ಜಿಲ್ಲಾ ಸುದ್ದಿಗಳು
ಭಟ್ಕಳ
ಡಾಕ್ಟರ್ ಅರುಣ ಕುಮಾರ್ ಅವರು ಮೂಲತಃ ಉಡುಪಿಯಯವರು, ಇವ್ರು ಎ.ಜೆ ಮೆಡಿಕಲ್ ಕಾಲೇಜಿನಲ್ಲಿ ಎಂ.ಎಸ್ ಮುಗಿಸಿ ಕಳೆದ 12 ವರುಷಗಳಿಂದ ವೇಣೂರು, ಕುಂಬಾಶಿ ಹೀಗೆ ಹಲವು ಕಡೆ ಸರಕಾರಿ ಆಸ್ಪತ್ರೆಗಳಲ್ಲಿ ತಮ್ಮ ಸೇವೆ ನೀಡುತ್ತಾ ಇದ್ದು, ಕಳೆದ 2 ವರ್ಷಗಳಿಂದ ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಾ ಚಿಕಿತ್ಸೆ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಭಟ್ಕಳ್ ಸರಕಾರಿ ಆಸ್ಪತ್ರೆಗೆ ಬಂದಾಗಿನಿಂದ ದಿನಕ್ಕೆ 4-5 ಶಸ್ತ್ರಾ ಚಿಕಿಸ್ತೆ ಮಾಡುತ್ತಿದ್ದಾರೆ. ಡಾಕ್ಟರ್ ಅರುಣ್ ಕುಮಾರ್ ಅವರ ಈ ಕೆಲಸದಿಂದ ಭಟ್ಕಳದ ಸರಕಾರಿ ಆಸ್ಪತ್ರೆಗೆ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶಸ್ತ್ರ ಚಿಕಿತ್ಸೆಗೆ ಬರುತ್ತಿದ್ದಾರೆ ಮತ್ತು ಭಟ್ಕಳದ ಸರಕಾರಿ ಆಸ್ಪತ್ರೆ ಸದಾ ಜನಗುಳಿ ಇಂದ ತುಂಬಿರುತದೆ. ಭಟ್ಕಳ ಸರಕಾರಿ ಆಸ್ಪತ್ರೆ ಅಪಾರ ಜನ ಮನ್ನಣೆ ಗಳಿಸಲು ಇವರ ಕೊಡುಗೆ ತುಂಬಾ ಇದೆ.ಡಾಕ್ಟರ್ ಅರುಣ್ ಕುಮಾರ್ ಅವರ ಈ ಕಾರ್ಯ ಮೆಚ್ಚಿ ಗಣರಾಜ್ಯೋತ್ಸವ ದಿನ ಭಟ್ಕಳ ತಾಲೂಕ ಆಡಳಿತದ ಪರವಾಗಿ ಶಾಸಕ ಸುನೀಲ್ ಡಾಕ್ಟರ್ ಅರುಣ್ ಕುಮಾರ್ ಅವರನ್ನು ಸನ್ಮಾನಿಸಿದರು. ಗಣರಾಜ್ಯೋತ್ಸವದ ಸನ್ಮಾನ ಪಡೆದ ಡಾಕ್ಟರ್ ಅರುಣ್ ಕುಮಾರ್ ಅವರನ್ನು ಕರ್ನಾಟಕ ರಣಧೀರರ ವೇಧಿಕೆ ಜಿಲ್ಲಾಧ್ಯಕ್ಷ ಈರ ನಾಯ್ಕ ಚೌತನಿ, ಸಮಾಜವಾದಿ ಪಕ್ಷದ ಭಟ್ಕಳ್ ತಾಲೂಕ ಅಧ್ಯಕ್ಷ ಅಂಥೋನ್ ಜುಜೆ ಲೂಯಿಸ್, ಸುನ್ನಿ ಯುವಜನ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಷರೀಫ್, ಮಾಹಿತಿ ಹಕ್ಕು ಕಾರ್ಯಕರ್ತ ನಾಗೇಶ್ ನಾಯ್ಕ ಹೇಬಳೆ, ಸಾಮಾಜಿಕ ಹೋರಾಟಗಾರ ರಾಮಚಂದ್ರ ಗೊಂಡ ಮುಂತಾದವರು ಅಭಿನಂದಿಸಿದ್ದಾರೆ.
Be the first to comment