ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ಶಾಸಕ ಡಾ.ಚರಂತಿಮಠ ಚಾಲನೆ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ: ಪ್ರಸಕ್ತ ಸಾಲಿನ ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ತೊಗರಿ ಖರೀದಿಗೆ ಶಾಸಕ ವೀರಣ್ಣ ಚರಂತಿಮಠ ಸೋಮವಾರ ಚಾಲನೆ ನೀಡಿದರು.

ನವನಗರದ ಎಪಿಎಂಸಿ ಯಾರ್ಡನಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಶ್ರಯದಲ್ಲಿ ಹಮ್ಮಿಕೊಂಡ ತೊಗರಿ ಖರೀದಿಗೆ ಚಾಲನೆ ನೀಡಿ ಮಾತನಾಡಿದ ಅವರು ಪ್ರತಿ ಕ್ವಿಂಟಲ್‍ಗೆ 6300 ಗಳಂತೆ ಪ್ರತಿ ಎಕರೆಗೆ 7.50 ಕ್ವಿಂಟಲ್, ಗರಿಷ್ಠ 15 ಕ್ವಿಂಟಲ್ ತೊಗರಿಯನ್ನು ಖರೀದಿಸಲಾಗುತ್ತಿದ್ದು, ಇದರ ಸದುಪಯೋಗವನ್ನು ರೈತರು ಪಡೆದುಕೊಳ್ಳಲು ತಿಳಿಸಿದರು. ಖರೀದಿಯಾದ ಮೇಲೆ ನಿಗದಿತ ಅವಧಿಯಲ್ಲಿ ಹಣ ಜಮೆಗೆ ಕ್ರಮವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ 952 ಜನ ರೈತರು ನೋಂದಣಿ ಮಾಡಿಕೊಂಡಿದ್ದು, ಇನ್ನು ಜನವರಿ 20 ವರೆಗೆ ಅವಕಾಶವಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಬಸವರಾಜ ಪಾಟೀಲ, ಟಿ.ಎ.ಪಿ.ಸಿ.ಎಂ.ಎಸ್‍ನ ಅಧ್ಯಕ್ಷ ಶೇಖರಪ್ಪ ಮಾಚಾ, ಮಾಜಿ ಎಪಿಎಂಸಿ ಅಧ್ಯಕ್ಷ ಪ್ರಭುಸ್ವಾಮಿ ಸರಗಣಾಚಾರಿ, ಕೃಷ್ಣಾ ಲಮಾಣಿ, ಟಿಎಪಿಸಿಎಂಎಸ್‍ನ ನಿರ್ದೇಶಕರಾದ ವೆಂಕಣ್ಣ ಹಲಗಲಿ, ಸಿದ್ದಪ್ಪ ಹೂಗಾರ, ವೆಂಕಟೇಶ ರಂಗನ್ನವರ, ಬಸಮ್ಮ ಗಾಣಿಗೇರ, ರಾಜು ಅಂಗಡಿ, ಎಪಿಎಂಸಿ ಕಾರ್ಯದರ್ಶಿ ಎನ್.ಎ.ಲಕ್ಕುಂಡಿ, ವರ್ತಕರ ಸಂಘದ ಅಧ್ಯಕ್ಷ ಮಹೇಶ ಅಂಗಡಿ, ಮುಖ್ಯ ಕಾರ್ಯ ನಿರ್ವಾಹಕ ಎಸ್.ಎಸ್.ಹಣಗಿ, ಕಾನೂನು ಸಲಹೆಗಾರ ಎನ್.ಎಸ್.ಹಣಗಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Be the first to comment

Leave a Reply

Your email address will not be published.


*