ಜಿಲ್ಲಾ ಸುದ್ದಿಗಳು
ಬಾಗಲಕೋಟೆ:ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯು ಯುವ ಚೈತನ್ಯ ಕಾರ್ಯಕ್ರಮದ ಅಡಿಯಲ್ಲಿ ಕೇಂದ್ರ ಕಚೇರಿಯಿಂದ ಜಿಲ್ಲೆಗೆ ಸರಬರಾಜಾದ ಕ್ರೀಡಾ ಸಾಮಗ್ರಿಗಳನ್ನು ಅರ್ಹ ಸಂಘ ಸಂಸ್ಥೆಗಳಿಗೆ ಕ್ರೀಡಾ ಕಿಟ್ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವ ಸಂಘ ಸಂಸ್ಥೆಗಳು 25 ಯುವಜನರ ಸದಸ್ಯರನ್ನಾಗಿ ಹೊಂದಿರಬೇಕು. ಇಲಾಖೆಯಿಂದ ಮಾನ್ಯತೆ ಪಡೆಯದ ಸಂಸ್ಥೆಗಳು ಸೌಲಭ್ಯ ಪಡೆಯಲು ಅರ್ಹರಿರುವದಿಲ್ಲ. ಜಿಲ್ಲಾ ಸಹಕಾರಿ ಇಲಾಖೆಯಿಂದ ನೋಂದಣಿ ಮಾಡಿದ ಬೈಲಾ ಪ್ರತಿ, ಸಂಸ್ಥೆಯ ಪದಾಧಿಕಾರಿಗಳ ಪಟ್ಟಿ, 2020-21ನೇ ಸಾಲಿನ ಲೆಕ್ಕ ಪತ್ರಗಳ ತಪಾಸಣಾ ವರದಿಯೊಂದಿಗೆ ಜನವರಿ 25 ರೊಳಗಾಗಿ ಅರ್ಜಿ ಸಲ್ಲಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಎನ್.ವಾಯ್.ಕುಂದರಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ದೂಸಂ.08354-235896, 9008338138, 9945284771ಗೆ ಸಂಪರ್ಕಿಸಬಹುದಾಗಿದೆ.
Be the first to comment