ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಇಳಕಲ್ ನೇತೃತ್ವದಲ್ಲಿ ಹಾಗೂ ಕಂದಾಯ ಇಲಾಖೆ, ಗ್ರಾಮಲೆಕ್ಕಾಧಿಕಾರಿಗಳ ಸಂಘದ ಸಹಯೋಗದೊಂದಿಗೆ, ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ತಹಶಿಲ್ದಾರರಾದ ಡಾ.ಪ್ರದೀಪಕುಮಾರ ಹಿರೇಮಠ ರವರ ಮೇಲಿನ ಹಲ್ಲೆಯನ್ನು ಖಂಡಿಸಿ ತಹಶೀಲ್ದಾರ ಕಾರ್ಯಾಲಯದ ಮುಂದೆ ಪ್ರತಿಭಟಿಸಿ,ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಇಳಕಲ್ ತಹಶಿಲ್ದಾರರ ಮೂಲಕ ಮನವಿ ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ನೌಕರರ ಸಂಘದ ಅಧ್ಯಕ್ಷರಾದ ಪರಶುರಾಮ ಪಮ್ಮಾರ, ಇದೊಂದು ಅತ್ಯಂತ ಅಮಾನವೀಯ ಹೇಯ ಕೃತ್ಯವಾಗಿದ್ದು, ಸರ್ಕಾರದ ಪ್ರತಿಯೊಂದು ಯೋಜನೆಗಳನ್ನು ಕಾರ್ಯಗತಗೊಳಿಸುವಲ್ಲಿ ರಾಜ್ಯದ ಸಮಸ್ತ ಸರಕಾರಿ ನೌಕರರು ಹಗಲಿರುಳು ಕಾರ್ಯ ನಿರ್ವಹಿಸುತ್ತಿದ್ದಾರೆ.
ತಾಲ್ಲೂಕಿನ ದಂಡಾಧಿಕಾರಿಗಳ ಮೇಲೆ ಇಂತಹ ಹಲ್ಲೆಗಳಾದರೆ ಉಳಿದ ಸರ್ಕಾರಿ ನೌಕರರು ಭಯಭೀತಿಯಿಂದ ಕಾರ್ಯಮಾಡುವಂತಾಗಿದೆ ಕಾರಣ ಹಲ್ಲೆ ಮಾಡಿದವರಿಗೆ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ರಾಜ್ಯದ ಸರಕಾರಿ ಅಧಿಕಾರಿಗಳು, ನೌಕರರು ನಿರ್ಭೀತಿಯಿಂದ ಕೆಲಸ ಮಾಡಲು ಸರಕಾರವು ಸೂಕ್ತವಾದ ಕಠಿಣ ಕಾನೂನು ರೂಪಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಅಧ್ಯಕ್ಷರಾದ ಶಂಕರ ಲಮಾಣಿ ರವರು ಮನವಿಯನ್ನು ನೀಡಿ ಮಾತನಾಡಿದರು ಹಾಗೂ ಗೌರವಾಧ್ಯಕ್ಷರಾದ ಎಸ್ ಎನ್ ಗಡೇದ,ಆರೋಗ್ಯ ಇಲಾಖೆಯ ಅನಿತಕುಮಾರ ನಾಯಕ ಮಾತನಾಡಿದರು.
ಮನವಿಯನ್ನು ಸ್ವೀಕರಿಸಿ ಮಾತನಾಡಿದ ತಹಶಿಲ್ದಾರರಾದ ಬಸವರಾಜ ಮೇಳವಂಕಿ ರವರು ಇದೊಂದು ನೋವಿನ ಸಂಗತಿಯಾಗಿದ್ದು, ಯಾವದೋ ಕಾರಣಗಳಿಂದ ಇಂತಹ ಘಟನೆಗಳು ಜರುಗಿ ನೌಕರರ ಮನೋ ಸ್ಥೈರ್ಯ ಕುಗ್ಗುವಂತಾಗಿದ್ದು,ಸದರಿ ಮನವಿಯನ್ನು ಮಾನ್ಯ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಕಾರ್ಯದರ್ಶಿಗಳಿಗೆ ಕಳುಹಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಖಜಾಂಚಿ ಎಂ ಎಚ್ ಗೌಡರ,ಕಾರ್ಯದರ್ಶಿ ಗುಂಡಪ್ಪ ಕುರಿ,ಶಿಕ್ಷಕರ ಸಂಘದ ಅಧ್ಯಕ್ಷ ಆರ್ ಎನ್ ಮಾಸರಡ್ಡಿ,ಕಂದಾಯ ಇಲಾಖೆ ನೌಕರ ಸಂಘದ ಅಧ್ಯಕ್ಷರಾದ ಸಿ ಎಸ್ ಕೊಣ್ಣೂರ,ಜಿಲ್ಲಾ ಖಜಾಂಚಿ ಎಂ ಎಸ್ ಬೀಳಗಿ,ಜಿ ಟಿ ಯಂಗಾಲಿ ಎನ್ ಪಿ ಎಸ್ ನೌಕರ ಸಂಘ, ಅಹ್ಮದ್ ವಾಲಿಕಾರ ಗ್ರಾಮ ಸಹಾಯಕರ ಸಂಘ ಹಾಗೂ ಸರ್ಕಾರಿ ನೌಕರ ಸಂಘದ ಎಲ್ಲಾ ಪದಾಧಿಕಾರಿಗಳು ಹಾಗೂ ಕಂದಾಯ,ಶಿಕ್ಷಣ, ಆರೋಗ್ಯ,ಗ್ರಾಮೀಣಾಭಿವೃದ್ಧಿ, ಲೋಕೋಪಯೋಗಿ, ಪಶುಸಂಗೋಪನೆ ಹಾಗೂ ಇನ್ನುಳಿದ ಇಲಾಖೆಗಳ ವೃಂದ ಸಂಘಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ಕಾರಿ ನೌಕರರ ಬಾಂಧವರು ಉಪಸ್ಥಿತರಿದ್ದರು.
Be the first to comment