ಕೋಗಳಿ ಗ್ರಾಪಂ:ನಿರಾಶ್ರಿತೆಯ ಕೂಗು ಕೇಳೋರಿಲ್ಲ, ಉನ್ನತಾಧಿಕಾರಿಗಳ ಆದೇಶ ಲೆಕ್ಕಕ್ಕಿಲ್ಲ.. ಹಲವು ಯೋಜನೆ ಕಾಮಗಾರಿಗಳಲ್ಲಿ ಭಾರೀ ಹಗರಣ.!?ಶಂಕೆ

ವಿಜಯನಗರ ಜಿಲ್ಲೆ ಹಗರಿಬೊಮ್ಮನಹಳ್ಳಿ (ಕೊಟ್ಟೂರು)ತಾಲೂಕು,ಕೋಗಳಿ ಗ್ರಾಮ ಪಂಚಾಯ್ತಿಯಲ್ಲಿ ನಿರಾಶ್ರಿತರ ಕೂಗಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಕೋಗಳಿ ಗ್ರಾಪಂ ನಲ್ಲಿ ಅಯೋಗ್ಯ ಪಲಾನುಭವಿಗಳಿಗೇ ಮನ್ನಣೆ.. ಯೋಗ್ಯ ಪಲಾನುಭವಿಗಳಿಗಿಲ್ಲ ಮನ್ನಣೆ… ಎಂಬ ಆರೋಪಗಳು ಕೇಳಿಬಂದಿವೆ. ಪರಿಣಾಮ ನಿರಾಶ್ರಿತೆ ಸತತ ಏಳೆಂಟು ವರ್ಷಗಳಿಂದಲೂ ಮನವಿ ಮಾಡಿದರೂ ಮನ್ನಣೆ ನೀಡಿಲ್ಲ, ಭಂಡ ಭ್ರಷ್ಟಾಚಾರದ ಸ್ಥಳೀಯ ಆಡಳಿತದ ವಿರುದ್ಧ ರಾಟಕ್ಕಿಳಿದ ದಿಟ್ಟೆ ನೊಂದ ನಿರಾಶ್ರಿತೆ ನಾಗರತ್ನಮ್ಮ ನಿರಂತರ ಸಮರ ಸಾರಿದ್ದಾಳೆ.ಇವಳ ಹೋರಾಟಕ್ಕೆ ಕೆಲ ಸ್ಥಳೀಯ ಹೋರಾಟಗಾರರು ನೈತಿಕ ಬೆಂಬಲ ವ್ಯಕ್ತಪಡಿಸಿದ್ದು,ಈವರೆಗೂ ಗ್ರಾಪಂ ನಲ್ಲಿ ಜರುಗಿರುವ ಭ್ರಷ್ಟಾಚಾರದ ಕುರಿತು ಕಾನೂನಾತ್ಮ ಹೋರಾಟಗಳನ್ನು ಮಾಡುವುದಾಗಿ ಹೋರಾಟಗಾರರು ತಿಳಿಸಿದ್ದಾರೆ. ಲೋಕಾಯುಕ್ತರನ್ನೊಳಗೊಂಡಂತೆ ಇಲ‍ಾಖೆಯ ಉನ್ನತಾಧಿಕಾರಿಗಳ ಆದೇಶಕ್ಕೆ, ಮನ್ನಣೆ ನೀಡಿಲ್ಲ ಎಂಬ ಗಂಭೀರ ಆರೋಪ ಗ್ರಾಪಂ ಅಭಿವೃದ್ಧಿ ಅಧಕಾರಿಯ ಮೇಲಿದೆ.ಕೆಲ ವರ್ಷಗಳಿಂದಲೂ ವಸತಿ ಹಂಚಿಕೆಯಲ್ಲಿ,ಭಾರೀ ಭ್ರಷ್ಟಚಾರದ ಜರುಗಿದೆ ಎಂಬ ಆರೋಪದ ದುರ್ವಾಸನೆ ಹಬ್ಬಿದ್ದು,ಸೂಕ್ತ ತನಿಖೆಯಾದರೆ ಸತ್ಯ ಬಯಲಿಗೆ ಬರಲಿದೆ ಎಂದು ಕೆಲ ಗ್ರಾಮಸ್ಥರು ಸ್ಪಷ್ಟಪಡಿಸಿದ್ದಾರೆ.ಈಗ ಆಯ್ಕೆಯಾಗಿರುವ ಪಲಾನುಭವಿಗಳ ಪಟ್ಟಿಯಲ್ಲಿ ಶೇ25%ರಷ್ಟು ವಸತಿ ಹೊಂದಿದವರಿದ್ದು,ಯೋಜನೆಗೆ ಅನರ್ಹರನ್ನು ಆಯ್ಕೆ ಮಾಡಲಾಗಿದೆ ಎಂದು ಹೋರಾಟಗಾರರು ದೂರಿದ್ದಾರೆ.ಆದ್ರೆ ಹಲವು ವರ್ಷಗಳಿಂದ ವಸತಿಗಾಗಿ ಮನವಿ ಮಾಡಿರೋ ವಿಧವೆ,ನಿರಾಶ್ರಿತ ಮಹಿಳೆ ನಾಗರತ್ನಮ್ಮ ಎಂಬುವರ ಕೂಗಗಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಹಾಗೂ ಜನಪ್ರತಿನಿಧಿಗಳು ಸ್ಪಂದಿಸುತ್ತಿಲ್ಲ ಎಂದು ಸ್ಥಳೀಯ ಹೋರಾಟಗಾರರು ಆಕ್ರೋಶ ವ್ಯೆಕ್ತಪಡಿಸಿದ್ದಾರೆ.ನಾಗರತ್ನಮ್ಮಳಿಗೆ ವಸತಿ ನೀಡುವಂತೆ ಲೋಕಾ ಯುಕ್ತರಿಂದ, ಹಾಗೂ ಇಲಾಖಾ ಉನ್ನತಾಧಿಕಾರಿಗಳಿಂದ ಸೂಚನೆ ಬಂದಿದೆಯಾದರೂ ಸ್ಥಳೀಯ ಆಡಳಿತ ಕ್ಯಾರೇ ಅನ್ನಲಿಲ್ಲವಂತೆ. ಸ್ಥಳೀಯ ಆಡಳಿತ ಭ್ರಷ್ಟರ ಬಂಢರ ಕೂಪವಾಗಿದ್ದು , ಗ್ರಾಪಂನಲ್ಲಿ ಮಾನವೀಯತೆಗೆ ಹಾಗೂ ಅಧಿಕಾರಿಗಳ ಆದೇಶಕ್ಕೆ ಯಾವುದೇ ಮರ್ಯಾದೆ ಇಲ್ಲ ಎನ್ನುತ್ತಾರೆ ಸ್ಥಳೀಯ ಹೋರಾಟಗಾರರು. ಹಲವು ಯೋಜನೆಗಳಲ್ಲಿ ಹಾಗೂ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ಜರುಗಿರುವ ಶಂಕೆಯಿದ್ದು ಸೂಕ್ತ ತನಿಖೆಯಾಗಬೇಕಿದೆ,ಇಲಾಖೆಗಳಿಗೆ ಸೂಕ್ತ ದಾಖಲುಗಳ ಸಮೇತ ದೂರ ನೀಡಲಾಗುವುದು ಎಂದು ಹೋರಾಟಗಾರರು ತಿಳಿಸಿದ್ದಾರೆ. ನಾಗರತ್ನಮ್ಮ ವಿಧವೆ ಇದ್ದು ವಸತಿಗಾಗಿ ಕೆಲ ವರ್ಷಗಳಿಂದ ಸತತ ಮನವಿ ಮಾಡಿದ್ದಾಳೆ,ಅರ್ಹ ಪಲಾನುಭವಿಗಳನ್ನ ಪರಿಗಣಿಸದೇ ಜನಪ್ರತಿನಿಧಿಗಳು ಅಧಿಕಾರಿಗಳು ಕೆಲ ಅನರ್ಹರಿಗೆ ಮಣೆಹಾಕಿದ್ದಾರೆ ಎಂಬ ದೂರು ಕೇಳಿಬಂದಿದೆ. ತನಗಾದ ಅನ್ಯಾಯದ ವಿರುದ್ಧ ,ನೊಂದ ನಿರಾಶ್ರಿತೆ ಗ್ರಾಪಂ ಕಚೇರಿಮುಂದೆ ಧರಣಿ ನಡೆಸಿದ್ದಾಳೆ. ಕಳೆದ ಬಾರಿಯಂತೆ ಈ ಬಾರಿಯ ವಸತಿ ಹಂಚಿಕೆಯಲ್ಲಿ ಶೇ 25%ರಷ್ಟು ಭ್ರಷ್ಟಾಚಾರ ಜರುಗಿರುವುದಕ್ಕೆ ಸಾಕ್ಷಿಯಾಗಿದ್ದು,ಇದರಿಂದಾಗಿ ಅರ್ಹ ಪಲಾನುಭವಿಗಳಿಗೆ ಅನ್ಯಾಯಮಾಡಿದಂತಾಗುತ್ತದೆ.

 

ಕಾರಣ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು,ಕೋಗಳಿ ಗ್ರಾಪಂ ವ್ಯಾಪ್ತಿಯ ವಸತಿ ಪಲಾನುಭವಿಗಳ ಪಟ್ಟಿಯನ್ನ ತಡೆಹಿಡಿದು ಸೂಕ್ತ ತನಿಖೆಗೆ ಒಪ್ಪಿಸಬೇಕಿದೆ. ಸ್ಥಳ ಮಹಜರು ಪಡೆದು ಅಯೋಗ್ಯರನ್ನು ಬಿಡಬೇಕು ಯೋಗ್ಯರನ್ನು ಪರಿಗಣಿಸಬೇಕೆಂದು ಹೋರಾಟಗಾರರು ಒತ್ತಾಯಿಸಿದ್ದಾರೆ.ತಾಪಂ ಕಾರ್ಯನಿರ್ವಹಣಾಧಿಕಾರಿಗಳು ಶೀಘ್ರವೇ ಕೋಗಳಿ ಗ್ರಾಪಂ ಗೆ ಭೆಟ್ಟಿ ನೀಡಬೇಕಿದೆ,ವಸತಿ ಪಲಾನುಭವಿಗಳ ಕುರಿತು ಖುದ್ದು ತನಿಖೆ ಮಾಡಿ ಅನರ್ಹರನ್ನ ಕೈಬಿಬೇಕಿದೆ.

ನಿರಾಶ್ರಿತೆ ನಾಗರತ್ನಮ್ಮಳಂತ ಅರ್ಹರಿಗೆ ವಸತಿ ಕಲ್ಪಿಸಬೇಕಿದ್ದು, ಈ ಮೂಲಕ ಭ್ರಷ್ಟರ ವಿರುದ್ಧ ಚಾಟೀ ಬೀಸಬೇಕಿದ್ದು ಅವರು ಪ್ರಾಮಾಣಿಕತೆ ಕರ್ಥವ್ಯ ನಿಷ್ಠೆ ತೋರಬೇಕಿದೆ…. ನಿರ್ಲಕ್ಷ್ಯ ತೋರಿದ್ದಲ್ಲಿ ಬಂಢ ಭ್ರಷ್ಟ ವ್ಯವಸ್ಥೆಗೆ ಅವರೂ ಕೂಡ ಪರೋಕ್ಷವಾಗಿ ಸಾಥ್ ನೀಡಿದಂತಾಗುತ್ತದೆ.ಕೋಗಳಿ ಗ್ರಾಪಂ ವ್ಯಾಪ್ತಿಯಲ್ಲಿ ನ್ಯಾಯ ಎಲ್ಲಿದೆ..!?,ಎಂಬ ನಿರಾಶ್ರಿತೆ ನಾಗರತ್ನಮ್ಮಳಂತ ಅದೆಷ್ಟೋ ನಿರಾಶ್ರಿತರ ಧ್ವನಿಯನ್ನ ಕೇಳೋರಿಲ್ಲದಂತಾಗುತ್ತದೆ. ಇದು ಕೋಗಳಿಯ ನಿರಾಶ್ರಿತೆ ನಾಗರತ್ನಮ್ಮಳಂತಹ,ಅದೆಷ್ಟೋ ನಿರಾಶ್ರಿತರ ನೊಂದ ಅರಣ್ಯ ರೋಧನವಾಗಿದೆ. ಶೋಷಿತರ ಧ್ವನಿಯಾಗಬೇಕಿರುವ ಶಾಸಕರೆಲ್ಲಿರುವಿರಿ.!? ಜನರ ಕಣ್ಣೀರೊರೆಸಬೇಕಿರುವ ಜಿಲ್ಲಾ ಉಸ್ಥುವಾರಿ ಸಚಿವರೇ ಎಲ್ಲಿದ್ದೀರಾ..!? ಕರ್ಥವ್ಯ ನಿಷ್ಠೆಗೆ ಹೆಸರಾಗಿರುವ ಜಿಲ್ಲಾಧಿಕಾರಿಗಳೇ ಗಮನಿಸುವಿರಾ.!? ಭ್ರಷ್ಟರನ್ನ ಹತ್ತಿಕ್ಕುವ ಲೋಕಾಯುಕ್ತರೇ ನಿಮ್ಮ ಪವರ್ ತೋರಿಸುವಿರಾ..!?, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೇ ನಿಮ್ಮ ಖದರ್ ತೋರುವಿರಾ.!?. ಉತ್ತರಕ್ಕಾಗಿ ಕಾದು ಕುಳಿತಿರುವ ಕೋಗಳಿ ಗ್ರ‍‍‍ಾಪಂ ವ್ಯಾಪ್ತಿಯ ನೊಂದ ನಿರಾಶ್ರಿತೆ ನಾಗರತ್ನಮ್ಮ ಹಾಗೂ ಇತರೆ ನಿರಾಶ್ರಿತರು.

Be the first to comment

Leave a Reply

Your email address will not be published.


*