ರೆಡ್ಡಿ ಜನಾಂಗ ಅಭಿವೃದ್ಧಿ  ನಿಗಮ ಮಾಡಿ:: ರೆಡ್ಡಿ ಸೇವಾದಳದ ರಾಜ್ಯಾಧ್ಯಕ್ಷ ವಿಶ್ವನಾಥ ರೆಡ್ಡಿ ಆಗ್ರಹ

ವರದಿ: ಅಮರೇಶ ಕಾಮನಕೇರಿ


    ರಾಜ್ಯ ಸುದ್ದಿಗಳು


ಬೆಂಗಳೂರು:: ಹತ್ತಾರು ಜನಕ್ಕೆ ಊಟ ಹಾಕುವ ರೈತ ಪರಂಪರೆಯಲ್ಲಿ ಬಂದ ರೆಡ್ಡಿ ಜನಾಂಗ ನಿರ್ಘತಿಗ ವಾಗುತಿದೆ ,ಅವರಿಗೆ ಸ್ವಾವಲಂಬನೆ ನೀಡಲು ಸರ್ಕಾರ ರೆಡ್ಡಿ ನಿಗಮ ನಿರ್ಮಿಸ ಬೇಕೆಂದು ರೆಡ್ಡಿ ಸೇವದಳದ ಅಧ್ಯಕ್ಷರಾದ ವಿಶ್ವನಾಥ ರೆಡ್ಡಿ ಅವರು ಇಂದು ನಡೆದ ಸಮಾಜದ
ಕಾರ್ತಿಕ ಮಾಸದ ವನಭೊಜನದ ಸಮಾರಂಭದಲ್ಲಿ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಪಶುವೈದ್ಯಕೀಯ ಆವರಣದ ಸಭಾಂಗಣದಲ್ಲಿ ಈ ಕಾರ್ಯಕ್ರಮ ಹಮ್ಮಿಕಳ್ಳಲಾಗಿದ್ದು , ಜನಾಂಗದ ರೈತ ಮಹಿಳೆಯರಿಂದ ವಿನ್ನೂತನವಾಗಿ
ಜ್ಯೊತಿ ಬೆಳಗಿಸಿ
ಜನಾಂಗದ ಹೇಮರೆಡ್ಡಿ ಮಲ್ಲಮ್ಮ ಮತ್ತು ವಿಶ್ವ ಕವಿ ವೇಮಾ ರೆಡ್ಡಿ ಯ ಪುತ್ತಳಿಗೆ ಜನಾಂದ ವತಿಯಿಂದ ಪೂಜೆ ಸಲ್ಲಿಸಿ ರೈತರ ಅಭಿವೃದ್ಧಿ ಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಹಕರಿಸ ಬೇಕೆಂದು ದೇಶದ ಬೆನ್ನೆಲುಬಾದ ರೈತರನ್ನು ನಿರ್ಲಕ್ಷಿಸಬಾರದು ಅದರಲ್ಲೂ ರಾಜ್ಯದಲ್ಲಿ ರೆಡ್ಡಿ ಜನಾಂಗ ಸುಮಾರು 96 ಲಕ್ಷ ವಿದ್ದು ಅವರಿಂದ ಎಲ್ಲಾ ಪ್ರಮುಖ ರಂಗಗಳ್ಲೂ ಸೇವೆ ಸಲ್ಲಿಸುತ್ತದ್ದರೂ ಇದುವರೆಗು ರೆಡ್ಡಿ ನಿಮಗ ನಿರ್ಮಾಣ ರಚನೆ ಆಗದಿರುವುದು ಬಾಳ ನೊವಿನ ಸಂಗತಿ ಎಂದು ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ರೈತ ಸಂಘದ ಅಧ್ಯಕ್ಷ ನಾರಾಯಣ ರೆಡ್ಡಿ ತಿಳಿಸಿದರು.
ಸೇವಾ ದಳದ. ಅಧ್ಯಕ್ಷ ವಿಶ್ವನಾಥ ರೆಡ್ಡಿ ಅವರು ಮಾತನಾಡುತ್ತಾ ರೆಡ್ಡಿ ಜನಾಂಗದಲ್ಲಿ ಶೇಕಡಾ 80 ರಷ್ಟು ಜನ ಬಡವರಿದ್ದಾರೆಂದು 20 ರಷ್ಟು ಜನ ಮಾತ್ರ ಒಳ್ಳೆಯ ಸ್ಥಿತಿಯಲ್ಲಿದ್ದಾರೆ ಆದರೆ ಬಡ ರೇಖೆಯಲ್ಲಿ ಇದ್ದವರು ಸಮಾಜಲ್ಲಿ ಹಿಂದೆ ಇರುವುದನ್ನು ಸ್ವಾಭಿಮಾನ ದಿಂದ ಹೇಳುಕೊಳ್ಳಲು ಇಚ್ಚೆ ಪಡುವುದಿಲ್ಲ ಎಂದು ಅದಕ್ಕೆ ರೈತರಿಗೆ ಬತ್ತ , ಬೇಳೆ , ಸೇಂಗಾ ಮತ್ತು ತರ್ಕಾರಿ ವಸ್ತುಗಳಿಗೆ
ಬೆಲೆ ನಿಗದಿ ಮಾಡಬೇಕು , ಫುಡ್ ಕೊರ್ಟ್ ನಿರ್ಮಿಸ ಬೇಕು , ಬಿತ್ತುವಾಗಲೆ ವಿಮಾ ಕಲ್ಪಿಸ ಬೇಕು ದಳ್ಳಾಳಿಗಳಿಂದ ಅವರನ್ನು ತಪ್ಪಿಸಿ ನೇರ ಮಾರುಕಟ್ಟೆ ವ್ಯವಸ್ಥೆ , ಶೀತಲೀಕರಣ ಉಗ್ರಾಣಗಳು ನಿರ್ಮಿಸಲು ಸರ್ಕಾರವನ್ನು ಡಿಮಾಂಡ್ ಮಾಡಿದರು.
ದಳದ ಕಾರ್ಯದರ್ಶಿ ನಂದಕುಮಾರ್ ರೆಡ್ಡಿ ಮಾತನಾಡುತ್ತಾ ಸ್ವತಂತ್ರದ ರಾಜ್ಯದ ಮೊದಲ ಮುಖ್ಯ ಮಂತ್ರಿ ಆದ ಕೆ.ಸಿ.ಚಂಗಲರಾಯ ರೆಡ್ಡಿ ಅವರ ಬಗ್ಗೆ ಪಾಠ್ಯಪುಸ್ತಕಗಳಲ್ಲಿ ವಿವರವಾಗಿ ಮುದ್ರಿಸಬೇಕು ಮತ್ತು ಆಂಧ್ರಪ್ರದೇಶದ ಮುಖ್ಯಮಂತ್ರಿ ಮತ್ತು ರಾಷ್ಟ್ರಪತಿಯಾದ ನೀಲಂ ಸಂಜೀವರೆಡ್ಡಿ ಸಮಾಧಿ ಬೆಂಗಳೂರು ನಗರದಲ್ಲಿ ಇದ್ದರೂ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಇದನ್ನು ಅಭಿವೃದ್ಧಿ ಗೊಳಿಸಬೇಕೆಂದರು.
ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ರೆಡ್ಡಿ ಸೇವಾದಳದ ಜಾತಾ ನಿರ್ವಹಿಸಲಾಗುತ್ತದೆ ಮತ್ತು ಜಿಲ್ಲಾವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜದ ಬೇಡಿಕೆಗಳ ಬಗ್ಗೆ ಒತ್ತಾಯ ಮಾಡುತ್ತೆವೆಂದು ಸೇವಾದಳದ ಕಾರ್ಯದರ್ಶಿ ಮಂಜುಳಾರೆಡ್ಡಿ ತಿಳಿಸಿದರು ಈ ಕಾರ್ಯಕ್ರಮ ದಲ್ಲಿ , ಶೆಖರ್ ರೆಡ್ಡಿ , ಮಹೇಷ್ ರೆಡ್ಡಿ ಮುಂತಾದ ರೆಡ್ಡಿ ಜನಾಂಗದ ಪ್ರಮುಖರು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮಕ್ಕೆ ಸೇರಿದ ಎಲ್ಲಾ ಜನರಿಗೂ ಹಳ್ಳಿಯ ಸೊಗಡಿನ ರೀತಿಯಲ್ಲಿ ಬೇಯಿಸಿದ ಕಳ್ಳೆಕಾಯಿ , ಅವರೇಕಾಯಿ ತಿಂದವರಿಗೆ ತಿಂದಷ್ಟು , ಮತ್ತು ಊಟಕ್ಕು ಹಳ್ಳಿಯ ರೀತಿಯ ಮುದ್ದೆ ಕಾಳುಸಾರು ಮಕ್ಕಳಿಗಳಿಗೆ ತುಂಬಿಸಿದ್ದ ತರತರ ಅಪ್ಪಳ , ಜೋಳಗಲ್ಲಿ ತುಂಬಿದ ಮಜ್ಜಿಗೆ , ಮುಂತಾದ ಹಳ್ಳಿಯ ರೀತಿಯ ತಿಂಡಿ ತಿನುಸುಗಳನು ಸವಿದ ಆಗಮಿಸಿದ ಜನ ಊಟದ ವ್ಯವಸ್ಥೆಗೆ ಮನಸೋತರು.

Be the first to comment

Leave a Reply

Your email address will not be published.


*