ತರಬೇತಿ ಕಾರ್ಯಾಗಾರ ಉದ್ಘಾಟನೆ:ವಿಶೇಷ ಶಿಕ್ಷಕರ ಪಾತ್ರ ಮಹತ್ತರ : ಜಾಸ್ಮಿನ್ ಕಿಲ್ಲೇದಾರ

ವರದಿ: ಶರಣಪ್ಪ ಹೆಳವರ ಬಾಗಲಕೋಟೆ

ಜಿಲ್ಲಾ ಸುದ್ದಿಗಳು

ಬಾಗಲಕೋಟೆ:ವಿಕಲಚೇತನ ಮಕ್ಕಳಿಗೆ ಸಮನ್ವಯ ಶಿಕ್ಷಣ ನೀಡುವಲ್ಲಿ ವಿಶೇಷ ಸಂಪನ್ಮೂಲ ಶಿಕ್ಷಕರ ಪಾತ್ರ ಮಹತ್ತರವಾಗಿದೆ ಎಂದು ಜಿಲ್ಲಾ ಯೋಜನಾ ಉಪಸಮನ್ವಯಾಧಿಕಾರಿ(ಗುಣಮಟ್ಟ) ಜಾಸ್ಮೀನ್ ಕಿಲ್ಲೇದಾರ ಹೇಳಿದರು.

ನವನಗರದ ಅಗಸ್ತ್ಯ ಕೋರ್ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಬಾಗಲಕೋಟೆ ಮತ್ತು ವಿಜಯಪುರ ಅವಳಿ ಜಿಲ್ಲೆಯ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕರಿಗೆ ಸಾಮಥ್ರ್ಯಾಭಿವೃದ್ದಿ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬುದ್ದಿಮಾಂದ್ಯತೆ, ಅಟಿಸಂ, ದೈಹಿಕದೋಷ, ಶ್ರವಣದೋಷ ಸೇರಿದಂತೆ 21 ವಿಕಲತೆಯ ವಿಶೇಷ ಅಗತ್ಯತೆಯ ಮಕ್ಕಳಿಗೆ ಅಗತ್ಯವಿರುವ ಕಲಿಕಾ ಚಟುವಟಿಕೆ ನೀಡುವ ಮೂಲಕ ಶಿಕ್ಷಣದ ಮುಖ್ಯವಾಹಿನಿಗೆ ತರಬೇಕೆಂದು ಸಲಹೆ ನೀಡಿದರು. ವಿಜಯಪುರ ಜಿಲ್ಲೆಯ ಸಹಾಯಕ ಸಮನ್ವಯ ಅಧಿಕಾರಿ ಶಿವಾನಂದ ಪಡಶೆಟ್ಟಿ ಮಾತನಾಡಿ ಸಾಮಾನ್ಯ ಮಕ್ಕಳೊಂದಿಗೆ ವಿಕಲಚೇತನ ಮಕ್ಕಳನ್ನು ಜೊತೆಯಾಗಿ ಶಿಕ್ಷಣ ನೀಡುವುದೇ ಸಮನ್ವಯ ಶಿಕ್ಷಣವಾಗಿದ್ದು, ವಿಕಲಚೇತನ ಮಕ್ಕಳಿಗೆ ಅವರ ವಿಕಲತೆಗೆ ತಕ್ಕಂತೆ ಶಿಕ್ಷಣ ನೀಡಬೇಕು ಎಂದು ಹೇಳಿದರು. ವೈದ್ಯ ಡಾ.ರಜನೀಸ್ ಮಾತನಾಡಿದರು.

ಇನ್ನೋರ್ವ ಜಿಲ್ಲಾ ಯೋಜನಾ ಉಪಸಮನ್ವಯ ಅಧಿಕಾರಿ (ಕಾರ್ಯಕ್ರಮ) ಸಿ.ಆರ್.ಓಣಿ ಅಧ್ಯಕ್ಷತೆ ವಹಿಸಿ ಮಾತನಾಡಿ ಆಯಾ ವಿಕಲತೆಯ ಮಕ್ಕಳಿಗೆ ಅವರಿಗೆ ತಕ್ಕಂತೆ ಶಿಕ್ಷಣ ನೀಡಬೇಕು ಎಂದರು.

ವೇದಿಕೆಯ ಮೇಲೆ ಉಪನಿರ್ದೇಶಕರ ಕಚೇರಿಯ ವಿಷಯ ಪರಿವೀಕ್ಷಕರಾದ ಡಿ.ಎಂ.ಯಾವಗಲ್, ಎಸ್.ಎಸ್.ಹಾಲವರ, ಬಡ್ರ್ಸ್ ಬಸವರಾಜ ಹಾಜರಿದ್ದರು.ಸಹಾಯಕ ಸಮನ್ವಯಾಧಿಕಾರಿ ಎಸ್.ಕೆ.ಕಲ್ಲೂರ ಪ್ರಾಸ್ಥಾವಿಕವಾಗಿ ಮಾತನಾಡಿದರು. ಎಸ್.ಎಂ.ಬೆನ್ನೂರ ಸ್ವಾಗತಿಸಿದರು. ಬಿ.ಎಂ.ಮಂತ್ರಿ ಕಾರ್ಯಕ್ರಮ ನಿರೂಪಿಸಿದರು. ತರಬೇತಿ ಕಾರ್ಯಾಗಾರದಲ್ಲಿ ವಿಜಯಪುರ ಮತ್ತು ಬಾಗಲಕೋಟೆ ಅವಳಿ ಜಿಲ್ಲೆಯ ವಿಶೇಷ ಸಂಪನ್ಮೂಲ ಶಿಕ್ಷಕರು ಹಾಜರಿದ್ದರು.

Be the first to comment

Leave a Reply

Your email address will not be published.


*