ಸಾಲಬಾಧೆ ತಾಳಲಾಗದೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ರೈತ

ವರದಿ ಗ್ಯಾನಪ್ಪ ದೊಡ್ಡಮನಿ ಮಸ್ಕಿ

ರಾಜ್ಯ ಸುದ್ದಿಗಳು 

ಮಸ್ಕಿ

ತಾಲೂಕಿನ ತುರ್ವಿಹಾಳ ಪೋಲೀಸ್ ಠಾಣೆ ವ್ಯಾಪ್ತಿಗೊಳಪಡುವ ಉಪ್ಪಲದೊಡ್ಡಿ ಗ್ರಾಮದ ಹುಲುಗಪ್ಪ ತಂದೆ ಭೀಮಪ್ಪ ಎಂಬ ವ್ಯಕ್ತಿಯು ಪ್ರಗತಿ ಕೃಷ್ಣಾ ಗ್ರಾಮೀಣ ಬ್ಯಾಂಕ್ ತಿಡಿಗೋಳ ರಾಷ್ಟ್ರೀಯ ಬ್ಯಾಂಕಿನಲ್ಲಿ 1ಲಕ್ಷ, ಪ್ರಾಥಮಿಕ ಪತ್ತಿನ ಸೌಹಾರ್ದ ಸಹಕಾರಿ ಬ್ಯಾಂಕ್ ತಿಡಿಗೋಳದಲ್ಲಿ ಕೃಷಿ ಸಾಲವಾಗಿ 50 ಸಾವಿರ ರುಪಾಯಿ, ಜಮೀನಿನ ಅಗ್ರಿಮೆಂಟ್ ಸಾಲವಾಗಿ 5ಲಕ್ಷ ರುಪಾಯಿ ಯನ್ನು, ಖಾಸಗಿ ಸಂಸ್ಥೆಗಳ ಬ್ಯಾಂಕ್ ಗಳಲ್ಲಿ 1ಲಕ್ಷಕ್ಕೂಅಧಿಕ ಬಡ್ಡಿ ರೂಪದಲ್ಲಿ ಒಟ್ಟು 7ಲಕ್ಷದ 50 ಸಾವಿರ ರೂಪಾಯಿಯನ್ನು ಸಾಲವನ್ನು ಪಡೆದಿರುತ್ತಾರೆ. ಈ ಸಾಲದ ಒತ್ತಡಕ್ಕೆ ಮನನೊಂದು ಕಾಲುವೆಗೆ ಹಾರುವ ಮೂಲಕ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತುರ್ವಿಹಾಳ ಪೋಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿರುತ್ತದೆ.ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ ವ್ಯಕ್ತಿಗೆ ಒಂದು ಹೆಣ್ಣು ಎರಡು ಗಂಡು ಮೂರುಜನ ಮಕ್ಕಳಿದ್ದು , ಈ ಮೂರುಜನ ಮಕ್ಕಳಿಗೆ ಮತ್ತು ಪತ್ನಿಗೆ ಹುಲುಗಪ್ಪನೆ ಆಸರೆಯಾಗಿದ್ದ ಕುಟುಂಬದ ಯಜಮಾನನೇ ಇಲ್ಲವಾಗಿದೆ.ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ ಈ ನೊಂದ ಕುಟುಂಬಕ್ಕೆ ತಾಲೂಕಾ ಆಡಳಿತ ಆಸರೆಯಾಗುತ್ತಾ ಎಂದು ಕಾದು ನೋಡಬೇಕಾಗಿದೆ.

CHETAN KENDULI

Be the first to comment

Leave a Reply

Your email address will not be published.


*