ತದೆ. ದೀರ್ಘಕಾಲದ ಆಯಾಸ, ಸಿಂಡ್ರೋಮ್ ತೊಡೆದುಹಾಕಲು, ಶ್ವಾಸಕೋಶದ ಕಾಯಿಲೆಗಳಿಗೆ ಪರಿಹಾರ. ಚರ್ಮ ಆರೋಗ್ಯಕರಕ್ಕಾಗಿ, ಅರ್ಜೀಣತೆಯ ಸಮಸ್ಯೆಗಳು, ಮೂತ್ರ ಕಾಯಿಲೆಗಳನ್ನು ಗುಣಪಡಿಸುವುದರ ಜೊತೆಗೆ ವಿವಿಧ ರೀತಿಯ ಕಾಯಿಲೆಗಳ ನಿವಾರಣೆಗೆ ಸಹಕಾರಿಯಾಗಿದೆ. ಕಪ್ಪಿಂಗ್ ಮೂಲಕ ದೇಹದ ಕೆಟ್ಟ ರಕ್ತ ಕಲ್ಮಶಗಳನ್ನು ಹೊರಹಾಕುವ ಪ್ರಕ್ರಿಯೆ ಇದಾಗಿದೆ ಎಂದು ಷರಿಯತ್ ಮೂಲಕ ಹಿಜಾಮ ತಜ್ಞ ಪ್ರೋ.ಅಬ್ದೂಸ್ ಸಬೂರ್ ಹೇಳುತ್ತಾರೆ. ಈ ವೇಳೆ ವೈದ್ಯ ಡಾ.ಅಲ್ಮೀನ್‌ಅದಮ್, ಮುಸ್ಲಿಂ ಸಮದಾಯದ ಮುಖಂಡರು, ಹಿಂದು ಸಮುದಾಯದ ಯುವಕರು ಮತ್ತಿತರರು ಶಿಬಿರದಲ್ಲಿ ಪಾಲ್ಗೊಂಡಿದ್ದರು. ಇದರ ಸಂಪೂರ್ಣ ಮಾಹಿತಿ ಪಡೆಯಬೇಕಾದರೆ ಪ್ರೋ.ಅಬ್ದೂಸ್ ಸಬೂರ್ ಅವರ ದೂರವಾಣಿ ಸಂಖ್ಯೆ ೮೨೧೭೭೮೫೮೧೯ ಗೆ ಸಂಪರ್ಕಿಸಬಹುದು.
Be the first to comment